»   » ಅಭಿಷೇಕ್‌ ಬಚ್ಚನ್‌ಗೂ ಕರಿಷ್ಮಾ ಕಪೂರ್‌ಗೂ ಮದುವೆ

ಅಭಿಷೇಕ್‌ ಬಚ್ಚನ್‌ಗೂ ಕರಿಷ್ಮಾ ಕಪೂರ್‌ಗೂ ಮದುವೆ

Posted By: Super
Subscribe to Filmibeat Kannada

ಕರಿಷ್ಮಾ, ಅಭಿಷೇಕ್‌- ಇಬ್ಬರೂ ಮದುವೆಗೆ ಒಪ್ಪಿದ್ದಾರೆ.

ನಿಶ್ಚಿತಾರ್ಥದ ಮುಹೂರ್ತ ಇನ್ನೂ ನಿರ್ಣಯವಾಗಿಲ್ಲ. ಕರಿಷ್ಮಾ ಕಪೂರ್‌ ಚಿಕ್ಕಪ್ಪ ರಿಶಿ ಕಪೂರ್‌ ಈ ಸಂತೋಷದ ಸುದ್ದಿಯನ್ನು ಹಂಚಿಕೊಂಡರು- 'ಅಭಿಷೇಕ್‌ ಮತ್ತು ಕರಿಷ್ಮಾ ಇಬ್ಬರೂ ಹಸನಾದ ಕೆರಿಯರ್‌ ರೂಪಿಸಿಕೊಂಡಿದ್ದಾರೆ. ಇಬ್ಬರೂ ಒಬ್ಬರನ್ನೊಬ್ಬರು ಮೆಚ್ಚಿಕೊಂಡು, ಮದುವೆಯಾಗಲು ತೀರ್ಮಾನಿಸಿದ್ದಾರೆ. ದೊಡ್ಡವರೆಲ್ಲಾ ಕೂತು, ನಿಶ್ಚಿತಾರ್ಥ ಹಾಗೂ ಮದುವೆಯ ದಿನ ಗೊತ್ತು ಮಾಡುವುದೊಂದೇ ಬಾಕಿ".

ಅಂದಹಾಗೆ, ಅಮಿತಾಬ್‌ ಮಗಳು ಶ್ವೇತಾ, ರಾಜ್‌ಕಪೂರ್‌ ಪುತ್ರಿ ರೀತೂ ನಂದಾ ಮಗನನ್ನು ಮದುವೆಯಾಗಿದ್ದಾಳೆ.

ಅಭಿಷೇಕ್‌ ಮತ್ತು ಕರಿಷ್ಮಾ ಒಟ್ಟಾಗಿ ನಟಿಸಿರುವ ಚಿತ್ರ- 'ಹ್ಞಾಂ ಮೈ ಭಿ ಪ್ಯಾರ್‌ ಕಿಯಾ". ಈಗ ಇಬ್ಬರೂ ಪದೇಪದೇ ಈ ಟೈಟಲ್ಲನ್ನೇ ಜಪಿಸುತ್ತಿರಬಹುದಲ್ಲವೇ?!(ಇನ್ಫೋ ವಾರ್ತೆ)

English summary
Abhishek to be engaged to Karisma Kapoor

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada