»   » ನರ್ತಕಿ ಮುಂದೆ 'ಬುದ್ಧಿವಂತ'ನ 80 ಅಡಿ ಕಟೌಟ್

ನರ್ತಕಿ ಮುಂದೆ 'ಬುದ್ಧಿವಂತ'ನ 80 ಅಡಿ ಕಟೌಟ್

Posted By:
Subscribe to Filmibeat Kannada

ಸೆ.26ರಂದು ಉಪೇಂದ್ರ ನಟನೆಯ ಬಹು ನಿರೀಕ್ಷಿತ ಚಿತ್ರ 'ಬುದ್ಧಿವಂತ' ಬಿಡುಗಡೆಗೆ ಸಿದ್ಧವಾಗಿದೆ. ಇದಕ್ಕಾಗಿ ಬೆಂಗಳೂರಿನ ನರ್ತಕಿ ಹಾಗೂ ಮೈಸೂರಿನ ಸಂಗಂ ಚಿತ್ರಮಂದಿರಗಳ ಮುಂದೆ ವಿಶಿಷ್ಟ ಸೆಟ್ ಗಳನ್ನು ಹಾಕಲಾಗಿದೆ. ಈ ಸೆಟ್ ನ ವಿಶೇಷತೆ ಏನೆಂದರೆ, ದೇವಸ್ಥಾನ, ಮಸೀದಿ ಹಾಗೂ ಚರ್ಚ್ ಗಳ ನಡುವೆ ಮೂರು ಧರ್ಮಗಳ ಸಂಗಮದಲ್ಲಿ 'ಬುದ್ಧಿವಂತ' ಧ್ಯಾನಕ್ಕೆ ಕುಳಿತಿರುವುದು. ಈ ಅದ್ಭುತ ಸೆಟ್ ಗಳನ್ನು 'ಬುದ್ಧಿವಂತ'ನಿಗಾಗಿ ಕಲಾ ನಿರ್ದೇಶಕ ಇಸ್ಮಾಯಿಲ್ ನಿರ್ಮಿಸಿದ್ದಾರೆ.

ರಾಜ್ಯದಲ್ಲಿ ಕೋಮು ಸಾಮರಸ್ಯ ಹದಗೆಡುತ್ತಿರುವ ಪರಿಸ್ಥಿತಿಯಲ್ಲಿ ಸಿನಿಮಾ ಒಂದು ಪ್ರಚಾರ ತಂತ್ರಕ್ಕಾಗಿ 'ಬುದ್ಧಿವಂತಿಕೆ' ಪ್ರದರ್ಶಿಸಿರುವುದು ನಿಜಕ್ಕೂ ಮೆಚ್ಚಬೇಕಾದ ಸಂಗತಿ. ಚಿತ್ರದ ಮತ್ತೊಂದು ವಿಶೇಷತೆ ಎಂದರೆ, ಬೆಂಗಳೂರಿನ ನರ್ತಕಿ ಚಿತ್ರಮಂದಿರದ ಎದುರು ಇದೇ ಪ್ರಥಮ ಬಾರಿಗೆ ಉಪೇಂದ್ರ ಅವರ 80 ಅಡಿ ಎತ್ತರದ ಕಟೌಟ್ ಎದ್ದು ನಿಲ್ಲಲಿದೆ. 25 ವರ್ಷಗಳ ಹಿಂದೆ ಡಾ.ರಾಜ್ ಕುಮಾರ್ ಅವರ 'ಜೀವನ ಚೈತ್ರ' ಬಿಡುಗಡೆಯಾದಾಗ ಅಣ್ಣಾವ್ರಿಗೆ ಇಷ್ಟೇ ಎತ್ತರದ ಕಟೌಟ್ ಹಾಕಲಾಗಿತ್ತು. ಉಪೇಂದ್ರರ ಕಟೌಟ್ ಗೆ ವಿನೈಲ್ ಬಳಸದೆ ನಿರ್ಮಿಸಲಾಗಿದೆ ಎನ್ನ್ನುತ್ತಾರೆ ಬುದ್ಧಿವಂತ ನಿರ್ಮಾಪಕ ಎ.ಮೋಹನ್.

ಶುಕ್ರವಾರ ಬೆಳಗ್ಗೆ 7.30ಕ್ಕೆ ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿನಿಂದ ನರ್ತಕಿ ಚಿತ್ರಮಂದಿರದವರೆಗೆ 'ಬುದ್ಧಿವಂತ' ಚಿತ್ರತಂಡ ಮೆರವಣಿಗೆ ನಡೆಸಲಿದೆ. ಡೊಳ್ಳುಕುಣಿತ, ತಮಟೆ, ನಂದಿಕೋಲು ಮುಂತಾದ ಜಾನಪದ ಪ್ರಕಾರಗಳ ಮೂಲಕ ಮೆರವಣಿಗೆ ಸಾಗಲಿದೆ. ಮೆರವಣಿಗೆಯಲ್ಲಿ 5,000 ಮಂದಿ ಉಪೇಂದ್ರ ಅಭಿಮಾನಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ.

(ದಟ್ಸ್ ಕನ್ನಡ ಸಿನಿವಾರ್ತೆ)

ಪೂರಕ ಸುದ್ದಿಗಳು:
'ಬುದ್ಧಿವಂತ' ಉಪೇಂದ್ರರನ್ನು ಒಪ್ಪಿಕೊಂಡವರು ದಡ್ದರಲ್ಲ!
ಸೆನ್ಸಾರ್ ಮಂಡಳಿಯ ಅಡಕತ್ತರಿಯಲ್ಲಿ ಬುದ್ಧಿವಂತ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada