ನರ್ತಕಿಯಲ್ಲಿ ಕೋಟಿ ರು ದಾಟಿದ 'ಸಾರಥಿ' ಕಮಾಲ್

ಬೆಂಗಳೂರಿನ ನರ್ತಕಿ ಬಾಕ್ಸ್ ಆಫೀಸ್ ರಿಪೋರ್ಟ್ ಪ್ರಕಾರ, ಕಳೆದ ವಾರ ಸ್ವಲ್ಪ ಡಲ್ಲಾಗಿದ್ದ ಸಾರಥಿ ಗಳಿಕೆ ಈ ವಾರ ಫುಲ್ ಮೇಲೇರಿದೆ. ವಿಷ್ಣುವರ್ಧನ್ ಚಿತ್ರ ಬಿಡುಗಡೆಯಾದ 2ನೇ ವಾರ ಗಳಿಕೆ ಕಡಿಮೆಯಾದಾಗ ಸಹಜವಾಗಿಯೇ 100 ಡೇಸ್ ಗಿಂತ ಸ್ವಲ್ಪ ಮೊದಲೇ ಚಿತ್ರ ಥಿಯೇಟರಿನಿಂದ ಔಟ್ ಆಗಬಹುದೆಂಬ ಸಂಶಯ ಕೆಲವರನ್ನು ಕಾಡಿತ್ತು.
ಆದರೆ ಚಿತ್ರ ಮತ್ತೆ ಫಿನಿಕ್ಸ್ ನಂತೆ ಮೇಲೆದ್ದಿದ್ದು ಈ ಒಂದೇ ವಾರದ ನರ್ತಕಿ ಚಿತ್ರಮಂದಿರದ ಗಳಿಕೆಯೇ ಕೋಟಿ ದಾಟಿದೆ. ಮೊದಲೆಲ್ಲ ಲಕ್ಷದಲ್ಲಿರುತ್ತಿದ್ದ ಗಳಿಕೆ ಜರ್ರನೆ ಮೇಲೇರಿ ಕೋಟಿ ದಾಟಿರುವುದು ಚಿತ್ರತಂಡಕ್ಕೆ ಅತೀವ ಸಂತಸ ತಂದಿದೆ. ಕಾರಣ ಶತದಿನೋತ್ಸವ ಆಚರಣೆಗೆ ಕೆಲವೇ ದಿನ ಬಾಕಿಯಿದೆ. ಮುಂದಿನ ಪುಟ ನೋಡಿ...
More from Filmibeat
English summary
Challenging Star Darshan movie Sarathi became the super hit of this year 2011 and won Box Office Super Hit title.


Click it and Unblock the Notifications











