ಬಾಬಾ ಶರೀರ ಕಂಡು ಗಳಗಳನೆ ಅತ್ತ ಗಾಯಕಿ ಸುಶೀಲ
ಅದಕ್ಕೂ ಮುನ್ನ ಭಾನುವಾರವೇ ಪುಟ್ಟಪರ್ತಿ ತಲುಪಿದ ನಟ ಚಿರಂಜೀವಿ ಭಾವಪೂರ್ಣ ಶ್ರದ್ದಾಂಜಲಿ ಅರ್ಪಿಸಿದರು. ಹಾಗೆ ನೋಡಿದರೆ ತೆಲುಗು ಚಿತ್ರರಂಗದಲ್ಲಿ ಸಾಯಿಬಾಬಾ ಭಕ್ತರು ಭಾರಿ ಸಂಖ್ಯೆಯಲ್ಲಿದ್ದಾರೆ. ಸುಶ್ರಾವ್ಯ ಗಾಯಕ ಘಂಟಸಾಲ ಅಂದಕಾಲತ್ತಿಲ್ಲೇ ಸಾಯಿಬಾಬಾ ಅವರ ಪರಮಭಕ್ತರು. ಆಗಾಗ ಬಾಬಾ ಆಶೀರ್ವಚನ ಪಡೆಯುವ ಪರಿಪಾಠ ಬೆಳೆಸಿಕೊಂಡಿದ್ದರು. ಡಿಟ್ಟೊ ಮೊಹಮದ್ ರಫಿ. ಜಾತ್ಯತೀತ ಬಾಬಾ ಅವರಿಗೆ ಎಲ್ಲ ಜಾತಿಧರ್ಮದವರೂ ಶಿರಬಾಗಿದ್ದರು. ಹಿರಿಯ ನಟಿ ಅಂಜಲಿ ದೇವಿ, ಸೂಪರ್ ಸ್ಟಾರ್ ರಜನಿಕಾಂತ್, ಬಾಲಿವುಡ್ ನಟ ಮನೋಜ್ ಕುಮಾರ್ ಹೀಗೆ ಬಾಬಾ ಮತ್ತು ಸಿನಿ ಜಗತ್ತಿನ ನಂಟು ದೊಡ್ಡದಾಗಿದೆ.
ಇನ್ನು ಅಲ್ಲಲ್ಲಿ ಸಾಯಿ 'ಪವಾಡ'ಗಳೂ ನಡೆಯುತ್ತಿವೆ. ಸಾಯಿ ಹೆಸರಿನ ನಿರ್ಮಾಪಕ, ನಿರ್ದೇಶಕ ಓಂ ಸಾಯಿ ಪ್ರಕಾಶ್ ಅವರ ವಿಜಯನಗರ ಮನೆಯಲ್ಲೇ ಸಾಯಿಬಾಬಾ ಪವಾಡ ಕಾಣಿಸಿಕೊಂಡಿದೆ. ಸಾಯಿಬಾಬಾ ನಿಧನರಾದ ವೇಳೆಯೇ ಅಂದರೆ ಭಾನುವಾರ ಅವರ ದೊಡ್ಡ ಫೋಟೊ ಫ್ರೇಮ್ ಮೇಲೆ ಸುಮಾರು ಒಂದಂಗುಲ ವಿಭೂತಿ ಉದುರಿದೆ. (ಗ್ಯಾಲರಿ)
ಭಕ್ತಿ ಪ್ರಧಾನ ಶಿರಡಿ ಸಾಯಿಬಾಬಾ ಚಿತ್ರ ನಿರ್ಮಿಸಿದಾಗ ಬಾಬಾ ಅವರು ಖುದ್ದಾಗಿ ಚಿತ್ರ ವೀಕ್ಷಿಸಿದ್ದರು. ಇದೀಗ ಸಾಯಿಬಾಬಾ ಹೋದ ಮೇಲೆ ನಮ್ಮ ಮನೆಯಲ್ಲಿ ವಿಭೂತಿ ಉದುರುತ್ತಿರುವುದರಿಂದ ಬಾಬಾ ನಮ್ಮೊಂದಿಗೇ ಇದ್ದಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸಾಯಿ ಪ್ರಕಾಶ್ ಪ್ರತಿಕ್ರಿಯಿಸಿದ್ದಾರೆ. ಇನ್ನೂ ಅನೇಕ ಭಾಗಗಳಿಂದ ಇಂತಹ ಸುದ್ದಿಗಳು ಬರುತ್ತಿವೆ. ವಿಚಿತ್ರವೆಂದರೆ ಬಾಬಾ ಸಾವಿಗೆ ಕೆಲವೇ ದಿನಗಳ ಹಿಂದೆ ಇಂತಹ ಪವಾಡಗಳು ಶುರುವಾಗಿದ್ದವು.


Click it and Unblock the Notifications












