»   » ಹಾಸ್ಯ ನಟ ಕೋಮಲ್ ಸಿಹಿಕಹಿ ದೆಸೆಯಿಂದ ನಾಯಕ!

ಹಾಸ್ಯ ನಟ ಕೋಮಲ್ ಸಿಹಿಕಹಿ ದೆಸೆಯಿಂದ ನಾಯಕ!

Posted By:
Subscribe to Filmibeat Kannada

ಹಾಸ್ಯ ನಟರು ಸ್ಯಾಂಡಲ್ ವುಡ್ ನಲ್ಲಿ ನಾಯಕರಾಗಿ ಮಿಂಚಿದ ಉದಾಹರಣೆಗಳು ಸಾಕಷ್ಟಿವೆ. ಜಗ್ಗೇಶ್ ಹೆಸರು ಈ ಸಾಲಲ್ಲಿ ಎದ್ದು ಕಾಣುತ್ತದೆ. ಹಾಸ್ಯ ನಟರು ನಾಯಕರಾಗಿ ಅಪಹಾಸ್ಯಕ್ಕೀಡಾದ ಉದಾಹರಣೆಗಳೂ ಇವೆ. ಟೆನ್ನಿಸ್ ಕೃಷ್ಣ, ಸಾಧು ಕೋಕಿಲಾ ಸೇರಿದಂತೆ ಅನೇಕ ನಟರು ಈ ಗುಂಪಿನಲ್ಲಿದ್ದಾರೆ.

ಅಣ್ಣ ಜಗ್ಗೇಶ್ ಅವರ ಹಾದಿಯಲ್ಲಿಯೇ ಸಾಗುತ್ತಿರುವ ಕೋಮಲ್, ಸದ್ಯದ ನಗೆನಟರಲ್ಲಿ ಅಗ್ರಗಣ್ಯರು. ತೆರೆ ಮೇಲೆ ಕೋಮಲ್ ಬಂದರೆ ಸಾಕು, ಪ್ರೇಕ್ಷಕರು ಮನಬಿಚ್ಚಿ ನಗುತ್ತಾರೆ. ನಿಜ ಬದುಕಿನಲ್ಲಿ ಅತಿ ಸಂಕೋಚದ ಕೋಮಲ್ ತೆರೆ ಮೇಲೆ ತಿಳಿ ಹಾಸ್ಯವನ್ನು ಚೆಲ್ಲಿ, ಚಪ್ಪಾಳೆ ಗಿಟ್ಟಿಸುತ್ತಾರೆ. ಕೋಮಲ್ ಮಾತು, ಅವರ ಭಾಷೆ, ಬಾಡಿ ಲಾಂಗ್ವೇಜ್ ಹಾಸ್ಯಕ್ಕೆ ಹೇಳಿ ಮಾಡಿಸಿದಂತಿದೆ. ಈಗವರು ನಾಯಕರಾಗಿ ಬಡ್ತಿ ಪಡೆಯುತ್ತಿದ್ದಾರೆ. 'ಜನ ನನ್ನನ್ನು ಒಪ್ಪಿದ್ದಾರೆ. ನಾನೀಗ ಖುಷಿಯಲ್ಲಿದ್ದೇನೆ. ನಾಯಕನಾಗುವ ಅವಕಾಶ ಸಿಕ್ಕಿದೆ ಪ್ರಯತ್ನಿಸೋಣ'ಎಂಬುದು ಕೋಮಲ್ ಮಾತು.

ಸಿಹಿಕಹಿ ಚಂದ್ರು ನಿರ್ದೇಶನ ಮತ್ತು ನಿರ್ಮಾಣದ ಹೊಸ ಚಿತ್ರದಲ್ಲಿ ಕೋಮಲ್ ನಾಯಕ. ಜ.21ರಂದು ಚಿತ್ರ ಸೆಟ್ಟೇರಲಿದೆ. ಪಾಪಾ ಪಾಂಡು, ಸಿಲ್ಲಿಲಲ್ಲಿ ಧಾರಾವಾಹಿಗಳ ಮುಖಾಂತರ ಕಿರುತೆರೆ ಪ್ರೇಕ್ಷಕರಿಗೆ ಕಚಗುಳಿಯಿಟ್ಟ ಸಿಹಿಕಹಿ ಚಂದ್ರು, ಬೆಳ್ಳಿತೆರೆ ಮೇಲೆ ಕಣ್ಣಿಟ್ಟಿದ್ದಾರೆ.

ಗಾಂಧಿ ನಗರದಲ್ಲಿ ಹತ್ತಾರು ವರ್ಷ ಸೈಕಲ್ ತುಳಿದಿದ್ದಕ್ಕೆ ಕೊನೆಗೂ ಕೋಮಲ್ ಅವರಿಗೆ ಫಲ ಸಿಕ್ಕಿದೆ. ಅವರ ಪ್ರತಿಭೆಗೆ ರಾಜ್ಯ ಪ್ರಶಸ್ತಿ ಈಗಾಗಲೇ ಸಂದಾಯವಾಗಿದೆ. ತಮ್ಮ ಅಣ್ಣನ ಹ್ಯಾಂಗೋವರ್ ನಿಂದ ಹೊರಬಂದು, ತಮ್ಮದೇ ಆದ ಶೈಲಿಯನ್ನು ಕೋಮಲ್ ರೂಢಿಸಿಕೊಂಡಿದ್ದಾರೆ. ಅವರ ಚಿತ್ರ ಯಾತ್ರೆ ಮುಂದುವರೆಯಲಿ.

(ದಟ್ಸ್ ಕನ್ನಡ ಸಿನಿ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada