twitter
    For Quick Alerts
    ALLOW NOTIFICATIONS  
    For Daily Alerts

    ರಾಜ್‌ಕುಮಾರ್‌ ಅವರ 72ನೆಯ ಹುಟ್ಟುಹಬ್ಬಕ್ಕೆ 72 ಕೇಜಿ ತೂಕದ ಕೇಕ್‌, ಆದರೆ ಅಣ್ಣಾವ್ರ ಪುತ್ರ ಶಿವಣ್ಣನ 39ನೆಯ ಹುಟ್ಟು ಹಬ್ಬಕ್ಕೆ ಬರೀ 3.9 ಕೇಜಿ ಕೇಕ್‌. ಇವೆರಡು ಹುಟ್ಟು ಹಬ್ಬಗಳನ್ನು ಆಯೋಜಿಸಿದ್ದು ದಕ್ಷಿಣ ವಲಯ ರಾಜ್‌ಕುಮಾರ್‌ ಅಭಿಮಾನಿಗಳ ಸಂಘವೇ ಆಗಿದ್ದರೂ ಏಕಿಂಥ ತಾರತಮ್ಯ ? ಶಿವಣ್ಣ ಂಗೆ 39 ವರ್ಷವಾಗಿದ್ದರೂ ನಮ್ಮ ಪಾಲಿಗೆ ಅವರು ಇನ್ನೂ ಮಗು ಥರಾನೇ. ಅದಕ್ಕೇ 10 ವರ್ಷಕ್ಕೆ ಒಂದು ಕೇಜಿ ತೂಕದಂತೆ 39 ವರ್ಷಕ್ಕೆ 3.9 ಕೇಜಿ ಅಂತಾರೆ ಅಭಿಮಾನಿಗಳು. 39ರ ಹೊಸಿಲಿನಲ್ಲಿರುವ ಮಗುವಿನ ಹುಟ್ಟುಹಬ್ಬಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳ ಮಹಾ ಪೂರವೇ ಹರಿದು ಬಂದಿತ್ತು. ಚಿಕ್ಕಮಗಳೂರು, ಹಾಸನ, ಮಂಡ್ಯ, ಬಿಜಾಪುರ, ಬಳ್ಳಾರಿ, ಹೊಸ ಪೇಟೆ, ಕೊಳ್ಳೇಗಾಲ, ಮೊದಲಾದ ಊರುಗಳಿಂದ ಜನ ಮೆಟಡಾರ್‌, ಕಾರು, ಟೆಂಪೋಗಳಲ್ಲಿ ಬಂದು ಮುಂಜಾನೆ 6 ಗಂಟೆಗೇ ಸದಾಶಿವ ನಗರದ ಮನೆ ಮುಂದೆ ಕ್ಯೂ ನಿಂತಿದ್ದರು. ಶಿವರಾಜ್‌ ಕುಮಾರ್‌ 39ನೆಯ ಹುಟ್ಟುಹಬ್ಬಕ್ಕೆ ಡೆಲ್ಲಿ , ಅಮೆರಿಕಾ, ಹೈದರಾಬಾದ್‌ನಿಂದ ಫೋನ್‌ ಮೂಲಕ ಶುಭ ಸಂದೇಶಗಳೂ ಬಂದಿದ್ದವಂತೆ. ಮುಂಜಾನೆ ಬಸವನಗುಡಿಯ ಗಣೇಶನಗುಡಿಯಲ್ಲಿ ಶಿವಣ್ಣನಿಗೆ ಆಯುರಾರೋಗ್ಯ ಕೋರುವ ಸಲುವಾಗಿ ವಿಶೇಷ ಪೂಜೆಗಳೂ ನಡೆದವು. ಅಭಿಮಾನಿ ಬಳಗದವರು ತಿಲಕನಗರದಲ್ಲಿರುವ ಲವಕುಶ ವಾಲ್ಮೀಕಿ ಆಶ್ರಮದ ಬಡ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಂಚಿದರು. ಸಂಜೆ ಶಿವರಾಜ್‌ ಮನೆ ಮುಂದೆ ಕೇಕ್‌ ಕತ್ತರಿಸುವ ಕಾರ್ಯಕ್ರಮ. ಶಿವರಾಜ್‌ ತಮ್ಮ ಹುಟ್ಟುಹಬ್ಬವನ್ನು ಸಾರ್ವಜನಿಕವಾಗಿ ಆಚರಿಸಿಕೊಳ್ಳುತ್ತಿರುವುದು ಇದೇ ಮೊದಲು. ಈ ರೀತಿ ಸಾರ್ವಜನಿಕವಾಗಿ ಹುಟ್ಟುಹಬ್ಬದಾಚರಣೆ ನನಗೆ ಎಳ್ಳಷ್ಟೂ ಇಷ್ಟವಾಗುವುದಿಲ್ಲ ಎಂದು ಹೇಳಿದ ಶಿವರಾಜ್‌ ಅಭಿಮಾನಿಗಳ ಪ್ರೀತ್ಯರ್ಥ ನಾನು ಒಪ್ಪಿಕೊಂಡೆ. ಈ ಪ್ರೀತಿ ವಿಶ್ವಾಸ ಹೀಗೆ ಮುಂದುವರೆಯಲಿ ಎಂದು ಎರಡು ಮಾತಾಡಿದರು. ಅವರು ಹಾಗನ್ನುವ ಹೊತ್ತಿಗೆ ಮನೆ ಮುಂದಿನ ರಸ್ತೆ ಹೂವಿನಿಂದ, ಬೆಳಕಿನಿಂದ ಅಲಂಕಾರಗೊಂಡಿತ್ತು. ಮಾತು ಮುಗಿದಾಕ್ಷಣ ತಲಾ ಐದರಂತೆ ಅಭಿಮಾನಿಗಳು ಗುಂಪು ಗುಂಪಾಗಿ ಒಳಗೆ ಬಂದು ತಮ್ಮ ದೈವಕ್ಕೆ ನಮಿಸಿದರು. ಅಪ್ಪಿಕೊಳ್ಳುವುದು, ಕಾಲಿಗೆ ಬೀಳುವುದು, ಚುಂಬಿಸುವುದು, ಕೈ ಕುಲುಕುವುದು ಮೊದಲಾದ ಬಾಡಿ ಲಾಂಗ್ವೇಜ್‌ಗಳ ಜೊತೆಗೆ ಹಾರಾರ್ಪಣೆಯೂ ಆಯಿತು. 39 ಕೇಜಿ ತೂಕದ ಮಲ್ಲಿಗೆ ಹಾರದಿಂದ ಹಿಡಿದು ಗುಲಾಬಿ ಹಾರದ ತನಕ. ಅನಂತರ ಹಂಗರಹಳ್ಳಿಯಲ್ಲಿ ಜೀತ ವಿಮುಕ್ತರಾದ ಕುಟುಂಬಗಳಿಗೆ 5 ಸಾವಿರ ಮತ್ತು ಬಡ ವಿದ್ಯಾರ್ಥಿಗಳ ನಿಧಿಗೆ 5 ಸಾವಿರ ರೂಪಾಯಿಯ ಕಾಣಿಕೆಯನ್ನು ಅಭಿಮಾನಿಗಳ ಸಂಘದ ವಕ್ತಾರರು ನೀಡಿದರು. ಅವೆಲ್ಲಕ್ಕೂ ಸಾಕ್ಷಿಯಾಗಿ ನಿಂತಿದ್ದ ಶಿವರಾಜ್‌ ಅನಂತರ ಮನೆಯಾಳಗೆ ಬಂದು ಮಾಧ್ಯಮಗಳೊಂದಿಗೆ ಮಾತನಾಡಿದರು. ಇನ್ನು ಮುಂದೆ ಗಂಭೀರ ಪಾತ್ರಗಳಲ್ಲಷ್ಟೇ ಅಭಿನಯಿಸುತ್ತೇನೆ ಎಂದರು. ಅಪ್ಪಾಜಿ ಚಿತ್ರವನ್ನು ನಿರ್ದೇಶಿಸುವ ತಮ್ಮ ಆಸೆಯನ್ನು ಮತ್ತೊಮ್ಮೆ ಹೇಳಿಕೊಂಡರು. ಅವರ ಪಕ್ಕದಲ್ಲಿ ಕಿರಿಯ ಮಗಳು ನಿವೇದಿತಾ ಇದ್ದಳು. ಅಪ್ಪನಿಗೊಂದು ಲೈಟರ್‌ ಪ್ರೆಸೆಂಟ್‌ ಮಾಡಿದ್ದೇನೆ ಎಂದಾಕೆ ಹೆಮ್ಮೆಯಿಂದ ಹೇಳಿಕೊಂಡಳಂತೆ. ನಿವೇದಿತಾಗೆ ಋತಿಕ್‌ ರೋಷನ್‌ ಎಂದರೆ ಇಷ್ಟ. ಸ್ಕೂಲ್‌ನಿಂದ ದಿನಾ ಬರುವಾಗ ಋತಿಕ್‌ ಫೋಟೋ ಹಿಡಿದುಕೊಂಡೇ ಬರ್ತಾಳಂತೆ. ಶಿವರಾಜ್‌ ಕೂಡ ಋತಿಕ್‌ ಫ್ಯಾನ್‌. ಕಹೋ ನಾ ಪ್ಯಾರ್‌ ಹೈ ಚಿತ್ರವನ್ನು 12 ಸಾರಿ ನೋಡಿದ್ದಾರೆ. ಅಭಿಷೇಕ್‌ ಬಚ್ಚನ್‌ ಕೂಡ ಸ್ಮಾರ್ಟ್‌ ಆಗಿದ್ದಾನೆ ಎಂದು ಹೊಗಳಿದರು. ಕಿರಿಯಾಕೆ ನಿವೇದಿತಾ ಈಗಾಗಲೇ ಅಂಡಮಾನ್‌ ಚಿತ್ರದಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದಾಳೆ. ಹಿರಿಯಾಕೆ ನಿರುಪಮಾಗೂ ಚಿತ್ರವೊಂದರಲ್ಲಿ ಚಾನ್ಸ್‌ ಕೊಡಿಸು ಅಂತ ಅಪ್ಪಾಜಿ ಹೇಳಿದ್ದಾರಂತೆ. ಶಿವರಾಜ್‌ ಕುಮಾರ್‌ ತಮ್ಮ ಮನೆಯ ಪಕ್ಕದ ಮನೆಯನ್ನೇ ಲೀಸ್‌ಗೆ ತೆಗೆದುಕೊಂಡು ಅಲ್ಲೊಂದು ಎಡಿಟಿಂಗ್‌ ಸ್ಟುಡಿಯೋ ಸ್ಥಾಪಿಸಿದ್ದಾರೆ. ಆವಿಡ್‌ ಸಂಸ್ಥೆಯ ಅತ್ಯಾಧುನಿಕ ಎಡಿಟಿಂಗ್‌ ತಂತ್ರಜ್ಞಾನವನ್ನು ಇಲ್ಲಿ ಅಳವಡಿಸಿಕೊಳ್ಳಲಾಗಿದೆ. ಕಂಪ್ಯೂಟರ್‌ ಸಹಾಯದಿಂದ ಇಡೀ ಸಿನಿಮಾವನ್ನು ಸಂಕಲಿಸಬಹುದು. ಈಗಾಗಲೇ ನಾಲ್ಕೈದು ಕನ್ನಡ ಚಿತ್ರಗಳನ್ನು ಇಲ್ಲಿ ಸಂಕಲನ ಮಾಡಲಾಗಿದೆ. ಇದಕ್ಕಾದ ಖರ್ಚು ಎಷ್ಟು ? ‘ಅಯ್ಯೋ ದುಡ್ಡು ಗಿಡ್ಡಿನ ವಿಚಾರ ನಂಗೊತ್ತಿಲ್ಲಪ್ಪ. ಅದೇನಿದ್ದರೂ ನನ್ನ ಹೆಂಡ್ತಿಯನ್ನು ಕೇಳಿ’ ಅಂದರು ಶಿವಣ್ಣ.‘ಅಪ್ಪನಂತೆಯೇ ಮಗ’ ಅಂದರು ಯಾರೋ.ಮುಖಪುಟ / ಸ್ಯಾಂಡಲ್‌ವುಡ್‌

    By Staff
    |

    ರಾಜ್‌ಕುಮಾರ್‌ ಅವರ 72ನೆಯ ಹುಟ್ಟುಹಬ್ಬಕ್ಕೆ 72 ಕೇಜಿ ತೂಕದ ಕೇಕ್‌, ಆದರೆ ಅಣ್ಣಾವ್ರ ಪುತ್ರ ಶಿವಣ್ಣನ 39ನೆಯ ಹುಟ್ಟು ಹಬ್ಬಕ್ಕೆ ಬರೀ 3.9 ಕೇಜಿ ಕೇಕ್‌. ಇವೆರಡು ಹುಟ್ಟು ಹಬ್ಬಗಳನ್ನು ಆಯೋಜಿಸಿದ್ದು ದಕ್ಷಿಣ ವಲಯ ರಾಜ್‌ಕುಮಾರ್‌ ಅಭಿಮಾನಿಗಳ ಸಂಘವೇ ಆಗಿದ್ದರೂ ಏಕಿಂಥ ತಾರತಮ್ಯ ?

    ಶಿವಣ್ಣ ಂಗೆ 39 ವರ್ಷವಾಗಿದ್ದರೂ ನಮ್ಮ ಪಾಲಿಗೆ ಅವರು ಇನ್ನೂ ಮಗು ಥರಾನೇ. ಅದಕ್ಕೇ 10 ವರ್ಷಕ್ಕೆ ಒಂದು ಕೇಜಿ ತೂಕದಂತೆ 39 ವರ್ಷಕ್ಕೆ 3.9 ಕೇಜಿ ಅಂತಾರೆ ಅಭಿಮಾನಿಗಳು.

    39ರ ಹೊಸಿಲಿನಲ್ಲಿರುವ ಮಗುವಿನ ಹುಟ್ಟುಹಬ್ಬಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳ ಮಹಾ ಪೂರವೇ ಹರಿದು ಬಂದಿತ್ತು. ಚಿಕ್ಕಮಗಳೂರು, ಹಾಸನ, ಮಂಡ್ಯ, ಬಿಜಾಪುರ, ಬಳ್ಳಾರಿ, ಹೊಸ ಪೇಟೆ, ಕೊಳ್ಳೇಗಾಲ, ಮೊದಲಾದ ಊರುಗಳಿಂದ ಜನ ಮೆಟಡಾರ್‌, ಕಾರು, ಟೆಂಪೋಗಳಲ್ಲಿ ಬಂದು ಮುಂಜಾನೆ 6 ಗಂಟೆಗೇ ಸದಾಶಿವ ನಗರದ ಮನೆ ಮುಂದೆ ಕ್ಯೂ ನಿಂತಿದ್ದರು. ಶಿವರಾಜ್‌ ಕುಮಾರ್‌ 39ನೆಯ ಹುಟ್ಟುಹಬ್ಬಕ್ಕೆ ಡೆಲ್ಲಿ , ಅಮೆರಿಕಾ, ಹೈದರಾಬಾದ್‌ನಿಂದ ಫೋನ್‌ ಮೂಲಕ ಶುಭ ಸಂದೇಶಗಳೂ ಬಂದಿದ್ದವಂತೆ.

    ಮುಂಜಾನೆ ಬಸವನಗುಡಿಯ ಗಣೇಶನಗುಡಿಯಲ್ಲಿ ಶಿವಣ್ಣನಿಗೆ ಆಯುರಾರೋಗ್ಯ ಕೋರುವ ಸಲುವಾಗಿ ವಿಶೇಷ ಪೂಜೆಗಳೂ ನಡೆದವು. ಅಭಿಮಾನಿ ಬಳಗದವರು ತಿಲಕನಗರದಲ್ಲಿರುವ ಲವಕುಶ ವಾಲ್ಮೀಕಿ ಆಶ್ರಮದ ಬಡ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಂಚಿದರು.

