twitter
    For Quick Alerts
    ALLOW NOTIFICATIONS  
    For Daily Alerts

    ಸಿನಿಲೋಕಕ್ಕೂ ಅಧ್ಯಯನಕ್ಕೂ ಎತ್ತಣಿಂದೆತ್ತಣ ಸಂಬಂಧ

    By Super
    |

    ಇಷ್ಟೇನಾ ಜಗತ್ತು !?

    ಅನೇಕ ಸಲ ಪ್ರಸಿದ್ಧರಾದ ರಾಜಕಾರಣಿಗಳು, ಕ್ರೀಡಾಪಟುಗಳು ಹಾಗೂ ಸಿನಿಮಾ ತಾರೆಯರನ್ನು ನೋಡಿದರೆ ಹಾಗನ್ನಿಸುತ್ತದೆ. ಮಾಜಿ ಪ್ರಧಾನಿ ದೇವೇಗೌಡರನ್ನೇ ನೋಡಿ ; ದಿನದ 24 ತಾಸೂ ರಾಜಕೀಯ. ರಾಜಕಾರಣದ ಹೊರತಾಗಿ ಅವರಿಂದ ಬೇರೆ ಏನನ್ನಾದರೂ ನಿರೀಕ್ಷಿಸಲು ಸಾಧ್ಯವೇ? ರಾಜಕಾರಣ ಅವರ ಬದುಕಿನ ಒಂದಂಗವಾಗಿದೆ. ಅವರಿಗೆ ಗೊತ್ತಿಲ್ಲದಂತೆಯೇ ಅದು ಆವರಿಸಿಕೊಂಡಿದೆ. ಅವರೇ ಒಮ್ಮೆ ಹೇಳಿಕೊಂಡಂತೆ ಅವರಿಗೆ ಬೇರೆ ಏನೂ ಗೊತ್ತಿಲ್ಲ .

    ದೇವೇಗೌಡರು ಮಾತ್ರವಲ್ಲ , ಅನೇಕ ಸಿನಿಮಾ- ಕ್ರೀಡಾ ತಾರೆಗಳ ಕಥೆಯೂ ಅಷ್ಟೇ. ಎಷ್ಟೋ ಸಲ ಅವರು ಪೆದ್ದಾಗಿ ಮೊದ್ದಾಗಿ ಕಾಣುತ್ತಾರೆ. ಬಾವಿಯಾಳಗಿನ ಕಪ್ಪೆಯಂತೆ ಕಾಣಿಸಿ ಅನುಕಂಪಕ್ಕೆ ಪಾತ್ರರಾಗುತ್ತಾರೆ. ಇಂಥ ಸಂತೆಯ ನಡುವೆ ಕೆಲವು ಮಂದಿ ಅಪರೂಪದ ಉದಾಹರಣೆಗಳಂತೆ ಭಿನ್ನವಾಗಿ ಕಾಣುತ್ತಾರೆ. ಏನನ್ನಾದರೂ ಸಾಧಿಸಬೇಕು ಎನ್ನುವ ಹಪಹಪಿಕೆ ಅವರಲ್ಲಿ ಎದ್ದು ಕಾಣುತ್ತೆ . ಎಸ್ಸೆಂ.ಕೃಷ್ಣ ರಾಜಕಾರಣದ ನಡುವೆಯೂ ವಸ್ತ್ರ ವಿನ್ಯಾಸ ಮಾಡುತ್ತಾರೆಂದರೆ, ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಲೂ ಷಟಲ್‌ ತಪ್ಪಿಸಿಕೊಳ್ಳುತ್ತಿರಲಿಲ್ಲವೆಂದರೆ- ಇಂಥ ಉದಾಹರಣೆಗಳು ಅಪರೂಪ. ಅಂಥ ಬಲು ಅಪರೂಪದ ಸಾಲಿನಲ್ಲಿ ನಿಲ್ಲುವವರು ಕನ್ನಡದ ಖ್ಯಾತ ಅಭಿನೇತ್ರಿ ಜಯಮಾಲಾ.

    ಗಿರಿಕನ್ಯೆಯ ಜಯಮಾಲಾ ಯಾರಿಗೆ ಗೊತ್ತಿಲ್ಲ ?
    ಜಯಮಾಲಾ ಸಾಗಿಬಂದ ಹಾದಿಯನ್ನೇ ನೋಡಿ : ಒಂದು ಕಾಲದಲ್ಲಿ ರತಿ ವರ್ಚಸ್ಸಿನ ನಾಯಕಿ ಎನ್ನಿಸಿಕೊಂಡಿದ್ದರು. ಪ್ರಭಾಕರ್‌ ಅವರನ್ನು ಮದುವೆಯಾದ ನಂತರ ಕೆಲವು ಚಿತ್ರಗಳನ್ನೂ ನಿರ್ಮಿಸಿದರು. ಆನಂತರ ರಾಜಕಾರಣದಲ್ಲೂ ಕೈಯ್ಯಾಡಿಸಿದರು. ತಾಯಿ ಸಾಹೇಬದಂಥ ಸ್ವರ್ಣಕಮಲದ ಸಿನಿಮಾ ನಿರ್ಮಿಸಿ, ನಟಿಸಿ- ಪ್ರಶಸ್ತಿ ವಿಜೇತ ನಿರ್ಮಾಪಕಿ ಎನ್ನಿಸಿಕೊಂಡರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಗೌರವ ಕಾರ್ಯದರ್ಶಿಯಾಗಿ ಉದ್ಯಮದ ಆಗುಹೋಗುಗಳಲ್ಲಿ ಪ್ರಮುಖ ಪಾತ್ರ ವಹಿಸಿದರು. ಅದೇ ಜಯಮಾಲಾ ಈಗ ವಿದ್ಯಾರ್ಥಿನಿ!

    ಅಧ್ಯಯನದ ಆಸಕ್ತಿ ಜಯಮಾಲಾ ಅವರಲ್ಲಿ ಚಿಗುರೊಡೆದಿದೆ. ಅವರೀಗ ಡಾ.ಜಯಮಾಲಾ ಆಗುವತ್ತ ಹೆಜ್ಜೆಯಿಡುತ್ತಿದ್ದಾರೆ. ಬೆಂಗಳೂರು ವಿಶ್ವ ವಿದ್ಯಾಲಯದ ಪ್ರೊಫೆಸರ್‌ ಕೃಷ್ಣನ್‌ ಮಾರ್ಗದರ್ಶನದಲ್ಲಿ ಜಯಮಾಲಾ ಪಿಎಚ್‌ಡಿ ಅಧ್ಯಯನ ಕೈಗೊಂಡಿದ್ದಾರೆ. ವಿಷಯ- 'ನಿರ್ಗತಿಕ ಮಹಿಳೆಯರ ಪುನರ್ವಸತಿ- ಒಂದು ಅಧ್ಯಯನ".

    ಜಯಮಾಲಾ ರಾಜ್ಯಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದಿರುವ ವಿಷಯ ಬಹಳ ಮಂದಿಗೆ ಗೊತ್ತಿಲ್ಲ . ಈಗ ಅವರು ಪಿಎಚ್‌ಡಿ ಹಾದಿಯಲ್ಲಿ ಸಾಗಿದ್ದಾರೆ. ಹಾದಿ ಹೂವಾಗಲಿ. ಪೂರಕ ಓದಿಗೆ-

    English summary
    Kannada film star Jayamala is on her way to get doctorate . Now her Ph.D. Subject is orphan women and their rehabilitation
    Wednesday, July 10, 2013, 16:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X