ಕನ್ನಡಕ್ಕೆ ಬರಲಿದ್ದಾರೆ ದ್ವಿಪಾತ್ರದಲ್ಲಿ ರಜನಿಕಾಂತಾ
ಇನ್ನೂ ತಮ್ಮ ಆರೋಗ್ಯ ಸಂಪೂರ್ಣ ಚೇತರಿಸಿಕೊಂಡಿಲ್ಲ. 'ರಾಣ' ಚಿತ್ರದ ಶೂಟಿಂಗ್ ಕೂಡಾ ಆರಂಭವಾಗಲಿಲ್ಲ ಆಗಲೇ ತಮಿಳ್ ಸೂಪರ್ ಸ್ಟಾರ್ ರಜನೀಕಾಂತ್ ಕನ್ನಡದಲ್ಲಿ ನಟಿಸುತ್ತಿದ್ದಾರೆಂದು ನೀವು ಅಂದು ಕೊಂಡ್ರಾ.. ಇಲ್ಲಾ ಕಂಡ್ರೀ.. ದುನಿಯಾ ವಿಜಯ್ ನಾಯಕನಾಗಿ ಸೆಟ್ಟೇರಿರುವ ಹೊಸ ಚಿತ್ರದ ಹೆಸರೇ 'ರಜನಿ - ಕಾಂತಾ'.
ಈ ಜನಪ್ರಿಯ ಟೈಟಲ್ ಇಟ್ಟು ಕೊಂಡು ಚಿತ್ರ ನಿರ್ಮಿಸುತ್ತಿರುವವರು ಕೊಬ್ಬರಿ ಮಂಜು. ದುನಿಯಾ ವಿಜಯ್ ದ್ವಿಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರವನ್ನು 'ಕಿರಾತಕ' ಚಿತ್ರದ ಯಶಸ್ಸಿನ ಸೂತ್ರಧಾರ ಪ್ರದೀಪ್ ರಾಜ್ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಾಯಕ ರಜನೀಕಾಂತ್ ಅಭಿಮಾನಿಯಂತೆ..ಹೇಗಿದೆ ನೋಡಿ ಚಿತ್ರದ ಟೈಟಲ್ ಮತ್ತು ಅದಕ್ಕೆ ಹೊಂದುವ ಸ್ಟೋರಿ.
ವಿಜಯ್ ಸಿನಿಮಾ ವೃತ್ತಿ ಜೀವನಕ್ಕೆ ಭದ್ರ ಅಡಿಪಾಯ ಹಾಕಿದ ಚಿತ್ರ ದುನಿಯಾ. ಈ ಚಿತ್ರ ಎಷ್ಟರ ಮಟ್ಟಿಗೆ ಯಶಸ್ಸು ಪಡೆದಿತ್ತಂದರೆ ರಜನೀಕಾಂತ್ ಚೆನ್ನೈ ನಿಂದ ಬೆಂಗಳೂರಿಗೆ ಬಂದು ಮೈಸೂರು ರಸ್ತೆಯ ವಿನಾಯಕ ಚಿತ್ರಮಂದಿರದಲ್ಲಿ ಚಿತ್ರ ವೀಕ್ಷಿಸಿದ್ದರು. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