    ಸಂಜೆ ಶಿವರಾಜ್‌ ಮನೆ ಮುಂದೆ ಕೇಕ್‌ ಕತ್ತರಿಸುವ ಕಾರ್ಯಕ್ರಮ. ಶಿವರಾಜ್‌ ತಮ್ಮ ಹುಟ್ಟುಹಬ್ಬವನ್ನು ಸಾರ್ವಜನಿಕವಾಗಿ ಆಚರಿಸಿಕೊಳ್ಳುತ್ತಿರುವುದು ಇದೇ ಮೊದಲು. ಈ ರೀತಿ ಸಾರ್ವಜನಿಕವಾಗಿ ಹುಟ್ಟುಹಬ್ಬದಾಚರಣೆ ನನಗೆ ಎಳ್ಳಷ್ಟೂ ಇಷ್ಟವಾಗುವುದಿಲ್ಲ ಎಂದು ಹೇಳಿದ ಶಿವರಾಜ್‌ ಅಭಿಮಾನಿಗಳ ಪ್ರೀತ್ಯರ್ಥ ನಾನು ಒಪ್ಪಿಕೊಂಡೆ. ಈ ಪ್ರೀತಿ ವಿಶ್ವಾಸ ಹೀಗೆ ಮುಂದುವರೆಯಲಿ ಎಂದು ಎರಡು ಮಾತಾಡಿದರು.

    ಅವರು ಹಾಗನ್ನುವ ಹೊತ್ತಿಗೆ ಮನೆ ಮುಂದಿನ ರಸ್ತೆ ಹೂವಿನಿಂದ, ಬೆಳಕಿನಿಂದ ಅಲಂಕಾರಗೊಂಡಿತ್ತು. ಮಾತು ಮುಗಿದಾಕ್ಷಣ ತಲಾ ಐದರಂತೆ ಅಭಿಮಾನಿಗಳು ಗುಂಪು ಗುಂಪಾಗಿ ಒಳಗೆ ಬಂದು ತಮ್ಮ ದೈವಕ್ಕೆ ನಮಿಸಿದರು. ಅಪ್ಪಿಕೊಳ್ಳುವುದು, ಕಾಲಿಗೆ ಬೀಳುವುದು, ಚುಂಬಿಸುವುದು, ಕೈ ಕುಲುಕುವುದು ಮೊದಲಾದ ಬಾಡಿ ಲಾಂಗ್ವೇಜ್‌ಗಳ ಜೊತೆಗೆ ಹಾರಾರ್ಪಣೆಯೂ ಆಯಿತು. 39 ಕೇಜಿ ತೂಕದ ಮಲ್ಲಿಗೆ ಹಾರದಿಂದ ಹಿಡಿದು ಗುಲಾಬಿ ಹಾರದ ತನಕ.

