ಮಂಗಳೂರು ಪೋರಿಗೆ ಸಚಿವರ ಒಲವಿನ ಉಡುಗೊರೆ
ಮಂಗಳೂರು ಪೋರಿ, ತುಳು ಬೆಡಗಿ ಅನುಷ್ಕಾ ಶೆಟ್ಟಿ ಈಗ ಆಂಧ್ರ ಮತ್ತು ತಮಿಳುನಾಡಿನಲ್ಲಿ ಸಖತ್ ಬಿಜಿ ನಟಿ. ಆಂಧ್ರ ಸಚಿವರೊಬ್ಬರು ಈಕೆಗೆ ದುಬಾರಿ ಕಾರೊಂದನ್ನು ಉಡುಗೊರೆಯಾಗಿ ನೀಡಿರುವುದು ಆಂಧ್ರ ರಾಜ್ಯದಾದ್ಯಂತ ಸಂಚಲನ ಸೃಷ್ಟಿಸಿದೆ.
ಇವರಿಬ್ಬರಿಗೂ ಇರುವ ಸಂಬಂಧ ಏನು? ಇಷ್ಟೊಂದು ದುಬಾರಿ ಕೊಡುಗೆ ನೀಡಿದ್ದಾದರು ಏಕೆ? ಎಂಬ ಪ್ರಶ್ನೆಗಳು ಆಂಧ್ರವನ್ನು ದಾಟಿಕೊಂಡು ಪಕ್ಕದ ರಾಜ್ಯಗಳಿಗೂ ತಾಕಿದೆ. ರೋಶಯ್ಯ ಸಂಪುಟದಲ್ಲಿ ಆರೋಗ್ಯ ಸಚಿವರಾಗಿರುವ ಧನಂ ನಾಗೇಂದರ್ ದುಬಾರಿ ಮರ್ಸಿಡೆಸ್ ಬೆಂಜ್ ಕಾರನ್ನು ಕೊಡುಗೆಯಾಗಿ ನೀಡಿರುವುದೇ ಇಷ್ಟೆಲ್ಲಾ ಅವಾಂತರಗಳಿಗೆ ಕಾರಣವಾಗಿದೆ.
ಈ ಅಪ್ಪಟ ಕನ್ನಡ ಬೆಡಗಿಗೆ ಈ ಹಿಂದೆ ಯಾರೊಂದಿಗೂ ಈ ರೀತಿಯ ಸಂಬಂಧಗಳಿರಲಿಲ್ಲ. ಆಂಧ್ರ ಸೇರಿದಂತೆ ತಮಿಳಿನಲ್ಲೂ ಉತ್ತಮ ಹೆಸರಿತ್ತು. ಆದರೆ ಈಗ ಈಕೆಗೆ ಏನಾಯ್ತೋ ಏನೋ ಕಾಣೆ ಎಂಬ ಮಾತುಗಳು ಕೇಳಿಬಂದಿವೆ. ಇದಕ್ಕೆ ಅನುಷ್ಕಾ ಶೆಟ್ಟಿಯೇ ಉತ್ತರಿಸಬೇಕು. ಆದರೆ ಆಕೆ ಮಾತು ಬೆಳ್ಳಿ ಮೌನ ಬಂಗಾರ ಎಂಬ ಮಾತಿಗೆ ಕಟ್ಟುಬಿದ್ದಿದ್ದಾರೆ.


Click it and Unblock the Notifications











