ವಿಧಾನ ಪರಿಷತ್ ಚುನಾವಣೆಗೆ ನಟಿ ಶ್ರುತಿ?

ಕಳೆದ ವಿಧಾನಸಭೆ ಚುನಾವಣೆಗೆ ಶ್ರುತಿ ಅವರ ಪತಿ ಎಸ್.ಮಹೇಂದರ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಕೊಳ್ಳೆಗಾಲ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಹೇಂದರ್ ಕಾಂಗ್ರೆಸ್ ನ ಧೃವಕುಮಾರ್ ವಿರುದ್ಧ ಸೋತದ್ದು ಇತಿಹಾಸ.
ಬಿಜೆಪಿಯ ಚುನಾವಣಾ ಪ್ರಚಾರ ಕಾರ್ಯಗಳಲ್ಲಿ ಶ್ರುತಿ ಹಾಗೂ ಮಹೇಂದರ್ ದಂಪತಿಗಳು ಬಹಳಷ್ಟು ವರ್ಷಗಳಿಂದ ಗುರುತಿಸಿಕೊಂಡಿದ್ದಾರೆ. ಅವರು ಕಾರ್ಯಕರ್ತರಾಗಿ ಪಕ್ಷಕ್ಕೆ ದುಡಿದಿದ್ದಾರೆ ಎಂಬ ಕಾರಣಕ್ಕೆ ಮಹೇಂದರ್ ದಂಪತಿಗಳ ಮೇಲೆ ಬಿಜೆಪಿಗೆ ಅನುಕಂಪ ಇದ್ದೇ ಇದೆ. ಈ ಎಲ್ಲ ಕಾರಣಗಳಿಗೆ ಶ್ರುತಿ ಅವರನ್ನು ವಿಧಾನ ಪರಿಷತ್ ಸ್ಥಾನಕ್ಕೆ ಆಯ್ಕೆ ಮಾಡುವ ಸಾಧ್ಯತೆಗಳು ನಿಚ್ಚಳವಾಗಿವೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications