For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಹೆಸರಿನಲ್ಲಿ 25 ಕೋಟಿ ರೂ ವಂಚನೆಗೆ ಯತ್ನ: ಎಸಿಪಿ ಕಚೇರಿಗೆ ಹಾಜರಾದ ನಟ

  By ಫಿಲ್ಮಿ ಬೀಟ್ ಡೆಸ್ಕ್
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರಿನಲ್ಲಿ 25 ಕೋಟಿ ರೂ. ವಂಚಿಸಲು ಯತ್ನ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ದರ್ಶನ್ ಮೈಸೂರಿನ ಎಸಿಪಿ ಕಚೇರಿಗೆ ಹಾಜರಾಗಿದ್ದಾರೆ. ಸುಮಾರು ಅರ್ಧ ಗಂಟೆಯಿಂದ ದರ್ಶನ್ ಎಸಿಪಿ ಕಚೇರಿಯಲ್ಲಿದ್ದು, ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾರೆ.

  ಈ ಪ್ರಕರಣ ಸಂಬಂಧ ಈಗಾಗಲೇ ವೋರ್ವ ಮಹಿಳೆಯನ್ನು ಬಂಧಿಸಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತ ಮಹಿಳೆ ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿ ದರ್ಶನ್ ಬಳಿ ಲೋನ್ ವಿಚಾರವಾಗಿ ಮಾತನಾಡಲು ತೆರಳಿದ್ದರು, ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ. ಬಂಧಿತ ಮಹಿಳೆ, ನಿಮ್ಮ ಸ್ನೇಹಿತರು ನಿಮ್ಮ ಶ್ಯೂರಿಟಿಯಲ್ಲಿ ಸಾಲಕ್ಕೆ ಅರ್ಜಿ ಹಾಕಿದ್ದಾರೆ, ಇದರ ಬಗ್ಗೆ ಮಾಹಿತಿ ಪಡೆಯಲು ಬಂದಿರುವುದಾಗಿ ದರ್ಶನ್ ಬಳಿ ಹೇಳಿದ್ದರು.

  ಮೈಸೂರಿನ ಕೆಲ ದರ್ಶನ್ ಸ್ನೇಹಿತರು 25 ಕೋಟಿ ರೂ. ಲೋನ್‌ಗೆ ಅರ್ಜಿ ಹಾಕಿದ್ದಾರೆ ಎಂದು ಮಹಿಳೆ ಮಾಹಿತಿ ನೀಡಿದ್ದರು. ಈ ಬಗ್ಗೆ ದರ್ಶನ್ ಪರಿಶೀಲನೆ ನಡೆಸಿದಾಗ ಲೋನ್‌ಗೆ ಯಾರು ಅರ್ಜಿ ಹಾಕಿಲ್ಲ ಎನ್ನುವ ವಿಚಾರ ಗೊತ್ತಾಗಿದೆ. ಬಳಿಕ ದರ್ಶನ್ ಸ್ನೇಹಿತರಿಂದ ಹೆಬ್ಬಾಳ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಬ್ಯಾಂಕ್ ಮ್ಯಾನೇಜರ್ ಹೆಸರಿನಲ್ಲಿ ಬಂದಿದ್ದ ಮಹಿಳೆಯನ್ನು ಬಂಧಿಸಲಾಗಿದೆ.

  ಪೊಲೀಸರ ಕರೆಗೆ ಬೆಚ್ಚಿ ಬಿದ್ದ ದರ್ಶನ್! | Darshan | Filmibeat Kannada

  ಮಹಿಳೆಯ ವಿಚಾರಣೆ ವೇಳೆ ನಿರ್ಮಾಪಕ ಉಮಾಪತಿ ಹೆಸರನ್ನು ಹೇಳಿರುವುದಾಗಿ ಬಹಿರಂಗವಾಗಿದೆ. ಉಮಾಪತಿ ಹೇಳಿದ ಕಾರಣ ದರ್ಶನ್ ಬಳಿ ಬಂದು ಹೇಗೆಲ್ಲ ಮಾಡಿರುವುದಾಗಿ ಮಹಿಳೆ ಪೊಲೀಸರ ಬಳಿ ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ. ನಿಜಕ್ಕೂ ಉಮಾಪತಿ ಹೀಗೆ ಮಾಡಿದ್ರಾ? ಇದರ ಹಿಂದಿನ ನಿಜವಾದ ಉದ್ದೇಶವೇನು? ಎನ್ನುವುದನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಉಮಾಪತಿ ಮತ್ತು ದರ್ಶನ್ ಇಬ್ಬರು ಉತ್ತಮ ಸ್ನೇಹಿತರು. ರಾಬರ್ಟ್ ಸಿನಿಮಾ ಬಳಿಕ ಇಬ್ಬರ ಸ್ನೇಹ ಮತ್ತಷ್ಟು ಗಟ್ಟಿಯಾಗಿತ್ತು. ಇದೀಗ ವಂಚನೆ ಪ್ರಕರಣ ಎಲ್ಲರಲ್ಲೂ ಗೊಂದಲ ಮೂಡಿಸಿದೆ.

  English summary
  25 crores fraud attempt on Darshan Thoogudeepa, Darshan visits ACP police office in mysuru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X