»   » ಬರ ಬಂದ ಕಾಲದ ‘ಪ್ರೇಮಾ’ಯಣ

ಬರ ಬಂದ ಕಾಲದ ‘ಪ್ರೇಮಾ’ಯಣ

Posted By:
Subscribe to Filmibeat Kannada
  • ಸಿನಿಡೆಸ್ಕ್‌, ದಟ್ಸ್‌ಕನ್ನಡ
ಪ್ರೇಮಾ ಎಲ್ಲಿ ಹೋದರು ?

ಹಾಗೆಂದು ಯಾವ ಚಿತ್ರರಸಿಕನೂ ನೆನಪಿಸಿಕೊಳ್ಳಲಿಲ್ಲ . ಏಕೆಂದರೆ ಪ್ರೇಮಾ ಅವರದು ದಿಢೀರ್‌ ಕಣ್ಮರೆಯಲ್ಲ . ಹಂತಹಂತವಾಗಿ ಕಣ್ಮರೆಯಾಗುತ್ತ , ಒಂದೆರಡು ಜಾಹಿರಾತುಗಳಲ್ಲಷ್ಟೇ ಪ್ರೇಮಾ ಉಳಿದುಕೊಂಡಿದ್ದ ರು. ಮನೆಯಲ್ಲಿ ಅಮ್ಮನ ಕೈತುತ್ತು ತಿನ್ನುತ್ತಾ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಆ ಕಾರಣದಿಂದಲೇ ಕೊಂಚ ಊದಿಕೊಂಡಿದ್ದರು. ಈ ನಡುವೆ, ಎಲ್ಲಕ್ಕೂ ಸೈ ಎನ್ನುತ್ತಾ ಪರಭಾಷಾ ಚಿಟ್ಟೆಗಳ ಹಿಂಡು ಗಾಂಧೀನಗರಕ್ಕೆ ದಾಳಿಯಿಟ್ಟಿದೆ. ಹೀಗಿರುವಾಗ ಪ್ರೇಮಾ ಎಲ್ಲಿ ಹೋದರು ಎಂದು ಚಿತ್ರರಸಿಕರು ಹೇಗೆ ಪ್ರಶ್ನಿಸಿಯಾರು ?

ಪ್ರೇಮಾ ಅವರ ಅಭಿನಯದ ‘ಆಪ್ತಮಿತ್ರ’ ಚಿತ್ರ ಬಿಡುಗಡೆಯಾದರೂ ಆಕೆ ಪ್ರಚಾರದ ಬೆಳಕಿನಲ್ಲಿ ಕೋರೈಸಲಿಲ್ಲ . ವಿಷ್ಣುಗೆ ಜೋಡಿಯಾಗಿ ನಟಿಸಿದರೂ, ಸೌಂದರ್ಯ ಪ್ರಭೆಯಿದ್ದುದರಿಂದ ಪ್ರೇಮಾ ಯಾರ ಬಾಯಲ್ಲಿಯೂ ಮಾತಾಗಲಿಲ್ಲ . ಹೀಗಾಗಿ ಆಪ್ತಮಿತ್ರ ಚಿತ್ರ ಒಂದಷ್ಟು ಒಳ್ಳೆಯ ಅವಕಾಶಗಳನ್ನು ತಂದುಕೊಡಬಹುದೆನ್ನುವ ನಿರೀಕ್ಷೆಯೂ ಹುಸಿಯಾಯಿತು.

ಪ್ರೇಮಾ ಅವರನ್ನು ಇದ್ದಕ್ಕಿದ್ದಂತೆ ನೆನಪಿಸಿಕೊಳ್ಳಲು ಕಾರಣ- ಅವರು ಹೊಸಚಿತ್ರದಲ್ಲಿ ನಟಿಸುತ್ತಿರುವುದು !

ಅದ್ಯಾವುದು ಹೊಸ ಚಿತ್ರ? ಹೀರೋ ಯಾರು ?

ಪ್ರೇಮಾ ನಟಿಸಲು ಒಪ್ಪಿಕೊಂಡಿರುವ ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ . ಚಿತ್ರದ ನಾಯಕ- ಥ್ರಿಲ್ಲರ್‌ ಮಂಜು. ಮುಂದಿನ ವಾರವೇ ಚಿತ್ರ ಸೆಟ್ಟೇರುತ್ತದಂತೆ.

ಥ್ರಿಲ್ಲರ್‌ ಮಂಜು ಜೊತೆ ನಟಿಸಲು ಪ್ರೇಮಾ ಒಪ್ಪಿಕೊಂಡಿರುವ ವಿಷಯ ತಿಳಿಯುತ್ತಿದ್ದಂತೆಯೇ ಗಾಂಧಿನಗರಕ್ಕೆ ಗಾಂಧಿನಗರವೇ ಮೂಗಿನ ಮೇಲೆ ಬೆರಳಿಟ್ಟುಕೊಂಡಿದೆ. ಒಂದಾನೊಂದು ಕಾಲದಲ್ಲಿ ಜಗ್ಗೇಶ್‌ ಜೊತೆ, ಮೊನ್ನೆ ಮೊನ್ನೆಯಷ್ಟೇ ಬಸಂತ್‌ಕುಮಾರ್‌ ಪಾಟೀಲ್‌ ಜೊತೆ ನಟಿಸಲು ಪ್ರೇಮಾ ನಿರಾಕರಿಸಿದ್ದನ್ನು ಗಾಂಧಿನಗರ ನೆನಪಿಸಿಕೊಳ್ಳುತ್ತಿದೆ.

ಪ್ರೇಮಾ ಮುಂದೇನು ? ಮದುವೆ ಯಾವಾಗ ?

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada