»   » ಗಂಗೆ ತುಂಗೆಯರಿಗೆ ವಿಶೇಷ ತಂತ್ರಜ್ಞಾನ

ಗಂಗೆ ತುಂಗೆಯರಿಗೆ ವಿಶೇಷ ತಂತ್ರಜ್ಞಾನ

Subscribe to Filmibeat Kannada

ರಕ್ತಕಣ್ಣೀರು, ರಾಕ್ಷಸ, ಸುಂಟರಗಾಳಿ, ಅನಾಥರು ಮೊದಲಾದ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿರುವ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಹಾಸ್ಯನಟ ಸಾಧುಕೋಕಿಲಾ ಅವರ ನಿರ್ದೇಶನದ 'ಗಂಗೆ ಬಾರೆ ತುಂಗೆ ಬಾರೆ' ಚಿತ್ರ ಕರಿಸುಬ್ಬು ಅವರ ಬಾಲಾಜಿ ಡಿಜಿಟಲ್ ಸ್ಟೂಡಿಯೋದಲ್ಲಿ ಡಿ ಟಿ ಎಸ್ ತಂತ್ರಜ್ಞಾನದಿಂದ ಅಲಂಕೃತವಾಗಿದೆ. ವಿಶೇಷ ಗ್ರಾಫಿಕ್ಸ್ ಅಳವಡಿಕೆಯಿಂದ ವಿಜೃಂಭಿಸುತ್ತಿರುವ ಗಂಗೆತುಂಗೆಯರು ಏಪ್ರಿಲ್‌ನಲ್ಲಿ ಕರ್ನಾಟಕದ ಚಲನಚಿತ್ರ ಮಂದಿರಗಳಲ್ಲಿ ಕಾಣಲಿದ್ದಾರೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಪುತ್ತೂರು ಮಹಾಲಿಂಗೇಶ್ವರ ಕ್ರಿಯೇಷನ್ಸ್ ಲಾಂಛನದಲ್ಲಿ ಎಂ.ಜಿ.ರಾಮಮೂರ್ತಿ ಅರ್ಪಿಸಿ ಭೋಜರಾಜ್ ರೈ ನಿರ್ಮಿಸಿರುವ ಈ ಚಿತ್ರದ ಎರಡು ಹಾಡುಗಳು ವಿದೇಶದಲ್ಲಿ ಚಿತ್ರೀಕೃತವಾಗಿದೆ. ಸಾಧುಕೋಕಿಲಾ ಅವರು ಸಂಗೀತ ಸಂಯೋಜಿಸಿರುವ ಚಿತ್ರದ ಧ್ವನಿಸುರುಳಿಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ದೊರಕಿದೆ.

ಚಂದ್ರು ಕ್ಯಾಮೆರಾ, ನಂಜುಂಡ ಸ್ವಾಮಿ ಕಲೆ, ರಾಮಚಂದ್ರ ನಿರ್ಮಾಣ ನಿರ್ವಹಣೆ, ಲಯೇಂದ್ರ ಎಸ್ ರಾಜು ನಿರ್ಮಾಣ ಮೇಲ್ವಿಚಾರಣೆಯಿರುವ ಚಿತ್ರದ ತಾರಾಬಳಗದಲ್ಲಿ ಪ್ರಜ್ವಲ್ ದೇವರಾಜ್, ಸುನೈನಾ, ಗಾಯಿತ್ರಿ, ಭವ್ಯ, ಬುಲೆಟ್ ಪ್ರಕಾಶ್, ಜಿ.ಕೆ.ಗೋವಿಂದರಾವ್ ಮುಂತಾದವರಿದ್ದಾರೆ.

(ದಟ್ಸ್‌ಕನ್ನಡ ಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada