»   » ಹಿರಿಯ ಕಲಾವಿದೆ ರೇಣುಕಮ್ಮ ಮುರಗೊಡ ಇನ್ನಿಲ್ಲ

ಹಿರಿಯ ಕಲಾವಿದೆ ರೇಣುಕಮ್ಮ ಮುರಗೊಡ ಇನ್ನಿಲ್ಲ

Subscribe to Filmibeat Kannada

ಸವದತ್ತಿ, ಜೂ.25: ಹಿರಿಯ ಪೋಷಕ ನಟಿ, ರಂಗಭೂಮಿ ಕಲಾವಿದೆ ರೇಣುಕಮ್ಮ ಮುರಗೊಡ ಅವರು ಮುರಗೋಡಿನ ತಮ್ಮ ಸ್ವಗೃಹದಲ್ಲಿ ಬುಧವಾರ ಕೊನೆಯುಸಿರೆಳೆದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕೆಲ ದಿನಗಳಿಂದ ಅನ್ನಾಹಾರ ತ್ಯಜಿಸಿದ್ದರು, ಮಾತು ಸಹ ನಿಂತು ಹೋಗಿತ್ತು.

ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತರಾದ ಇವರು ಕಳೆದ ಕೆಲತಿಂಗಳಿನಿಂದ ಅಸ್ವಸ್ಥರಾಗಿ, ಬೈಲಹೊಂಗಲ ಸಮೀಪದ ಮುರಗೋಡಿನ ಮನೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿತ್ತು ಹಿರಿ ಜೀವ. ಆಸ್ಪತ್ರೆಯ ವೈದ್ಯಕೀಯ ವೆಚ್ಚಭರಿಸಲಾಗದೆ ಮನೆಯಲ್ಲೇ ಸ್ಥಳೀಯ ವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿತ್ತು.

ರಾಜ್ಯ ಪ್ರಶಸ್ತಿ, ನಾಟಕ ಅಕಾಡೆಮಿ ಪ್ರಶಸ್ತಿಗಳನ್ನು ಪಡೆದಿರುವ ಹಿರಿಯ ಕಲಾವಿದೆ ರೇಣುಕಮ್ಮ ಅವರ ಚಿಕಿತ್ಸೆ ನೆರವಿಗೆ ಯಾರು ಬಂದಿರಲಿಲ್ಲ. ಸ್ಥಳೀಯ ಕಲಾಭಿಮಾನಿಗಳು ಸರ್ಕಾರ ಹಾಗೂ ಅಧಿಕಾರಿ ವರ್ಗದ ವಿರುದ್ಧ ಅವರ ಮನೆಯವರು ಕಿಡಿಕಾರಿದ್ದರು. ನಮ್ಮೂರ ಮಂದಾರ ಹೂವೆ ಚಿತ್ರದ ಮೂಲಕ ಚಿತ್ರರಂಗದಲ್ಲಿ ಹೆಸರು ಗಳಿಸಿದ ರೇಣುಕಮ್ಮ ಅವರು ಚಂದ್ರಮುಖಿ ಪ್ರಾಣಸಖಿ, ಕ್ರೌರ್ಯ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಿರುತೆರೆಯಲ್ಲೂ ಮೂಡಲಮನೆ ಸೇರಿದಂತೆ ಅನೇಕ ಧಾರವಾಹಿಗಳಲ್ಲಿ ಅಭಿನಯಿಸಿದ್ದಾರೆ.

(ದಟ್ಸ್‌ಕನ್ನಡ ಸಿನಿವಾರ್ತೆ)

ಮೂಡಲ ಮನೆ ಅಜ್ಜಿಗೆ ನೆರವು ನೀಡಲು ಸಂಪರ್ಕಿಸಿ
ಕೋಮಾಸ್ಥಿತಿ ತಲುಪಿದ ಮೂಡಲ ಮನೆ ಅಜ್ಜಿ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada