»   » ಇನ್ನು ಮುಂದೆ ಮ್ಯೂಸಿಕ್‌ ಆಲ್ಬಂಗಳಿಗೂ ಸೆನ್ಸಾರ್‌ ಕಡ್ಡಾಯ

ಇನ್ನು ಮುಂದೆ ಮ್ಯೂಸಿಕ್‌ ಆಲ್ಬಂಗಳಿಗೂ ಸೆನ್ಸಾರ್‌ ಕಡ್ಡಾಯ

Posted By:
Subscribe to Filmibeat Kannada

ಮುಂಬಯಿ : ಇನ್ನು ಮುಂದೆ ಸಂಗೀತ ವಿಡಿಯೋಗಳು ಕೂಡ ಸೆನ್ಸಾರ್‌ ಆಗಿಯೇ ಟಿವಿಯಲ್ಲಿ ಪ್ರದರ್ಶಿತವಾಗಲಿವೆ ಎಂದು ಸೆನ್ಸಾರ್‌ ಮಂಡಳಿ ಅಧ್ಯಕ್ಷ ಅನುಪಮ್‌ ಖೇರ್‌ ಹೇಳಿದ್ದಾರೆ.

ವಾರ್ತಾ ಮತ್ತು ಪ್ರಸಾರ ಇಲಾಖೆ ಈ ಮಹತ್ವದ ನಿರ್ಣಯ ಕೈಗೊಂಡಿದ್ದು, ದೇಶಾದ್ಯಂತ ಎಲ್ಲಾ ಟೀವಿ ಚಾನೆಲ್ಲುಗಳಲ್ಲಿ ಯಾವುದೇ ಹಾಡು ಬಿತ್ತರವಾಗುವ ಮುನ್ನ ಅದು ಸೆನ್ಸಾರ್‌ ಆಗಬೇಕಾದ್ದು ಕಡ್ಡಾಯ. ಸದ್ಯದಲ್ಲಿಯೇ ಈ ಕುರಿತು ವಾರ್ತಾ ಮತ್ತು ಪ್ರಸಾರ ಇಲಾಖೆ ಆದೇಶ ಹೊರಡಿಸಲಿದೆ ಎಂದು ಖೇರ್‌ ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಟೀವಿ ಮಾಧ್ಯಮವನ್ನು ಕೂಡ ಸಿನಿಮಾಟೋಗ್ರಫರ್ಸ್‌ ಕಾಯ್ದೆಯಡಿ ತರುವಂತೆ ವಾರ್ತಾ ಮತ್ತು ಪ್ರಸಾರ ಇಲಾಖೆಗೆ ತಾವು ಶಿಫಾರಸ್ಸು ಮಾಡಿರುವುದಾಗಿ ಹೇಳಿದ ಅನುಪಮ್‌ ಖೇರ್‌, ಟೀವಿಯನ್ನು ಕುಟುಂಬದ ಎಲ್ಲ ಮಂದಿ ಕೂತು ನೋಡುತ್ತಾರೆ. ಚಾನೆಲ್ಲುಗಳ ಕಾರ್ಯಕ್ರಮದ ಸ್ವಾಸ್ಥ್ಯಬಹಳ ಮುಖ್ಯವಾಗುತ್ತದೆ. ಆದರೆ ತೀರಾ ಅಶ್ಲೀಲ ಹಾಡುಗಳು ಕೂಡ ಬಲು ಸುಲಭವಾಗಿ ಚಾನೆಲ್ಲುಗಳಲ್ಲಿ ಪ್ರಸಾರವಾಗುತ್ತಿದ್ದು, ಸಾಂಸ್ಕೃತಿಕ ಆಘಾತವಾಗುತ್ತಿದೆ. ಈ ಕಾರಣಕ್ಕೆ ಹಾಡುಗಳನ್ನು ಕೂಡ ಸೆನ್ಸಾರ್‌ ಮಾಡುವ ನಿರ್ಣಯ ಕೈಗೊಳ್ಳಲಾಯಿತು ಎಂದರು.

ಇತ್ತೀಚೆಗೆ ಮ್ಯೂಸಿಕ್‌ ವಿಡಿಯೋಗಳ ಭರಾಟೆ ಹೆಚ್ಚಾಗಿದ್ದು, ಇವುಗಳು ಟೀವಿ ಚಾನೆಲ್‌ನಲ್ಲಿ ಬಿತ್ತರವಾಗಿ, ಸಾಕಷ್ಟು ಜನಪ್ರಿಯವೂ ಆಗುತ್ತಿವೆ. ಆದರೆ ಇವುಗಳ ಅಶ್ಲೀಲತೆಗೆ ಕಡಿವಾಣ ಹಾಕುವ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಅದಕ್ಕೆ ವಾರ್ತಾ ಮತ್ತು ಪ್ರಸಾರ ಇಲಾಖೆ ಸ್ಪಂದಿಸಿದೆ.

(ಏಜೆನ್ಸೀಸ್‌)

ಮ್ಯೂಸಿಕ್‌ ಆಲ್ಬಂಗಳಿಗೆ ಸೆನ್ಸಾರ್‌ ಬೇಕಾ ? ಬೇಡವಾ ?


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada