»   » ಹರಿಪ್ರಿಯಾಳ ಈ ಸಂಭಾಷಣೆ ಮುಕ್ತಾಯ

ಹರಿಪ್ರಿಯಾಳ ಈ ಸಂಭಾಷಣೆ ಮುಕ್ತಾಯ

Subscribe to Filmibeat Kannada

ಹಿಂದೆ ಕೆಲವು ನಿರ್ಮಾಪಕರು ಹಾಕಿದ ಯೋಜನೆಯಂತೆ ಚಿತ್ರ ಪೂರ್ಣಮಾಡಲು ಹರಸಾಹಸ ಪಡಿತ್ತಿದ್ದ ಕಾಲವೊಂದಿತ್ತು. ಆದರೆ ಈಗ ಕಾಲ ಬದಲಾಗಿದೆ. ಶ್ರೀಮಂತ ನಿರ್ಮಾಪಕರ ಆಗಮನದಿಂದ ಕನ್ನಡ ಚಿತ್ರಗಳು ಹಾಕಿದ ಯೋಜನೆಯಂತೆ ಪೂರ್ಣವಾಗುವುದ್ದಲ್ಲದೆ ಅದ್ದೂರಿಯಾಗೂ ಮೂಡಿಬರುತ್ತಿದೆ.

ಮೇಜರ್ ಶ್ರೀನಿವಾಸ್‌ಪೂಜಾರ್ ಅವರು ತಮ್ಮ ಮಗ ಸಂದೇಶನಿಗಾಗಿ ಜ್ಯೋತಿಸವರಾಜ್ ಅವರೊಡಗೂಡಿ ನಿರ್ಮಿಸುತ್ತಿರುವ 'ಈ ಸಂಭಾಷಣೆ ಚಿತ್ರಕ್ಕೆ ಹಾಕಿಕೊಂಡ ಯೋಜನೆಯಂತೆ 45 ದಿನಗಳ ಚಿತ್ರೀಕರಣ ಪೂರ್ಣವಾಗಿದೆ. ಮೊದಲ ನಿರ್ದೇಶನದಲ್ಲೇ ಶೀಘ್ರವಾಗಿ ಚಿತ್ರೀಕರಣ ಪೂರೈಸಿದ ಸಾಲಿಗೆ ಸೇರಿರುವ ರಾಜಶೇಖರ್ ನುಡಿದಂತೆ ನಡೆದಿದ್ದಾರೆ ಹಾಗೂ ನಿರ್ಮಾಪಕರ ಅಭಿನಂದನೆಗೆ ಪಾತ್ರರಾಗಿದ್ದಾರೆ.

ಚಿತ್ರೀಕರಣ ಪೂರ್ಣವಾಗಿರುವ 'ಈ ಸಂಭಾಷಣೆಗೆ ಖ್ಯಾತ ಸಂಕಲನಕಾರ ಸುರೇಶ್ ಅರಸ್ ಈಗ ಸಂಕಲನ ಪ್ರಕ್ರಿಯೆ ನಡೆಸುತ್ತಿದ್ದಾರೆ. ನವೆಂಬರ್ ತಿಂಗಳಲ್ಲಿ ಚಿತ್ರವನ್ನು ತೆರೆಯಮೇಲೆ ತರುವ ಇರಾದೆ ನಿರ್ಮಾಪಕರಿಗಿದೆ. ನಿರ್ದೇಶಕರೇ ಕತೆ, ಚಿತ್ರಕತೆ ಬರೆದಿರುವ ಚಿತ್ರಕ್ಕೆ ವಿ.ಮನೋಹರ್ ಸಂಗೀತ ಸಂಯೋಜಿಸಿದ್ದಾರೆ. ಕೆ.ಎಸ್.ಚಂದ್ರಶೇಖರ್ ಛಾಯಾಗ್ರಹಣವಿರುವ ಚಿತ್ರದಲ್ಲಿ ಸಂದೇಶ್, ಹರಿಪ್ರಿಯ ನಾಯಕ, ನಾಯಕಿಯರಾಗಿದ್ದಾರೆ. ಜ್ಯೋತಿರಾಣಾ, ಶರಣ್, ಸುಮಲತಾ ಅಂಬರೀಶ್, ಬಿ.ಗಣಪತಿ, ಬುಲೆಟ್ ಪ್ರಕಾಶ್, ವಿ.ಮನೋಹರ್ ಉಳಿದ ತಾರಾಬಳಗದಲಿದ್ದಾರೆ.

