»   » ಪೂರಿ-ರಕ್ಷಿತಾ ನಂಟಲಿ ಏನೋ ಇದೆ?

ಪೂರಿ-ರಕ್ಷಿತಾ ನಂಟಲಿ ಏನೋ ಇದೆ?

Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

ರಕ್ಷಿತಾ ಎನ್ನುವ ಹದಿಹರೆಯದ ಕನ್ನಡದ ಹುಡುಗಿ ತೆಲುಗು ಚಿತ್ರನಗರಿಯಲ್ಲಿ ಕಳೆದುಹೋದಳು ಎಂದುಕೊಳ್ಳುತ್ತಿರುವಾಗ್ಗೆ , ಆಕೆಯ ಮೂರು ಕನ್ನಡ ಚಿತ್ರಗಳು ತೆರೆಗೆ ಬರಲು ಸಿದ್ಧತೆ ನಡೆಸಿವೆ. ಉಪೇಂದ್ರ ಅಭಿನಯದ ‘ಗೋಕರ್ಣ’ , ವಿಜಯ ರಾಘವೇಂದ್ರನೊಂದಿಗಿನ ‘ವಿಜಯಸಿಂಹ’ ಹಾಗೂ ಆದಿತ್ಯನೊಂದಿಗಿನ ‘ಲವ್‌’ಗಳಲ್ಲಿ ರಕ್ಷಿತಾ ನಾಯಕಿ. ಗೋಕರ್ಣ ಹಾಗೂ ಲವ್‌ ಚಿತ್ರಗಳು ಗಾಂಧಿನಗರದಲ್ಲಿ ಅಪಾರ ನಿರೀಕ್ಷೆ ಹುಟ್ಟಿಸಿರುವುದರಿಂದ, ರಕ್ಷಿತಾಗೆ ಇನ್ನಷ್ಟು ಒಳ್ಳೆಯ ಅವಕಾಶಗಳು ಸಿಗುವ ನಿರೀಕ್ಷೆಯೂ ಇದೆ.

ಅಂತೂ ಇಂತೂ ರಕ್ಷಿತಾ ಕನ್ನಡದಲ್ಲಿ ನೆಲೆ ಕಂಡಳು ಎಂದು ಅಭಿಮಾನಿಗಳು ಖುಷಿ ಖುಷಿ ಪಡುತ್ತಿರುವಾಗ, 2004ನೇ ಇಸವಿ ಈ ಹುಡುಗಿಯದೇ ಎಂದು ಗಾಂಧಿನಗರ ಮೂಗಿನ ಮೇಲೆ ಬೆರಳಿಡುತ್ತಿರುವಾಗ, ನೆರೆಯ ತೆಲುಗು ನೆಲದಿಂದ ರಕ್ಷಿತಾಳ ಕುರಿತ ರಂಗುರಂಗು ಸುದ್ದಿಯಾಂದು ಹೊರಬಿದ್ದು , ಬೆಂಗಳೂರಿನ ದಟ್ಸ್‌ಕನ್ನಡ ಕಚೇರಿವರೆಗೂ ತಲುಪಿದೆ. ನಿರ್ದೇಶಕ ಪೂರಿ ಜಗನ್ನಾಥ್‌ ಹಾಗೂ ರಕ್ಷಿತಾ ನಡುವಿನ ನಂಟಲಿ ಅದೇನೋ ಇದೆ, ಎನ್ನುವುದೇ ಆ ಪಿಸುಗುಸು!

ಪೂರಿಯ ಬಹುತೇಕ ಚಿತ್ರಗಳಲ್ಲಿ ರಕ್ಷಿತಾಗೊಂದು ಖಾಯಂ ಪಾತ್ರವಿರುವುದೇ ಈ ಗುಲ್ಲಿಗೆ ಕಾರಣ. ತೆಲುಗಿನಲ್ಲಿ ಕೈತುಂಬಾ ಅವಕಾಶಗಳಿವೆ ಎಂದು ಸ್ವತಃ ರಕ್ಷಿತಾ ಕನ್ನಡ ಪತ್ರಕರ್ತರಲ್ಲಿ ಹೇಳಿಕೊಂಡರೂ, ಆಕೆಗೆ ಅವಕಾಶಗಳಿರುವುದು ಪೂರಿ ಚಿತ್ರಗಳಲ್ಲಿ ಮಾತ್ರ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಅಂದಹಾಗೆ, ಅದೇನಿದು ಈ ನಂಟು, ಅಂಟಂಟಂಟು ?

ಸದ್ಯಕ್ಕೆ ತೆಲುಗು ಚಿತ್ರರಂಗದಲ್ಲಿ ಪೂರಿ ಚಿನ್ನದ ಮೊಟ್ಟೆಯಿಡುವ ಕೋಳಿ. ಆತ ಮುಟ್ಟಿದ್ದೆಲ್ಲ ಬಂಗಾರ. ಈ ಸುರ ಸುಂದರಾಂಗ ಪೂರಿ ಜಗನ್ನಾಥ್‌ಗೆ ಇನ್ನೊಬ್ಬ ನಿರ್ದೇಶಕ ರಾಂಗೋಪಾಲ್‌ ವರ್ಮಾ ಅಂದರೆ ಒಂಥರಾ ಸೆಂಟಿಮೆಂಟು. ಪೂರಿ ಪಾಲಿಗೆ ವರ್ಮಾ ದ್ರೋಣಾಚಾರ್ಯರಿದ್ದಂತೆ. ವರ್ಮಾ ಮಟ್ಟಕ್ಕೆ ಬೆಳೆಯಬೇಕೆನ್ನುವುದು ಪೂರಿ ಕನಸು. ಉಳಿದ ವಿಷಯಗಳಲ್ಲಿ ಹೇಗೋ ಏನೋ, ಹಿರೋಯಿನ್‌ ಮಟ್ಟಿಗೆ ಮಾತ್ರ ಪೂರಿ ತಮ್ಮ ಗುರುವನ್ನು ಅನುಸರಿಸುತ್ತಿದ್ದಾರೆ. ಗುರುವಿಗೆ ತಕ್ಕ ಶಿಷ್ಯ.