    ಅನಂತರ ಹಂಗರಹಳ್ಳಿಯಲ್ಲಿ ಜೀತ ವಿಮುಕ್ತರಾದ ಕುಟುಂಬಗಳಿಗೆ 5 ಸಾವಿರ ಮತ್ತು ಬಡ ವಿದ್ಯಾರ್ಥಿಗಳ ನಿಧಿಗೆ 5 ಸಾವಿರ ರೂಪಾಯಿಯ ಕಾಣಿಕೆಯನ್ನು ಅಭಿಮಾನಿಗಳ ಸಂಘದ ವಕ್ತಾರರು ನೀಡಿದರು. ಅವೆಲ್ಲಕ್ಕೂ ಸಾಕ್ಷಿಯಾಗಿ ನಿಂತಿದ್ದ ಶಿವರಾಜ್‌ ಅನಂತರ ಮನೆಯಾಳಗೆ ಬಂದು ಮಾಧ್ಯಮಗಳೊಂದಿಗೆ ಮಾತನಾಡಿದರು. ಇನ್ನು ಮುಂದೆ ಗಂಭೀರ ಪಾತ್ರಗಳಲ್ಲಷ್ಟೇ ಅಭಿನಯಿಸುತ್ತೇನೆ ಎಂದರು. ಅಪ್ಪಾಜಿ ಚಿತ್ರವನ್ನು ನಿರ್ದೇಶಿಸುವ ತಮ್ಮ ಆಸೆಯನ್ನು ಮತ್ತೊಮ್ಮೆ ಹೇಳಿಕೊಂಡರು. ಅವರ ಪಕ್ಕದಲ್ಲಿ ಕಿರಿಯ ಮಗಳು ನಿವೇದಿತಾ ಇದ್ದಳು. ಅಪ್ಪನಿಗೊಂದು ಲೈಟರ್‌ ಪ್ರೆಸೆಂಟ್‌ ಮಾಡಿದ್ದೇನೆ ಎಂದಾಕೆ ಹೆಮ್ಮೆಯಿಂದ ಹೇಳಿಕೊಂಡಳಂತೆ. ನಿವೇದಿತಾಗೆ ಋತಿಕ್‌ ರೋಷನ್‌ ಎಂದರೆ ಇಷ್ಟ. ಸ್ಕೂಲ್‌ನಿಂದ ದಿನಾ ಬರುವಾಗ ಋತಿಕ್‌ ಫೋಟೋ ಹಿಡಿದುಕೊಂಡೇ ಬರ್ತಾಳಂತೆ. ಶಿವರಾಜ್‌ ಕೂಡ ಋತಿಕ್‌ ಫ್ಯಾನ್‌. ಕಹೋ ನಾ ಪ್ಯಾರ್‌ ಹೈ ಚಿತ್ರವನ್ನು 12 ಸಾರಿ ನೋಡಿದ್ದಾರೆ. ಅಭಿಷೇಕ್‌ ಬಚ್ಚನ್‌ ಕೂಡ ಸ್ಮಾರ್ಟ್‌ ಆಗಿದ್ದಾನೆ ಎಂದು ಹೊಗಳಿದರು. ಕಿರಿಯಾಕೆ ನಿವೇದಿತಾ ಈಗಾಗಲೇ ಅಂಡಮಾನ್‌ ಚಿತ್ರದಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದಾಳೆ. ಹಿರಿಯಾಕೆ ನಿರುಪಮಾಗೂ ಚಿತ್ರವೊಂದರಲ್ಲಿ ಚಾನ್ಸ್‌ ಕೊಡಿಸು ಅಂತ ಅಪ್ಪಾಜಿ ಹೇಳಿದ್ದಾರಂತೆ.

    ಶಿವರಾಜ್‌ ಕುಮಾರ್‌ ತಮ್ಮ ಮನೆಯ ಪಕ್ಕದ ಮನೆಯನ್ನೇ ಲೀಸ್‌ಗೆ ತೆಗೆದುಕೊಂಡು ಅಲ್ಲೊಂದು ಎಡಿಟಿಂಗ್‌ ಸ್ಟುಡಿಯೋ ಸ್ಥಾಪಿಸಿದ್ದಾರೆ. ಆವಿಡ್‌ ಸಂಸ್ಥೆಯ ಅತ್ಯಾಧುನಿಕ ಎಡಿಟಿಂಗ್‌ ತಂತ್ರಜ್ಞಾನವನ್ನು ಇಲ್ಲಿ ಅಳವಡಿಸಿಕೊಳ್ಳಲಾಗಿದೆ. ಕಂಪ್ಯೂಟರ್‌ ಸಹಾಯದಿಂದ ಇಡೀ ಸಿನಿಮಾವನ್ನು ಸಂಕಲಿಸಬಹುದು. ಈಗಾಗಲೇ ನಾಲ್ಕೈದು ಕನ್ನಡ ಚಿತ್ರಗಳನ್ನು ಇಲ್ಲಿ ಸಂಕಲನ ಮಾಡಲಾಗಿದೆ. ಇದಕ್ಕಾದ ಖರ್ಚು ಎಷ್ಟು ?

    ‘ಅಯ್ಯೋ ದುಡ್ಡು ಗಿಡ್ಡಿನ ವಿಚಾರ ನಂಗೊತ್ತಿಲ್ಲಪ್ಪ. ಅದೇನಿದ್ದರೂ ನನ್ನ ಹೆಂಡ್ತಿಯನ್ನು ಕೇಳಿ’ ಅಂದರು ಶಿವಣ್ಣ.

    ‘ಅಪ್ಪನಂತೆಯೇ ಮಗ’ ಅಂದರು ಯಾರೋ.

    ಮುಖಪುಟ / ಸ್ಯಾಂಡಲ್‌ವುಡ್‌

    Friday, March 29, 2024, 3:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X