ಆಂಧ್ರದಲ್ಲಿ ಕ್ರಿಕೆಟ್‌ಗೆ ಹೆದರಿದ ತೆಲುಗು ಡಬ್ಬಿಂಗ್ ಜಾಕಿ
ತೆಲುಗು ಭಾಷೆಗೆ ಡಬ್ ಆಗಿರುವ ಪುನೀತ್ ರಾಜ್ ಕುಮಾರ್ ಅಭಿನಯದ 'ಜಾಕಿ' ಚಿತ್ರ ಏಪ್ರಿಲ್ 8ಕ್ಕೆ ಆಂಧ್ರದಲ್ಲಿ ತೆರೆಗೆ ಅಪ್ಪಳಿಸುತ್ತಿದೆ. ಮಾರ್ಚ್ 18ಕ್ಕೆ ಬಿಡುಗಡೆಯಾಗಬೇಕಿದ್ದ ಈ ಚಿತ್ರ ಕ್ರಿಕೆಟ್ ಕಾರಣ ಈಗ ಏ.8ಕ್ಕೆ ಮುಂದೂಡಲಾಗಿದೆ. ಹಾಗೆಯೇ ಜೂನಿಯರ್ ಎನ್ಟಿಆರ್ ಅಭಿನಯದ 'ಶಕ್ತಿ' ಚಿತ್ರವೂ ಮಾರ್ಚ್ 30ರಂದು ತೆರೆಕಾಣುತ್ತಿದ್ದು 'ಜಾಕಿ'ಯನ್ನು ಮುಂದೂಡಲು ಮತ್ತೊಂದು ಕಾರಣ ಎನ್ನಲಾಗಿದೆ.
ತೆಲುಗು 'ಜಾಕಿ' ಬಿಡುಗಡೆ ಬಳಿಕ ಮಲಯಾಳಂ ಭಾಷೆಗೂ 'ಜಾಕಿ' ಡಬ್ ಆಗಲಿದೆ. ಶೀಘ್ರದಲ್ಲೆ ಮಲಯಾಳಂ 'ಜಾಕಿ'ಯನ್ನು ಬಿಡುಗಡೆ ಮಾಡುವುದಾಗಿ ತೆಲುಗು ನಿರ್ಮಾಪಕ ಕುಮಾರ್ ತಿಳಿಸಿದ್ದಾರೆ. ವಜ್ರೇಶ್ವರಿ ಕಂಬೈನ್ಸ್‌ನ ಹಲವಾರು ಚಿತ್ರಗಳಿಗೆ ಕುಮಾರ್ ಅವರು ಸಾಕಷ್ಟು ಸಲಹೆ ಸೂಚನೆಗಳನ್ನೂ ನೀಡಿದ್ದರು. ವರನಟ ಡಾ.ರಾಜ್ ಕುಟುಂಬಕ್ಕೆ ಇವರು ಆತ್ಮೀಯರೂ ಹೌದು. ಕರ್ನಾಟಕದಗಡಿಯಾಚೆಗೆ ಪುನೀತ್ ಚಿತ್ರಗಳ ಮಾರುಕಟ್ಟೆಯನ್ನು ವಿಸ್ತರಿಸಲು ಕುಮಾರ್ ಶ್ರಮಿಸುತ್ತಿದ್ದಾರೆ.
"ಅಪ್ಪು ಕೇವಲನ ನನಗೆ ಗೆಳೆಯನಷ್ಟೇ ಅಲ್ಲ. ನನ್ನ ಮೆಚ್ಚಿನ ನಟ ಕೂಡ. ದೇಶದ ಅತ್ಯಂತ ಪ್ರತಿಭಾನ್ವಿತ ಯುವ ನಟ. ತೆಲುಗಿನ ಜನಪ್ರಿಯ ನಟ ಅಲ್ಲು ಅರ್ಜುನ್ ಕೂಡ ಅಪ್ಪು ಒಬ್ಬ ಒಳ್ಳೆಯ ನೃತ್ಯಪಟು ಹಾಗೂ ಫೈಟಿಂಗ್ ಸ್ಟಾರ್ ಎಂದು ಬಣ್ಣಿಸಿದ್ದಾರೆ. ಅಪ್ಪು ಅವರ ಪ್ರತಿಭೆಯನ್ನು ದೇಶದಾದ್ಯಂತ ಪ್ರದರ್ಶಿಸಲು ಮುಂದಾಗಿದ್ದೇನೆ. ಜಾಕಿ ಚಿತ್ರ ಉಳಿದ ಭಾಷೆಗಳಲ್ಲೂ ಯಶಸ್ವಿಯಾಗಿ ಪ್ರದರ್ಶನ ಕಾಣಲಿದೆ" ಎಂಬ ವಿಶ್ವಾಸವನ್ನು ಕುಮಾರ್ ವ್ಯಕ್ತಪಡಿಸಿದ್ದಾರೆ.


Click it and Unblock the Notifications











