ಪೋರ್ನ್ ಸ್ಟಾರ್ ಸನ್ನಿ ಜೊತೆ ಸಲ್ಲೂ ಮಿಯಾ ಚಿತ್ರ?
ಬಿಗ್ ಬಾಸ್ 5 ರ ಮನೆಗೆ ಬೆತ್ತಲೆ ಸುಂದರಿ ಸನ್ನಿ ಲಿಯೋನ್ ಎಂಟ್ರಿ ಕೊಟ್ಟ ಮೇಲೆ ಸಾಕಷ್ಟು ಬದಲಾವಣೆಗಳಾಗಿವೆ. ಪ್ರತಿ ದಿನ ಹಿಂದಿ ಸಿನಿಮಾಗಳಿಗೆ ನರ್ತಿಸುವ ಮೂಲಕ ಒಂದೊಂದೆ ಬಾಲಿವುಡ್ ಗ್ರ್ಯಾಮರ್ ಕಲಿಯುತ್ತಿರುವ ಸನ್ನಿ ತನ್ನ ಮನದಾಳದ ಮಾತುಗಳನ್ನು ಹೊರ ಹಾಕಿದ್ದಾಳೆ.
ಸನ್ನಿ ಲಿಯೋನ್ ನಡಿಗೆ ಭಾವ ಭಂಗಿ ನೋಡಿದ ಮೇಲೆ ಬಿಗ್ ಬಾಸ್ ಸ್ಪರ್ಧೆಗಳು 'ಬಾಲಿವುಡ್ ನ ಹೊಸ ಬಾಂಬ್ ಶೆಲ್' ಆಗುವ ಎಲ್ಲಾ ಲಕ್ಷಣಗಳು ಸನ್ನಿಗೆ ಇದೆ ಎಂದಿದ್ದಾರೆ.
ಪೋರ್ನ್ ಪಟ್ಟ ಎಲ್ಲಿ ಹೋಯ್ತು? : ಸನ್ನಿ ಲಿಯೋನ್ ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟಾಗ ಬರೀ ಹಾಲಿವುಡ್ ಹಾಗೂ ಟಿವಿ ನಟಿ ಎಂದು ಮಾತ್ರ ಪರಿಚಯಿಸಲಾಗಿದೆ.ಆದರೆ, ಸನ್ನಿ ಮಾತ್ರ ತನ್ನ ಪೋರ್ನ್ ಇಮೇಜ್ ಬಗ್ಗೆ ಯಾರಲ್ಲೂ ಚರ್ಚಿಸಿಲ್ಲ. ತುಟಿಪಿಟಕ್ಕೆಂದಿಲ್ಲ.
ಪೋಲ್ ಡ್ಯಾನ್ಸ್ ಮಾಡಿ ರಂಜಿಸಿದ ಸನ್ನಿ ಮೈ ಮಾದಕತೆಯಿಂದ ಪೋರ್ನ್ ಚಿತ್ರದ ದೃಶ್ಯಕ್ಕೆ ಅಣಿಯಾಗುವಂತೆ ಕಾಣುತ್ತಿತ್ತು. ಆದರೆ, ಸನ್ನಿ ತನ್ನ ಮನ ಹತೋಟಿಯಲ್ಲಿಟ್ಟುಕೊಂಡಿರುವುದು ಏಕೆ ಎಂಬುದು ಮಾತ್ರ ನಿಗೂಢವಾಗಿದೆ.
ಸನ್ನಿ ಬಗ್ಗೆ ಆಕೆಯ ಬೆತ್ತಲೆ ಚಿತ್ರಗಳ ಬಗ್ಗೆ ಸಲ್ಮಾನ್ ಗೆ ಯಾವುದೇ ಮುಜುಗರವಿಲ್ಲ. ಆಕೆ ಆ ಕ್ಷೇತ್ರದಲ್ಲಿ ವೃತ್ತಿಪರಳಾಗಿ ಮೆರೆದಿದ್ದಾಳೆ. ಆಕೆ ಕುಟುಂಬದವರು ಒಪ್ಪಿದ ಮೇಲೆ ಮುಗಿಯಿತು. ಅದರಲ್ಲಿ ತಪ್ಪೇನಿಲ್ಲ ಎಂದಿದ್ದಾನೆ.
ಸಲ್ಮಾನ್ ಖಾನ್ ಚಿತ್ರದ ಮೂಲಕ ಹೊಸ ಬೆಡಗಿಯರು ಬಾಲಿವುಡ್ ಗೆ ಎಂಟ್ರಿ ಕೊಡುವುದು ಕಾಮನ್. ಅದರೆ, ಸನ್ನಿ ಬಾಲಿವುಡ್ ಎಂಟ್ರಿ ಬಗ್ಗೆ ಕೂಡಾ ಬಾಯಿ ಬಿಟ್ಟಿಲ್ಲ. ಸಲ್ಮಾನ್ ಸಲಹೆಯಂತೆ ಸನ್ನಿ ತನ್ನ ಪೋರ್ನ್ ಸ್ಟಾರ್ ಇಮೇಜ್ ವಿಷ್ಯ ಮುಚ್ಚಿಟ್ಟಿದ್ದಾಳೆ ಎನ್ನಲಾಗಿದೆ.
ಬಿಗ್ ಬಾಸ್ ಇತರೆ ಸ್ಪರ್ಧಿಗಳು ಅಕಸ್ಮಾತ್ ಆಗಿ ಆಕೆಯ ಪೋರ್ನ್ ಚಿತ್ರಗಳ ಬಗ್ಗೆ ಪ್ರಶ್ನಿಸಿದಾಗ ಕೂಡಾ ಸನ್ನಿ ಮೌನವಾದಳು.. ಕೊನೆಗೆ ಕಣ್ಣೀರ ಕೋಡಿ ಹರಿಸಿದಳು.


Click it and Unblock the Notifications











