twitter
    For Quick Alerts
    ALLOW NOTIFICATIONS  
    For Daily Alerts

    ಕರ್ನಾಟಕ ಬಜೆಟ್ 2011-12; ಕನ್ನಡ ಚಿತ್ರರಂಗಕ್ಕೆ ಸಿಕ್ಕಿದ್ದೇನು?

    By Rajendra
    |

    ಕನ್ನಡ ಚಿತ್ರರಂಗದ ಬಹುದಿನಗಳ ಬೇಡಿಕೆಯನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಗುರುವಾರ ಮಂಡಿಸಿದ 6ನೇ ಬಜೆಟ್‌ನಲ್ಲಿ ಈಡೇರಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಒಂದಷ್ಟು 'ಕೊಡುಗೆ'ಗಳನ್ನು ನೀಡುವ ಮೂಲಕ ಕನ್ನಡ ಚಿತ್ರರಂಗದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಚಲನಚಿತ್ರ ಚಟುವಟಿಕೆಗಳಿಗೆ ವಿಧಿಸುತ್ತಿದ್ದ ಶೇ.5 ಮೌಲ್ಯಾಧಾರಿತ ತೆರಿಗೆಯನ್ನು ರದ್ದುಗೊಳಿಸಲಾಗಿದೆ.

    ಇಷ್ಟಕ್ಕೂ ಅವರು ಕನ್ನ್ನಡ ಚಿತ್ರರಂಗಕ್ಕೆ ಏನೇನು ಕೊಡುಗೆಗಳನ್ನು ನೀಡಿದ್ದಾರೆ ಎಂಬುದನ್ನು ನೋಡಿ. ಈ ಹಿಂದೆ 50 ಚಿತ್ರಗಳಿಗೆ ನೀಡುತ್ತಿದ್ದ ಸಬ್ಸಿಡಿಯನ್ನು 75 ಚಿತ್ರಗಳಿಗೆ ಏರಿಸಿದ್ದಾರೆ. ಈ ಆರ್ಥಿಕ ವರ್ಷದಿಂದ 75 ಗುಣಾತ್ಮಕ ಕನ್ನಡ ಚಿತ್ರಗಳಿಗೆ ರು.10 ಲಕ್ಷ ಸಬ್ಸಿಡಿ ಘೋಷಿಸಲಾಗಿದೆ. ಕಂಠೀರವ ಸ್ಟುಡಿಯೋ ಜೀರ್ಣೋದ್ಧಾರ ಮಾಡಲು ರು.5 ಕೋಟಿ ನೀಡಲಾಗಿದೆ.

    ಉಳಿದಂತೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕಾಗಿ ರು.5 ಕೋಟಿ ಹಾಗೂ ತುಮಕೂರಿನಲ್ಲಿ ಹಾಸ್ಯ ಚಕ್ರವರ್ತಿ ದಿವಂಗತ ನರಸಿಂಹರಾಜು ಕಲಾ ಮಂದಿರ ನಿರ್ಮಿಸಲು ರು.1 ಕೋಟಿಯನ್ನು ಅನುದಾನ ನೀಡಲಾಗಿದೆ. ಕನ್ನಡ ಚಿತ್ರರಂಗಕ್ಕೆ ಒಂದಷ್ಟು ಕೊಡುಗೆಗಳನ್ನು ನೀಡುರುವ ಮುಖ್ಯಮಂತ್ರಿಗಳಿಗೆ ಕರ್ನಾಟಕ ಚಲನಚಿತ್ರ ವಾಣಿಕ್ಯ ಮಂಡಳಿ ಕೃತಜ್ಞತೆಗಳನ್ನು ತಿಳಿಸಿದೆ.

    English summary
    Karnataka budget brought smiles to Kannada film industry. Most of the demands put forward by the Karnataka Film Chamber of Commerce (KFCC) were fulfilled in the budget.The film industry’s main demand was extending Rs10 lakh subsidy to 75 films a year. Currently, the government is giving Rs10 lakh subsidy for 50 films a year.
    Friday, February 25, 2011, 11:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X