ಗಲ್ಲಾಪೆಟ್ಟಿಗೆಯಲ್ಲಿ ಗರಿಗೆದರಿದ 'ಡೆಡ್ಲಿ' ಕಲೆಕ್ಷನ್

By Rajendra

'ಡೆಡ್ಲಿ2' ಚಿತ್ರದ ಮೊದಲ ವಾರದ ಗಳಿಕೆ ನೋಡಿದರೆ ನಿರ್ಮಾಪಕ ಮಂಜುನಾಥ್ ಸದ್ಯಕ್ಕೆ ಸೇಫ್. ನಟ ಆದಿತ್ಯ ಸಿನಿಮಾ ವೃತ್ತಿ ಬದುಕಿನಲ್ಲಿ ಈ ರೀತಿಯ ಒಂದು ಓಪನಿಂಗ್ ಸಿಕ್ಕಿದ ಚಿತ್ರ ಇನ್ನೊಂದಿರಲಿಕ್ಕಿಲ್ಲ. ನಿಜವಾದ ಡೆಡ್ಲಿ ಸೋಮನ ಖದರ್ ಇಷ್ಟಿರಲಿಲ್ಲವೆನೋ ಆ ಪಾಟಿ ಆದಿತ್ಯನ ನಟನೆ, ಮಾಧ್ಯಮ ಮತ್ತು ಪತ್ರಿಕೆಯಲ್ಲಿ ಭಾರೀ ಪ್ರಶಂಸೆಗೆ ಒಳಗಾಗಿತ್ತು.

ನಿರ್ದೇಶಕರ ನಿರೀಕ್ಷೆಯಂತೆ ಚಿತ್ರ ಮಾಸ್ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಫಲವಾಗಿದೆ. ಸುಹಾಸಿನಿ ಮಣಿರತ್ನಂ, ದೇವರಾಜ್, ರವಿಕಾಳೆ ಅಭಿನಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಕನ್ನಡ ಚಿತ್ರಗಳ ಗಲ್ಲಾಪೆಟ್ಟಿಗೆ ಭವಿಷ್ಯ ಹೆಚ್ಚುಕಮ್ಮಿ ಮೊದಲ ವಾರದ ಗಳಿಕೆಯಿಂದ ಅಂದಾಜು ಮಾಡಬಹುದು. ಚಿತ್ರಕ್ಕೆ ಇದೇ ರೀತಿ ಪ್ರೇಕ್ಷಕರಿಂದ ಬೆಂಬಲ ದೊರೆತರೆ ಮೂರನೇ ವಾರದೊಳಗೆ ನನಗೆ ಈ ಚಿತ್ರ ಉತ್ತಮ ಲಾಭ ತಂದುಕೊಡುವುದರಲ್ಲಿ ಸಂಶಯವಿಲ್ಲ ಎನ್ನುವುದು ನಿರ್ಮಾಪಕ ಮಂಜುನಾಥ ಗೌಡರ ಅಂಬೋಣ.

ಚಿತ್ರದಲ್ಲಿನ ಆದಿತ್ಯನ ನಟನೆ ಮತ್ತು ಚಿತ್ರದ ಬಗ್ಗೆ ಆದಿತ್ಯನಿಗೆ ಎಸ್ಎಂಎಸ್ ಮತ್ತು ದೂರವಾಣಿ ಕರೆಗಳು ತಡೆಬಿಡದೇ ಬರುತ್ತಲೇ ಇದೆ. ನಿರ್ದೇಶಕರು ಚಿತ್ರದ ಮೊದಲ ಕಾಪಿ ತೋರಿಸಿದಾಗಲೇ ಈ ಚಿತ್ರ ಹಿಟ್ ಆಗುವುದರಲ್ಲಿ ಡೌಟೇಇಲ್ಲ ಎಂದು ರವಿ ಶ್ರೀವತ್ಸ ಅವರಿಗೆ ಹೇಳಿದ್ದೆ ಎಂದು ಆದಿತ್ಯರ ತಂದೆ ಮತ್ತು ಖ್ಯಾತ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ.

ಪ್ರತಿಭಾವಂತ ನಟ ಆದಿತ್ಯನಿಗೆ ಒಂದು ಹಿಟ್ ಚಿತ್ರದ ತುರ್ತು ಅವಶ್ಯಕತೆಯಿದೆ. ನಟ ಆದಿತ್ಯನ ವೃತ್ತಿ ಬದುಕಿಗೆ ಈ ಚಿತ್ರದ ಮೂಲಕ ಒಂದು ಒಳ್ಳೆ ಬ್ರೇಕ್ ಸಿಗುವಂತಾಗಲಿ ಮತ್ತು ನಿರ್ಮಾಪಕರ ಲೆಕ್ಕಾಚಾರ ತಲೆಕೆಳಗಾಗದಿರಲಿ ಎನ್ನುವುದು ಸಿನಿರಸಿಕರ ಆಶಯ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X