»   » ಮಾಧುರಿ ದೀಕ್ಷಿತ್‌ಗಾಗಿ ಮಿಡಿವ ಹುಸೇನ್‌ ಹೃದಯ!

ಮಾಧುರಿ ದೀಕ್ಷಿತ್‌ಗಾಗಿ ಮಿಡಿವ ಹುಸೇನ್‌ ಹೃದಯ!

Posted By: Super
Subscribe to Filmibeat Kannada

ಮಕ್ಬೂಲ್‌ ಫಿದಾ ಹುಸೇನ್‌ ಗೊತ್ತಲ್ಲ ? ಅದೇರಿ ಎಂ.ಎಫ್‌. ಹುಸೇನ್‌ : ಸರಸ್ವತಿ ಚಿತ್ರ ಅಶ್ಲೀಲವಾಗಿ ಚಿತ್ರಿಸಿದ್ದಾರೆಂದು ಹಿಂದೂವಾದಿಗಳ ಕೋಪಕ್ಕೆ ಗುರಿಯಾದವರು, 'ಗಜಗಾಮಿನಿ" ಚಿತ್ರದ ಮೂಲಕ ಮಾಧುರಿಯ ಅಭಿಮಾನಿಯಾದವರು, ಇಳಿವಯಸ್ಸಿನಲ್ಲೂ ಕೋಟಿ ಕೋಟಿ ರುಪಾಯಿಗಳ ಕಲಾಕೃತಿಗಳ ಕಾಂಟ್ರಾಕ್ಟ್‌ ಪಡೆಯುವವರು, ಅಭಿವ್ಯಕ್ತಿ-ಸ್ವಾತಂತ್ರ್ಯ ಎಂದೆಲ್ಲ ಮಾತನಾಡುವವರು! ಹೌದು, ಇದೇ ಹುಸೇನಜ್ಜನ ಕುರಿತದ್ದೇ ಇದು ಸುದ್ದಿ.

ಹುಸೇನಜ್ಜ ಇತ್ತೀಚೆಗೆ ಹೋದಲ್ಲೆಲ್ಲ ಏನು ಮಾತನಾಡುತ್ತಾರೆ ಗೊತ್ತಾ ? ಅಂತರರಾಷ್ಟ್ರೀಯ ಖ್ಯಾತಿಯ ಚಿತ್ರಕಾರ ಕಲೆಯ ಬಗೆಗಲ್ಲದೆ ಇನ್ನೇನು ಮಾತನಾಡುತ್ತಾರೆ ಎಂದಿರಾದರೆ ನಿಮ್ಮ ಊಹೆ ತಪ್ಪು . ಅಜ್ಜನ ಮನಸ್ಸಿನ ತುಂಬೆಲ್ಲ 'ಗಜಗಾಮಿನಿ"ಯೇ ಆವರಿಸಿರುವಾಗ ಅವರು ಬೇರೆ ಮಾತನಾಡುವುದಾದರೂ ಹೇಗೆ? ಮಾಧುರಿಯ ಅಂದಚಂದ, ಹಾವಭಾವ, ಮನಸ್ಸು-ಪ್ರತಿಭೆ ಹೀಗೆ ಹುಸೇನಜ್ಜನಿಗೆ ಎಷ್ಟು ಮಾತನಾಡಿದರೂ ತೃಪ್ತಿಯಿಲ್ಲ .

ಮೊನ್ನೆ ಲಾಹೋರ್‌ನಲ್ಲಿ ನ ರಾಷ್ಟ್ರೀಯ ಕಲಾ ವಿದ್ಯಾಲಯದಲ್ಲಿ ಪ್ರದರ್ಶನವೊಂದನ್ನು ಉದ್ಘಾಟಿಸಿ ಮಾತನಾಡಿದ ಹುಸೇನಜ್ಜನ ಮಾತಿನಲ್ಲಿ ಯಥಾ ಪ್ರಕಾರ ಮಾಧುರಿಗೇ ಅಗ್ರಸ್ಥಾನ! ಹಾಗೆಂದು ಡೈಲಿ ಟೈಮ್ಸ್‌ ವರದಿ ಮಾಡಿದೆ.

ಮಾಧುರಿ ದೀಕ್ಷಿತ್‌ ಒಬ್ಬ ಅದ್ಭುತ ನಟಿ. ತೆರೆಯ ಮೇಲಿನ ಆಕೆಯ ಪ್ರದರ್ಶನ ಅನೂಹ್ಯವಾದುದು. ಹಾಗೆಂದು ಉದ್ಘರಿಸುವಾಗ ಚಿತ್ರಕಾರನ ಕಣ್ಣುಗಳಲ್ಲಿ ನೂರೆಂಟು ಬಣ್ಣ .

ಮಾಧುರಿಯ ಆಕರ್ಷಣೆ ಆಕೆಯ ಸೌಂದರ್ಯದಲ್ಲಷ್ಟೇ ಇಲ್ಲ . ಆಕೆ ಬುದ್ಧಿವಂತೆಯೂ ಹೌದು. ಎದುರಿನವರಲ್ಲಿ ಸ್ಫೂರ್ತಿ ಮೂಡಿಸುವಷ್ಟು ಪ್ರಖರವಾದ ಬುದ್ಧಿಮತ್ತೆ ಆಕೆಯದು. ಆಕೆಯ ವ್ಯಕ್ತಿತ್ವವೋ, ಅದೊಂದು ವೈವಿಧ್ಯದ ಪುತ್ಥಳಿ! ಹುಸೇನ್‌ ಬಾಯಿತುಂಬಾ ಹೊಗಳಿದರು.

ನಟಿ ್ಫಮಾಧುರಿಯನ್ನು ಮನತುಂಬಿ ಹುಸೇನಜ್ಜ ಹೊಗಳುತ್ತಿದ್ದರೆ, ನೆರೆದವರೆಲ್ಲ ಬೆಕ್ಕಸಬೆರಗು. ಮಾಧುರಿಯ ಕಟ್ಟಾ ಅಭಿಮಾನಿಗಳೂ ಹುಸೇನಜ್ಜನ ಎದುರು ಸೋಲೊಪ್ಪಿಕೊಂಡವರಂತಿದ್ದರು. ಉತ್ಕಟ ಅಭಿಮಾನ ಎಂದರೆ ಇದೇನಾ?

(ಏಜನ್ಸೀಸ್‌)

English summary
MF Hussains heart still beats for Madhuri

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada