For Quick Alerts
  ALLOW NOTIFICATIONS  
  For Daily Alerts

  ಚಿತ್ರವೊಂದಕ್ಕೆ ಜೂನಿಯರ್ ಎನ್ಟಿಆರ್ ರೇಟು...

  By Rajendra
  |

  ತೆಲುಗು ಚಿತ್ರಸೀಮೆಯಲ್ಲಿ ಯಂಗ್ ಟೈಗರ್ ಎಂದೇ ಬಿರುದಾಂಕಿತ ಜೂನಿಯರ್ ಎನ್ಟಿಆರ್ ಈಗ ನಿರ್ಮಾಪಕರ ಪಾಲಿಗೆ ಕಲ್ಪವೃಕ್ಷ. ಟಾಲಿವುಡ್‌ನಲ್ಲಿ ಅತ್ಯಧಿಕ ಸಂಭಾವನೆ ಪಡೆಯುವ ತಾರೆಗಳ ಲಿಸ್ಟ್‌ನಲ್ಲಿ ಸೇರ್ಪಡೆಯಾಗಿದ್ದಾರೆ.

  ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗ ಕುಂಬಳಕಾಯಿ ಗಾತ್ರವಿದ್ದ ತಮ್ಮ ಹೊಟ್ಟೆಯನ್ನು ಈಗ ನಿಂಬೆಹಣ್ಣು ಗಾತ್ರಕ್ಕೆ ಇಳಿಸಿದ್ದಾರೆ. ಡ್ಯಾನ್ಸ್‍, ಫೈಟ್ಸ್‌ನಲ್ಲಿ ಮಿಂಚುತ್ತಿರುವ ಜೂ.ಎನ್ಟಿಆರ್ ಸಂಭಾವನೆ ಈಗ ಹತ್ತು ಕೋಟಿಯನ್ನು ದಾಟಿದೆ. ಇನ್ನೂ ಸೆಟ್ಟೇರದ ತಮ್ಮ ಲೇಟೆಸ್ಟ್ ಚಿತ್ರ 'ಬಾದ್‌ಶಾ'ಗಾಗಿ ರು.12 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನುತ್ತದೆ ಟಾಲಿವುಡ್.

  ಸದ್ಯಕ್ಕೆ ಜೂ.ಎನ್ಟಿಆರ್ ಮತ್ತೊಂದು ಭರ್ಜರಿ ಚಿತ್ರ ಧಮ್ಮು ವಿನಲ್ಲಿ ಅಭಿನಯಿಸುತ್ತಿದ್ದಾರೆ. ಇದಾದ ಬಳಿಕ ಬಾದ್‌ಶಾ ಎಂಬ ಚಿತ್ರ ಸೆಟ್ಟೇರಲಿದೆ. ಜೂ.ಎನ್ಟಿಆರ್ ಮೇಲೆ ಹಿಂದೆ ಮುಂದೆ ನೋಡದೆ ನಿರ್ಮಾಪಕರು ಕೋಟಿಗಟ್ಟಲೆ ದುಡ್ಡು ಸುರಿಯುತ್ತಿದ್ದಾರೆ. ಚಿತ್ರವೇನಾದರೂ ತೋಪಾದರೆ ನಿರ್ಮಾಪಕನಿಗೆ ಚಂಬೇ ಗತಿ. (ಏಜೆನ್ಸೀಸ್)

  English summary
  The latest buzz in the Telugu film industry is that Jr NTR turned the highest paid actor in Tollywood. As per the sources Jr NTR for his next film by paying him a huge amount of RS 12 Cores , which is the highest amount paid to a Telugu actor so far.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X