ದುನಿಯಾ ವಿಜಯ್ ಸಂಭಾವನೆ ಪುನೀತ್ ಅರ್ಧದಷ್ಟು!

By Rajendra

ದುನಿಯಾ ವಿಜಯ್ ನಸೀಬು ಈಗ ಬದಲಾಗಿದೆ. ಕನ್ನಡದ ಅತ್ಯಧಿಕ ಸಂಭಾವನೆ ಪಡೆಯುವ ನಟರ ಸಾಲಿನಲ್ಲಿ ದುನಿಯಾ ವಿಜಯ್ ಅವರದು ಎರಡನೇ ಸ್ಥಾನ. ಮೊದಲ ಸ್ಥಾನದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಭದ್ರವಾಗಿ ಕೂತಿದ್ದಾರೆ. ಪುನೀತ್ ಸಂಭಾವನೆ ರು.3.5 ಕೋಟಿ ಎನ್ನುತ್ತವೆ ಮೂಲಗಳು.

ಇನ್ನು ದುನಿಯಾ ವಿಜಯ್ ವಿಚಾರಕ್ಕೆ ಬಂದರೆ ಪುನೀತ್ ಅರ್ಧದಷ್ಟು ತೂಗುತ್ತಾರೆ. ಸದ್ಯಕ್ಕೆ ವಿಜಯ್ ಪಡೆಯುತ್ತಿರುವ ಸಂಭಾವನೆ ರು.1.5 ಕೋಟಿಯಂತೆ. ಹಾಗಂತ ಸ್ವತಃ ದುನಿಯಾ ವಿಜಯ್ ಅವರೇ ಬಾಯ್ಬಿಟ್ಟಿದ್ದಾರೆ. ಇನ್ನು ಅವರುಂಟು ಆದಾಯ ತೆರಿಗೆ ಇಲಾಖೆ ಉಂಟು!

ಬಾಕ್ಸಾಫೀಸಲ್ಲಿ ವಿಜಯ್ ಚಿತ್ರಗಳು ಓಡಲಿ ಮಲಗಲಿ ಅವರ ಸಂಭಾವನೆ ಮಾತ್ರ ಇಷ್ಟಿದೆಯಂತೆ. ಶೀಘ್ರದಲ್ಲೆ ಅವರ ಸ್ವಂತ ನಿರ್ಮಾಣ ಸಂಸ್ಥೆಯೂ ಆರಂಭವಾಗಲಿದೆ. ರಮ್ಯಾ ಜೊತೆ ಅಭಿನಯದ ಜಾನಿ ಮೇರಾ ನಾಮ್ ಚಿತ್ರ ರೆಸ್ಪಾನ್ಸ್ ಚೆನ್ನಾಗಿದ್ದು ಗಲ್ಲಾಪೆಟ್ಟಿಗೆಯಲ್ಲೂ ಕಾಸುಹರಿದಾಡುವಂತೆ ಮಾಡಿರುವುದು ವಿಜಯ್‌ಗೆ ಮತ್ತಷ್ಟು ಬಲತರುವಂತೆ ಮಾಡಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Powerstar Puneet Rajkumar, who is getting Rs. 3.5 crore remuneration for Paramathma, is the highest paid actor in Kannada film industry. After him, Black Cobra Vijay is the second highly paid Kannada actor and the Duniya star himself has confirmed that he is charging Rs. 1.5 crore for a film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X