ವರ್ಮಾಗೆ ಊರ್ಮಿಳಾ ಮಾತೋಂಡ್ಕರ್‌ ಅಂದರೆ ಒಂಥರಾ ಹುಚ್ಚು . ಆತನ ಬಹುತೇಕ ಚಿತ್ರಗಳಲ್ಲಿ ಬಡ ನಡುವಿನ ಊರ್ಮಿಳಾ ನಾಯಕಿ. ಅದೇರೀತಿ, ಪೂರಿ ಕೂಡ ನಾಯಕಿಯಾಬ್ಬಳಿಗೆ ಗಂಟು ಬಿದ್ದಿದ್ದಾರೆ. ಆ ಅದೃಷ್ಟವಂತೆ ರಕ್ಷಿತಾ.

ಪೂರಿ ಜಗನ್ನಾಥ್‌ರ ಮೊದಲ ಕನ್ನಡ ಚಿತ್ರ ‘ಅಪ್ಪು’ವಿನಿಂದ ಪ್ರಾರಂಭವಾದ ರಕ್ಷಿತಾ ಜೊತೆಗಿನ ನಂಟು ಈವರೆಗೂ ಅಂಟು ಕಳಕೊಂಡದ್ದಿಲ್ಲ . ‘ಈಡಿಯೆಟ್‌’ (ಅಪ್ಪುವಿನ ತೆಲುಗು ಅವತರಣಿಕೆ), ‘ಅಮ್ಮ ನಾನ್ನ ಓ ತಮಿಳ ಅಮ್ಮಾಯಿ’, ‘ಶಿವಮಣಿ’, ‘ಆಂಧ್ರಾವಾಲಾ’ಗಳಲ್ಲೂ ನಿರ್ದೇಶಕ-ಹೀರೋಯಿನ್‌ ಜೋಡಿ ಮುಂದುವರೆದಿರುವುದನ್ನು ತೆಲುಗು ಮಂದಿ ಬೆಟ್ಟು ಮಾಡಿ ತೋರಿಸುತ್ತಿದ್ದಾರೆ. ಇಷ್ಟರಲ್ಲೇ ಚಿರಂಜೀವಿ ಅವರ ಚಿತ್ರವೊಂದನ್ನು ಪೂರಿ ನಿರ್ದೇಸುತ್ತಾರಂತೆ, ಈ ಚಿತ್ರದ ನಾಯಕಿಯರಲ್ಲಿ ರಕ್ಷಿತಾ ಒಬ್ಬಳಂತೆ ಎನ್ನುವ ಸುದ್ದಿಯೂ ಚಾಲ್ತಿಯಲ್ಲಿದೆ ?

ಪ್ರತಿ ಕ್ರಿಯಾಶೀಲ ವ್ಯಕ್ತಿಗೂ ಒಂದು ಸ್ಫೂರ್ತಿಯ ಸೆಲೆ ಇರುತ್ತದಲ್ಲವಾ ? ಬಹುಶಃ, ಪೂರಿ ಪಾಲಿನ ಸ್ಫೂರ್ತಿಯ ಸರೋವರ ರಕ್ಷಿತಾಳೇ ಇರಬಹುದಾ! ಹೌದೂಂತ ತೆಲುಗು ಚಿತ್ರರಂಗದಲ್ಲಿ ಗುಲ್ಲೋ ಗುಲ್ಲು . ಸುದ್ದಿಯ ಸತ್ಯಾಸತ್ಯ ಅದೇನೇ ಇರಲಿ, ಪೂರಿ ಕೂಡ ಸುಂದರಾಂಗ ಎನ್ನುವುದಂತೂ ಸತ್ಯ.

ತೆಲುಗು ನೆಲದಲ್ಲಿ ಈ ಪಾಟಿ ಗಾಸಿಪ್ಪು ಹಬ್ಬಿಕೊಂಡಿದ್ದರೆ, ಇಲ್ಲಿ , ‘ಗೋಕರ್ಣ’ ಚಿತ್ರದಲ್ಲಿ ನಾನು ಚೆನ್ನಾಗಿ ಕಾಣುತ್ತೇನಾ? ಹಾಡುಗಳು ಎಷ್ಟು ಚೆನ್ನಾಗಿವೆ ಗೊತ್ತಾ ? ನನ್ನ ಹೊಸ ಚಿತ್ರಕ್ಕೆ ಫೋಟೊ ಸೆಷನ್‌ ಮಾಡಿಸಬೇಕು... ಮುಂತಾಗಿ ರಕ್ಷಿತಾ ಸುದ್ದಿಗಾರರೊಂದಿಗೆ ಹರಟುತ್ತಾರೆ. ಹುಡುಗಿ ಬಲು ‘ಜಾಣೆ’ !

Post your views

ಪೂರಕ ನೋಟ-
ರಕ್ಷಿತಾ ಫೋಟೊಗ್ಯಾಲರಿ
ಸಂಗೀತಗಾರನೆ ನನ್ನ ಗಂಡ - ರಕ್ಷಿತಾ


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada