»   » ‘ಲಂಚ ಸಾಮ್ರಾಜ್ಯ’ದಲ್ಲಿ ಮಾಜಿ ಲೋಕಾಯುಕ್ತ ವೆಂಕಟಾಚಲ!

‘ಲಂಚ ಸಾಮ್ರಾಜ್ಯ’ದಲ್ಲಿ ಮಾಜಿ ಲೋಕಾಯುಕ್ತ ವೆಂಕಟಾಚಲ!

Subscribe to Filmibeat Kannada


ವಿಶ್ರಾಂತ ಲೋಕಾಯುಕ್ತ ಎನ್‌.ವೆಂಕಟಾಚಲ, ಭ್ರಷ್ಟಾಚಾರದ ವಿರುದ್ಧ ಮತ್ತೆ ತಮ್ಮ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ! ಆದರೆ ನಿಜ ಬದುಕಿನಲ್ಲಲ್ಲ ಬೆಳ್ಳಿತೆರೆಯ ಮೇಲೆ.

ವೆಂಕಟಚಲ ಲೋಕಾಯುಕ್ತರಾಗಿ ಅಭಿನಯಿಸಿರುವ ‘ಲಂಚ ಸಾಮ್ರಾಜ್ಯ’ ಸಿನಿಮಾ ಸಿದ್ಧಗೊಂಡಿದ್ದು, ಡಿಸೆಂಬರ್‌ ಎರಡನೇ ವಾರ ಅಥವಾ ಮುಂದಿನ ಸಂಕ್ರಾಂತಿ ವೇಳೆಗೆ ಬಿಡುಗಡೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ವೆಂಕಟಾಚಲ, ಚಲನಚಿತ್ರ ನಿಜಕ್ಕೂ ಪರಿಣಾಮಕಾರಿ ಮಾಧ್ಯಮ. ಜನರಲ್ಲಿ ಅರಿವು ಮೂಡಿಸಲು ಮಾಧ್ಯಮವನ್ನು ಬಳಸಿಕೊಳ್ಳಬೇಕಾಗಿದೆ ಎಂದರು.

ನನಗೆ ನಟನೆಯಲ್ಲಿ ಆಸಕ್ತಿಯಿಲ್ಲ. ಈ ಚಿತ್ರದ ವಸ್ತು ಇಷ್ಟವಾದದ್ದರಿಂದ, ನಟಿಸಿದೆ. ಭ್ರಷ್ಟಾಚಾರದ ವಿರುದ್ಧ ಸಾರ್ವಜನಿಕರನ್ನು ಜಾಗೃತಗೊಳಿಸಲು ವಿಶ್ರಾಂತ ಬದುಕಿನ ದಿನಗಳನ್ನು ಬಳಸಿಕೊಳ್ಳುತ್ತೇನೆ. ಉಪನ್ಯಾಸ ಮತ್ತಿತರ ಚಟುವಟಿಕೆಗಳ ಮೂಲಕ ಪ್ರಯತ್ನ ಮುಂದುವರೆಯಲಿದೆ ಎಂದು ವೆಂಕಟಾಚಲ ಹೇಳಿದರು.

ಚಿತ್ರದ ಬಗ್ಗೆ ಮಾಹಿತಿ ಒದಗಿಸಿರುವ ನಿರ್ದೇಶಕ ಬೂದಾಳ್‌ ಕೃಷ್ಣಮೂರ್ತಿ, ಆಸ್ಪತ್ರೆ ಸೇರಿದಂತೆ ವಿವಿಧೆಡೆ ವೆಂಕಟಾಚಲ ನಡೆಸಿದ ದಾಳಿಗಳನ್ನು, ಭ್ರಷ್ಟರ ವಿರುದ್ಧದ ಹೋರಾಟವನ್ನು ಚಿತ್ರದಲ್ಲಿ ಬಿಂಬಿಸಲಾಗಿದೆ. ಬೆಂಗಳೂರಿನ ಲೋಕಾಯುಕ್ತ ಕಚೇರಿಯಲ್ಲಿ ಚಿತ್ರೀಕರಣ ನಡೆಸಿರುವುದು, ವೆಂಕಟಾಚಲ ಅಭಿನಯಿಸಿರುವುದು ಚಿತ್ರದ ಪ್ಲಸ್‌ ಪಾಯಿಂಟ್‌ ಎಂದು ಆಭಿಪ್ರಾಯಪಟ್ಟಿದ್ದಾರೆ.

ಆರೋಗ್ಯ ಇಲಾಖೆ ಉದ್ಯೋಗಿ ತುಮಕೂರಿನ ಮಹದೇವಪ್ಪ ಚಿತ್ರದ ನಿರ್ಮಾಪಕರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada