»   » ರಾಮೋಜಿ ರಾವ್ ಚಿತ್ರದಲ್ಲಿ ಶ್ರೀನಗರ ಕಿಟ್ಟಿ

ರಾಮೋಜಿ ರಾವ್ ಚಿತ್ರದಲ್ಲಿ ಶ್ರೀನಗರ ಕಿಟ್ಟಿ

Subscribe to Filmibeat Kannada

srinagar kittyದಕ್ಷಿಣ ಭಾರತದ ಮೀಡಿಯಾ ಬ್ಯಾರನ್ ಎಂದು ಖ್ಯಾತರಾದ ಉಷಾಕಿರಣ್ ಮೂವೀಸ್‌ನ ರಾಮೋಜಿರಾವ್ ಅವರು ತೆಲುಗಿನಲ್ಲಿ ಜನಪ್ರಿಯವಾದ 'ಗಮ್ಯಂ' ಚಿತ್ರವನ್ನು ಕನ್ನಡದಲ್ಲಿ 'ಸವಾರಿ' ಎಂದು ನಾಮಕರಣ ಮಾಡಿ ನಿರ್ಮಿಸುತ್ತಿದ್ದಾರೆ. ಕನ್ನಡದಲ್ಲಷ್ಟೇ ಅಲ್ಲದೆ ಈ ಚಿತ್ರ ಬಾಂಗ್ಲಾ ಹಾಗೂ ಹಿಂದಿ ಭಾಷೆಯಲ್ಲೂ ನಿರ್ಮಾಣವಾಗಲು ಸಿದ್ಧವಾಗುತ್ತಿದೆ.

ಕನ್ನಡದಲ್ಲಿ ಊಲಾಲ, ನಿನಗಾಗಿ, ಚಿತ್ರ, ಸಿಕ್ಸರ್ ಮುಂತಾದ ಚಿತ್ರಗಳನ್ನು ನೀಡಿರುವ ಉಷಾಕಿರಣ್ ಮೂವೀಸ್ ಸಂಸ್ಥೆಯ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 'ಸವಾರಿ'ಗೆ ಈಗಾಗಲೇ ಸಕಲೇಶಪುರ, ಕುಕ್ಕೆಸುಬ್ರಹ್ಮಣ್ಯ, ಯಡಿಯೂರು, ಕುದುರೆಮುಖ ಹಾಗೂ ಬೆಂಗಳೂರಿನಲ್ಲಿ 50ದಿನಗಳ ಚಿತ್ರೀಕರಣ ಪೂರ್ಣವಾಗಿದೆ. ಪ್ರಸ್ತುತ ಚಿತ್ರಕ್ಕೆ ಬಾಲಾಜಿ ಡಿಜಿಟಲ್ ಸ್ಟೂಡಿಯೋದಲ್ಲಿ ಮಾತುಗಳ ಜೋಡಣೆ ಪ್ರಕ್ರಿಯೆ ನಡೆಯುತ್ತಿದೆ.

'ಗಮ್ಯಂ' ಚಿತ್ರದ ನಿರ್ದೇಶಕ ರಾಧಕೃಷ್ಣ ಚಿತ್ರದ ಮೂಲ ಕತೆಗಾರರು. ಕನ್ನಡದ 'ಸವಾರಿ' ಚಿತ್ರವನ್ನು ಮಲಯಾಳಂ ಭಾಷೆಯಲ್ಲಿ 'ಆದಿಯಂ' ಎಂಬ ಕಿರುಚಿತ್ರವನ್ನು ನಿರ್ದೇಶಿಸಿದ್ದ ಜಾಕಬ್ ವರ್ಗಿಸ್ ನಿರ್ದೇಶಿಸುತ್ತಿದ್ದಾರೆ. ವರ್ಗಿಸ್ ಅವರ ಕಿರುಚಿತ್ರ ಕಳೆದ ಸಾಲಿನ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರಗಳಲೊಂದಾಗಿತ್ತು. ಆರ್ಕಾ ಮೀಡಿಯಾ ಸಂಸ್ಥೆ ಚಿತ್ರದ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಿದೆ.

ನಾಗೇಂದ್ರಪ್ರಸಾದ್, ಕವಿರಾಜ್ ಬರೆದ ಐದುಗೀತೆಗಳಿಗೆ ಮಣಿಕಾಂತ್ ಕದ್ರಿ (ಸ್ಯಾಕ್ಸೊಫೋನ್ ದಿಗ್ಗಜ ಕದ್ರಿ ಗೋಪಾಲನಾಥ್ ಮಗ) ಸಂಗೀತ ನೀಡಿದ್ದಾರೆ. ವೇಲ್‌ರಾಜ್ ಛಾಯಾಗ್ರಹಣ, ಎ.ಶ್ರೀಕರ್‌ಪ್ರಸಾದ್ ಸಂಕಲನ, ಸುನೀಲ್‌ರಾಜ್, ಹೇಮಂತ್ ಸಹನಿರ್ದೇಶನ, ಅನಿಲ್ ನಿರ್ಮಾಣ ನಿರ್ವಹಣೆ, ಬಾಬಿ, ರೇಖಾ, ರಘು ನೃತ್ಯ, ಕೌರವವೆಂಕಟೇಶ್, ಡಿಫ಼ರೆಂಟ್‌ಡ್ಯಾನಿ, ಗಣೇಶ್ ಸಾಹಸವಿರುವ 'ಸವಾರಿ'ಯಲ್ಲಿ ಶ್ರೀನಗರ ಕಿಟ್ಟಿ, ರಘುಮುಖರ್ಜಿ ನಾಯಕರ ಪಾತ್ರ ನಿರ್ವಹಿಸಿದ್ದಾರೆ. ಕಮಲಿನಿ ಮುಖರ್ಜಿ, ಸಾಧುಕೋಕಿಲಾ, ಪವಿತ್ರಾಲೋಕೇಶ್, ಸಿ.ಆರ್.ಸಿಂಹ, ಮಿಲಿಂದ್ ಗುನಾಂಜಿ, ಸುಮನ್‌ರಂಗನಾಥ್, ದತ್ತಣ್ಣ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
(ದಟ್ಸ್ ಕನ್ನಡಚಿತ್ರವಾರ್ತೆ)

ಗ್ಯಾಲರಿ: ಕಮಲಿನಿ ಮುಖರ್ಜಿ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada