twitter
    For Quick Alerts
    ALLOW NOTIFICATIONS  
    For Daily Alerts

    ಒಟ್ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಸೀಬು ನೆಟ್ಟಗಿಲ್ಲ

    By Rajendra
    |
    <ul id="pagination-digg"><li class="previous"><a href="/news/25-why-ganesh-movie-maduve-mane-failed-aid0052.html">« Previous</a>

    Golden Star Ganesh
    'ಮದುವೆ ಮನೆ' ಚಿತ್ರದಲ್ಲಿ ಗಣೇಶ್ ಲವಲವಿಕೆಯಿಂದ ಅಭಿನಯಿಸಿದ್ದರೂ ಚಿತ್ರ ಗೆದ್ದಿಲ್ಲ. ನಸೀಬು ನೆಟ್ಟಗಿಲ್ಲ ಎಂದರೆ ಆ ತಿರುಪತಿ ತಿಮ್ಮಪ್ಪ ನಾಮವೇ ಗತಿ. ಮದುವೆ ಮನೆ ಚಿತ್ರಕ್ಕೆ ಗಣೇಶ್ ರು.11 ಲಕ್ಷ ಸಂಭಾವನೆ ಪಡೆದಿದ್ದರಂತೆ. ಆದರೆ ಮೊದಲ ಪೇಮೆಂಟ್ ಆದ ಮೇಲೆ ಎರಡನೇ ಪೇಮೆಂಟ್‌ಗೆ ರೆಹಮಾನ್ ಜೇಬು ಖಾಲಿಯಾಗಿತ್ತು. ಆದರೆ ಗಣೇಶ್ ಮಾತ್ರ ತಕರಾರು ಮಾಡದೆ ಚಿತ್ರ ಮುಗಿಸಿಕೊಟ್ಟಿದ್ದಾರೆ. ಇದು ಅವರ ದೊಡ್ಡತನ ಎಂದೇ ಹೇಳಬೇಕು.

    ಯಾಕೋ ಏನೋ ಗಣೇಶ್‌ಗೆ ಅದೃಷ್ಟ ಎರಡೂ ಕೈ ಎತ್ತಿದಂತಿದೆ. ಅವರ ಅಭಿನಯದ 'ಕೂಲ್' ಚಿತ್ರ ಕೂಲಾಗಿ ಫೇಲಾಯಿತು. 'ಮದುವೆ ಮನೆ' ಪರಿಸ್ಥಿತಿ ಹೀಗಾಯಿತು. ಈಗ ಗಣೇಶನಿಗೆ ಉಳಿದಿರುವುದು 'ಶೈಲೂ' ಚಿತ್ರ ಮಾತ್ರ. ಎಸ್ ನಾರಾಯಣ್ ಏನಾದರೂ ಮ್ಯಾಜಿಕ್ ಮಾಡಿದರೆ ಗಣೇಶ್ ಗೋಲ್ಡನ್ ಡೇಸ್ ಮತ್ತೆ ಬರಬಹುದು. 'ಶೈಲೂ' ಹಾಡುಗಳು ಕೇಳುಗರ ಮನಸ್ಸನ್ನು ತಟ್ಟಿವೆ. ಶತಾಯು ಗತಾಯ ಗಣೇಶ್ ಹಿಟ್ ನಿರೀಕ್ಷೆಯಲ್ಲಿದ್ದಾರೆ.

    ರೆಹಮಾನ್ ಮಾತ್ರ ಚಿತ್ರರಂಗದ ಸಹವಾಸೇ ಸಾಕು ಎಂಬ ನಿರ್ಧಾರಕ್ಕೆ ಬಂದಿದ್ದಾರಂತೆ. ಮಂಜು ಏನೋ ಚಿತ್ರ ಸೂಪರ್ ಅಂತಾನೆ. ಆದರೆ ಮದುವೆ ಮನೆಗೆ ಮಾತ್ರ ಜನ ಬರ್ತಾಯಿಲ್ಲ ಎಂದು ರೆಹಮಾನ್ ಒಂದೇ ಕಣ್ಣಿನಲ್ಲಿ ಅಳುತ್ತಾ ಕೂತಿದ್ದಾರೆ. ರೆಹಮಾನ್‌ಗೆ ಸಮಾಧಾನ ಸಿಗುವಂತಾಗಲಿ. ಹಾಗೆಯೇ ಶೈಲೂ ಚಿತ್ರದ ಮೂಲಕ ಗಣೇಶ್ ಗೋಲ್ಡನ್ ಡೇಸ್ ಮತ್ತೆ ಬರಲಿ ಎಂದು ಆಶಿಸೋಣ. (ಏಜೆನ್ಸೀಸ್)

    <ul id="pagination-digg"><li class="previous"><a href="/news/25-why-ganesh-movie-maduve-mane-failed-aid0052.html">« Previous</a>

    English summary
    Golden Star Ganesh these days facing streak of bad luck. His latest movie Maduve Mane not doing well at box office. sources says producer Rehman sold his house and he is under loss.
    Friday, November 25, 2011, 21:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X