ರಾಜ್ಯಾದ್ಯಂತ ಜನವರಿ 29ಕ್ಕೆ ದರ್ಶನ್ 'ಪೊರ್ಕಿ'
ಛಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕನಾಗಿ ನಟಿಸಿರುವ, ಬಹು ನಿರೀಕ್ಷೆಯ 'ಪೊರ್ಕಿ" ಚಿತ್ರ ಜನವರಿ 29ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಎಂದು ನಿರ್ಮಾಪಕ ದತ್ತಾತ್ರೇಯ ಬಚ್ಚೇಗೌಡ ತಿಳಿಸಿದ್ದಾರೆ. ಸ್ವದೇಶ ಸೇರಿದಂತೆ ವಿದೇಶದ ರಮಣೀಯ ಸ್ಥಳಗಳಲ್ಲಿ ಪೊರ್ಕಿ ಚಿತ್ರದ ಚಿತ್ರೀಕರಣ ನಡೆದಿದೆ.
ವಿ.ಹರಿಕೃಷ್ಣರ ಸಂಗೀತದಲ್ಲಿ ಹೊರಬಂದಿರುವ ಚಿತ್ರದ ಹಾಡುಗಳು ಶ್ರೋತೃಗಳ ಮೆಚ್ಚುಗೆಗೆ ಪಾತ್ರವಾಗಿದೆ ಎನುತ್ತಾರೆ ಚಿತ್ರದ ನಿರ್ದೇಶಕ ಎಂ.ಡಿ.ಶ್ರೀಧರ್. ಪತ್ರಕರ್ತ ಗಣೇಶ್‌ಕಾಸರಗೋಡು ಅರ್ಪಿಸಿರುವ ಈ ಚಿತ್ರ ದತ್ತ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗಿದೆ. ನಿರ್ದೇಶಕರೇ ಚಿತ್ರಕ್ಕೆ ಚಿತ್ರಕಥೆ ಬರೆದಿದ್ದಾರೆ. ಕೃಷ್ಣಕುಮಾರ್ ಛಯಾಗ್ರಹಣವಿರುವ ಈ ಚಿತ್ರಕ್ಕೆ ಸಂತೋಷ್ ಪೈ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.
ಮೋಹನ್ ಕಲಾ ನಿರ್ದೇಶನ, ರವಿವರ್ಮ ಸಾಹಸ, ಸೌಂದರ್‌ರಾಜ್ ಸಂಕಲನ ಹಾಗೂ ಬಿ.ಎ.ಮಧು ಅವರ ಸಂಭಾಷಣೆಯಿರುವ ಚಿತ್ರದ ತಾರಾಬಳಗದಲ್ಲಿ ದರ್ಶನ್, ಪ್ರಣೀತಾ, ಅವಿನಾಶ್, ಆಶೀಷ್ ವಿದ್ಯಾರ್ಥಿ, ಶೋಭ್‌ರಾಜ್, ವಿನಾಯಕರಾಮ, ಮನೋಜ್, ಧರ್ಮ, ಸಂಗೀತಾ ಶೆಟ್ಟಿ, ಚಿತ್ರಾಶೆಣೈ, ಸಾಧುಕೋಕಿಲಾ, ಶರಣ್ ಮುಂತಾದವರಿದ್ದಾರೆ.


Click it and Unblock the Notifications











