ಸದ್ದಿಲ್ಲದಂತೆ ಮತ್ತೊಂದು ಚಿತ್ರಕ್ಕೆ ನಯನತಾರಾ ಸಹಿ

By Rajendra

ದಕ್ಷಿಣದ ಬೆಡಗಿ ನಯನತಾರಾ ಚಿತ್ರರಂಗಕ್ಕೆ ಗುಡ್ ಬೈ ಹೇಳಿ ತಿಂಗಳುಗಳೇ ಕಳೆದುಹೋಗಿವೆ. ಇನ್ನು ಮುಂದೆ ಯಾವುದೇ ಚಿತ್ರದಲ್ಲಿ ಅಭಿನಯಿಸುವುದಿಲ್ಲ ಖಂಡತುಂಡವಾಗಿ ನಿರ್ಧಾರ ಪ್ರಕಟಿಸಿದ್ದರು. ತೆಲುಗಿನ 'ಶ್ರೀರಾಮರಾಜ್ಯಂ' ಎಂಬ ಚಿತ್ರವೇ ಕೊನೆ ಎನ್ನಲಾಗಿತ್ತು. ಆದರೆ ಈಗ ಸದ್ದಿಲ್ಲದಂತೆ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ.

ಡ್ಯಾನ್ಸ್ ಮಾಸ್ಟರ್ ಪ್ರಭುದೇವ ಅವರನ್ನು ಮದುವೆಯಾಗಲಿರುವ ನಯನತಾರಾ ತೆಲುಗಿನಲ್ಲಿ ಮತ್ತೊಂದು ಚಿತ್ರವನ್ನು ಒಪ್ಪಿದ್ದಾರೆ. ಈ ಚಿತ್ರದ ನಾಯಕ ನಟ ನಾಗಾರ್ಜುನ. ದಶರಥ್ ಎಂಬ ಯಶಸ್ವಿ ನಿರ್ದೇಶಕರ ಚಿತ್ರವಿದು. ಈ ಹಿಂದೊಮ್ಮೆ ನಯನತಾರಾ ಹಾಗೂ ನಾಗಾರ್ಜುನ 'ಬಾಸ್' ಎಂಬ ಚಿತ್ರದಲ್ಲಿ ಅಭಿನಯಿಸಿದ್ದರು.

ಇವರಿಬ್ಬರೂ ಜೊತೆಯಾಗಿ ಅಭಿನಯಿಸುತ್ತಿರುವ ಎರಡನೇ ಚಿತ್ರವಿದು. ಈ ಚಿತ್ರ 2012ನೇ ಸಾಲಿನ ಮಧ್ಯಭಾಗದಲ್ಲಿ ಸೆಟ್ಟೇರುವ ಸಾಧ್ಯತೆಗಳಿವೆ. ಹೆಚ್ಚಿನ ವಿವರಗಳು ಇನ್ನಷ್ಟೇ ಹೊರಬೀಳಬೇಕು. ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮ ನಿರ್ದೇಶನದಲ್ಲೂ ನಯನಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಇದೆ. (ಏಜೆನ್ಸೀಸ್)

More from Filmibeat

English summary
Nayantara's marriage plans have taken a back seat again, as the actress has signed a new Telugu film. The actress, who was open for good roles, has surprisingly signed Nagarjuna's next movie, which will hit the floors in April.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X