'ಕೃಷ್ಣನ್ ಮ್ಯಾರೇಜ್ ಸ್ಟೋರಿ'ಗೆ ಅದ್ದೂರಿ ಗೀತೆ
'ಕೃಷ್ಣನ್ ಮ್ಯಾರೇಜ್ ಸ್ಟೋರಿ' ಚಿತ್ರಕ್ಕಾಗಿ ಸಂಗೀತ ನಿರ್ದೇಶಕ ಶ್ರೀಧರ್ ವಿ ಸಂಭ್ರಮ್ ಬರೆದಿರುವ "ನಿದ್ದೆ ಬಂದಿಲ್ಲ ನನಗೆ ನಿದ್ದೆ ಬಂದಿಲ್ಲ ರಾತ್ರಿಯಲ್ಲಾ ನಿನ್ನ ನೆನಪಲ್ಲಿ ನಿದ್ದೆ ಬಂದಿಲ್ಲ..." ಎಂಬ ಗೀತೆಯ ಚಿತ್ರೀಕರಣ ದೊಡ್ಡಬಳ್ಳಾಪುರದ ಪಿ.ಜಿ.ಮಲ್ಲಪ್ಪ ಗಾರ್ಡನ್‌ನಲ್ಲಿ ನಡೆದಿದೆ. ಈ ಅದ್ದೂರಿ ಗೀತೆಗೆ ಹರ್ಷ ನೃತ್ಯ ಸಂಯೋಜನೆ ಮಾಡಿದ್ದಾರೆ.
ಅಜಯ್, ನಿಧಿಸುಬ್ಬಯ್ಯ, ಜೈಜಗದೀಶ್, ವಿನಯಾಪ್ರಸಾದ್, ಸಂಗೀತ, ಭಾರ್ಗವಿನಾರಾಯಣ್, ನಾಗೇಂದ್ರ ಶಾ, ಬಾಲರಾಜ್, ಸುರೇಶ್‌ಮಂಗಳೂರು, ಜಯಲಕ್ಷ್ಮೀ, ಸಂಧ್ಯಾ, 40ಜನ ನರ್ತಕರು, 10ಜನ ರೂಪದರ್ಶಿಗಳು ಹಾಗೂ 100ಕ್ಕೂ ಹೆಚ್ಚು ಜನ ಸಹ ಕಲಾವಿದರು ಈ ಹಾಡಿನ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.
ದೀಕ್ಷ ಪ್ರೊಡಕ್ಷನ್ಸ್ ಲಾಂಛನದಲ್ಲಿ ವಿಜಯ್‌ಕುಮಾರ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನೂತನ್ ಉಮೇಶ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಶೇಖರ್‌ಚಂದ್ರ ಛಾಯಾಗ್ರಹಣ, ಶ್ರೀ ಸಂಕಲನ, ರವಿವರ್ಮ ಸಾಹಸ, ಮಂಜು ಮಾಂಡವ್ಯ ಸಂಭಾಷಣೆ ಹಾಗೂ ಚಂಪಕಧಾಮ ಬಾಬು ಅವರ ನಿರ್ಮಾಣನಿರ್ವಹಣೆಯಿದೆ.
ಈ ಚಿತ್ರದ ತಾರಾಬಳಗದಲ್ಲಿ ಅಜಯ್‌ರಾವ್, ನಿಧಿಸುಬ್ಬಯ್ಯ, ಜೈಜಗದೀಶ್, ವಿನಯಾಪ್ರಸಾದ್, ಸಂಗೀತ, ಸುರೇಶ್‌ಮಂಗಳೂರು, ಬಾಲರಾಜ್, ಜಯಲಕ್ಷ್ಮೀ, ಭಾರ್ಗವಿನಾರಾಯಣ್, ಸ್ವಯಂವರಚಂದ್ರು, ನಾಗೇಂದ್ರ ಶಾ, ಮುಂತಾದವರಿದ್ದಾರೆ.


Click it and Unblock the Notifications











