»   » ರಮೇಶ್‌ ನಿರುದ್ಯೋಗ ನೀಗಿದ ಚಂದಾನಿ

ರಮೇಶ್‌ ನಿರುದ್ಯೋಗ ನೀಗಿದ ಚಂದಾನಿ

Subscribe to Filmibeat Kannada
  • ದಟ್ಸ್‌ಕನ್ನಡ ಬ್ಯೂರೋ
ವಿಷ್ಣುವರ್ಧನ್‌ ನಾಯಕರಾಗಲಿರುವ ಸಿನಿಮಾ ಒಂದನ್ನು ನಿರ್ದೇಶಿಸುತ್ತಾರೆ ಎಂಬ ಗಾಳಿಸುದ್ದಿಯಲ್ಲಿ ಮಾತ್ರ ಚಾಲ್ತಿಯಲ್ಲಿದ್ದ ಸ್ಫುರದ್ರೂಪಿ ನಟ ರಮೇಶ್‌ಗೆ ಕೊನೆಗೂ ಇನ್ನೊಂದು ಇನ್ನಿಂಗ್ಸ್‌ ಆಡುವ ಅವಕಾಶ ಒದಗಿಬಂದಿದೆ.

ಕರ್ನಾಟಕದಲ್ಲಿ ವಿತರಕನಾಗಿ ಹೆಸರು ಮಾಡಿರುವ ಪಾಲ್‌ ಚಂದಾನಿ ಸಿನಿಮಾ ನಿರ್ಮಾಣಕ್ಕೆ ಕೈಹಾಕುತ್ತಿದ್ದು, ನೇರವಾಗಿ ರಮೇಶ್‌ ಕಾಲ್‌ಷೀಟ್‌ ಕೇಳಿದ್ದಾರೆ. ಅಷ್ಟೇ ಅಲ್ಲದೆ ಚಿತ್ರವನ್ನೂ ನೀವೇ ನಿರ್ದೇಶಿಸಿ ಅಂತಲೂ ಕೇಳಿಕೊಂಡಿದ್ದಾರೆ. ಅದೇಕೋ ರಮೇಶ್‌ ನಿರ್ದೇಶನದ ಹೊಣೆ ಹೊರಲು ನಿರಾಕರಿಸಿದ್ದಾರೆ. ಆದರೆ ಪಾಲ್‌ ಚಂದಾನಿ ಅಂದುಕೊಂಡ ಕತೆಗೆ ಚಿತ್ರಕತೆಯ ರೂಪ ಕೊಡುವಲ್ಲಿ ರಮೇಶ್‌ ಕೂಡ ಇನ್‌ವಾಲ್ವ್‌ ಆಗಿದ್ದರಲ್ಲಿ ಕಾರಣವೂ ಉಂಟು. ರಮೇಶ್‌ ಈಗ ಜನ ಮರೆಯುವ ಹಾದಿಯಲ್ಲಿರುವ ನಟರ ಪೈಕಿ ಒಬ್ಬ ಎಂದು ಕರೆಸಿಕೊಳ್ಳುತ್ತಿದ್ದಾರೆ. ರಮೇಶ್‌ ಅಭಿನಯದ ಯಾವ ಚಿತ್ರವೂ ಇತ್ತೀಚೆಗೆ ಸದ್ದು ಮಾಡಿದ ಸಣ್ಣ ಉದಾಹರಣೆಯೂ ಇಲ್ಲ. ಪ್ರತಿಭೆಯಿದ್ದೂ, ಅದೃಷ್ಟದ ಬರ ಎದುರಿಸುತ್ತಿರುವ ರಮೇಶ್‌ ಈಗ ತಮ್ಮ ಹಣೆಬರಹವನ್ನು ತಿದ್ದಿಕೊಳ್ಳುವ ಕಾಯಕಕ್ಕೆ ಕೈಹಾಕಿದ್ದಾರೆ. ಈ ಕೆಲಸಕ್ಕೆ ಥೈಲಿ ಒದಗಿಸುತ್ತಿರುವವರು ಪಾಲ್‌ ಚಂದಾನಿ ಅನ್ನೋದು ವಿಶೇಷ.

ಚಿತ್ರದ ನಾಯಕಿಯಾಗಿ ಅನು ಪ್ರಭಾಕರ್‌ ಗೊತ್ತಾಗಿದ್ದಾರೆ. ಇನ್ನೊಬ್ಬ ಮಾಡೆಲ್‌ ಪಾತ್ರಧಾರಿ ಹುಡುಗಿಗೆ ಅನ್ವೇಷಣೆ ನಡೆದಿದೆ. ರಮೇಶ್‌- ಅನು ಚಿತ್ರದಲ್ಲಿ ಗಂಡ ಹೆಂಡತಿ. ಇವರ ನಡುವೆ ಒಬ್ಬಳು ಮಾಡೆಲ್‌ ಎಂಟ್ರಿಯಾದಾಗ ಆಗುವ ಬದಲಾವಣೆಯ ಎಳೆ ಹಿಡಿದುಕೊಂಡು ಇಡೀ ಚಿತ್ರವನ್ನು ಕಡೆಯಲಾಗಿದೆ. ಪಕ್ಕಾ ಮನರಂಜನೆ, ಭರ್ತಿ ಕಚಗುಳಿ- ಇದು ಚಿತ್ರದ ಉದ್ದೇಶ.

ಸುಮಾರು 900 ಕನ್ನಡ ಹಾಗೂ ಹಿಂದಿ ಚಿತ್ರಗಳನ್ನು ವಿತರಿಸಿರುವ ಪಾಲ್‌ ಚಂದಾನಿ 1980ರ ದಶಕದ ನಂತರ ಚಿತ್ರ ನಿರ್ಮಿಸಿರಲಿಲ್ಲ. ಈಗ ರಮೇಶ್‌ ಅವರನ್ನು ನಂಬಿ ದುಡ್ಡು ಹಾಕುತ್ತಿದ್ದಾರೆ. ಎಲ್ಲಾ ಅಂದುಕೊಂಡಂತೆ ನಡೆದರೆ ಸೆಪ್ಟೆಂಬರ್‌ 29ನೇ ತಾರೀಕು ಚಿತ್ರ ಸೆಟ್ಟೇರಲಿದೆ. ಚಿತ್ರದ ಹೆಸರು ‘ಬಿಸಿಬಿಸಿ’ !

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada