ಹೈದರಾಬಾದಿನಲ್ಲಿ ಗೀತಾಕೃಷ್ಣರ 'ಕಾಫಿ ಶಾಪ್'

ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ನಿರ್ದೇಶನದ ಸಾರಥ್ಯ ವಹಿಸಿರುವ ಗೀತಾಕೃಷ್ಣ ಚಿತ್ರದ ನಿರ್ಮಾಪಕರು ಹೌದು. ಕಾಫಿ ಶಾಪ್ ಗೆ ಕಥೆ, ಚಿತ್ರಕಥೆ, ಸಂಗೀತ ಹಾಗೂ ಸಂಭಾಷಣೆಯ ಕೊಡುಗೆಯೂ ಇವರದೆ.
ಹಿಂದೆ 'ಸಂಕೀರ್ತನ, 'ಕೋಕಿಲಾ, 'ಪ್ರಿಯತಮ ಹಾಗೂ 'ಸರ್ವರ್ ಸುಂದರಂಗಾರು ಮೊದಲಾದ ಚಿತ್ರಗಳನ್ನು ನಿರ್ದೇಶಿಸಿರುವ ಗೀತಾಕೃಷ್ಣ ಅವರು 'ಸಂಕೀರ್ತನ ಚಿತ್ರಕ್ಕಾಗಿ ಪ್ರತಿಷ್ಟಿತ ನಂದಿ ಪ್ರಶಸ್ತಿ ಪಡೆದವರು. ಪ್ರಸಿದ್ದ ನಟಿ ರಮ್ಯಕೃಷ್ಣರನ್ನು ಮೊದಲ ಬಾರಿಗೆ ತೆಲುಗು ಚಿತ್ರರಂಗಕ್ಕೆ ಕರೆತಂದ ಕೀರ್ತಿ ಗೀತಾಕೃಷ್ಣರದು.
ಶಶಾಂಕ್ ಹಾಗೂ ಬಿಯಾಂಕ ದೇಸಾಯಿ ನಾಯಕ,ನಾಯಕಿಯರಾಗಿ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತ ಗಿರೀಶ್ ಕಾರ್ನಾಡ್ ಅವರು ಮುಖ್ಯ ಪಾತ್ರ ನಿರ್ವಹಿಸುತ್ತಿದ್ದಾರೆ. ಚಿತ್ರದ ಛಾಯಾಗ್ರಾಹಕ ಮುರುಳಿ ರಘು. ನ್ಯೂಯಾರ್ಕ್ ಯೂನಿವರ್ಸಿಟಿಯಲ್ಲಿ ತರಬೇತಿ ಪಡೆದಿರುವ ಇವರು ಭಾರತ ಚಿತ್ರರಂಗದಲ್ಲೇ ಪ್ರಥಮ ಬಾರಿಗೆ ರೆಡ್ 1 ಕ್ಯಾಮೆರಾವನ್ನು ಕಾಫಿ ಶಾಪ್ ಚಿತ್ರಕ್ಕಾಗಿ ಬಳಸುತ್ತಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