**********
ಗೋವರ್ಧನ್ ನೀಡುತ್ತಾರೆ ರಸಗುಲ್ಲ
ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಚಿತ್ರಗಳು ನಿರ್ಮಾಣವಾಗುತ್ತಿರುವ ಬೆನ್ನಲ್ಲೇ ವಿಶಿಷ್ಟವಾದ ಶೀರ್ಷಿಕೆಗಳು ಕೇಳಿ ಬರುತ್ತಿದೆ. ದೇವರ ಹೆಸರಿನಿಂದ ಆರಂಭವಾಗಿ ಸ್ಥಳ, ರಾಜರಾದಿಯಾಗಿ ಎಲ್ಲಾ ವಿಭಾಗದ ಪ್ರಸಿದ್ದ ಹೆಸರುಗಳು ಚಿತ್ರದ ಶೀರ್ಷಿಕೆಗಳಾಗಿದೆ. ಸಂಗೀತ ನಿರ್ದೇಶಕ ಹಾಗೂ ಹಲವು ಹಿಂದಿ ಚಿತ್ರಗಳ ನಿರ್ಮಾಪಕರಾಗಿರುವ ಗೋವರ್ಧನ್ ಅವರು ತಮ್ಮ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ 'ರಸಗುಲ್ಲ' ಎಂಬ ಸಿಹಿ ತಿಂಡಿಯ ಹೆಸರಿಟ್ಟಿದ್ದಾರೆ. ಕನ್ನಡದಲ್ಲಿ ಕೇಳಿ ಬರುತ್ತಿರುವ ವಿಶಿಷ್ಟ ಶೀರ್ಷಿಕೆಗಳ ಸಾಲಿಗೆ ಸಿಹಿ ತಿನಿಸೊಂದರ ಹೆಸರು ಸೇರಿಸಿದ ಖ್ಯಾತಿಗೆ ನಿರ್ದೇಶಕರು ಭಾಜನರಾಗಿದ್ದಾರೆ.

ಆರಂಭದ ದಿನದಿಂದಲ್ಲೂ ಚಿತ್ರಕ್ಕೆ ಬಿರುಸಿನ ಚಿತ್ರೀಕರಣ ನಡೆಸುತ್ತಾ ಬಂದಿರುವ ನಿರ್ದೇಶಕರು ಸಾಹಿತಿ ರುದ್ರಮೂರ್ತಿ ಶಾಸ್ತ್ರಿ ರಚಿಸಿರುವ"ಕಣ್ಣು ಕೂಡಿದೆ ಬಣ್ಣ ತುಂಬಿದೆ ...ಆಸೆ ಮಾಗಿದೆ, ನನ್ನ ತೂಗಿದೆ', 'ಯಾವ ಮಾಯವೋ ಮೋಡಿ ಮಾಡಿದೆ....ಪ್ರೀತಿ ಗುಂಗಿನ ರಂಗು ಏರಿದೆ' ಎಂಬ ಗೀತೆಯನ್ನು ನಾಯಕಿಯರಾದ ಪ್ಯೂಷ್‌ವಾಣಿ ಹಾಗೂ ಕಶೀಷ್ ಅಭಿನಯದಲ್ಲಿ ವಹೀದಾ ರೆಹಮಾನ್ ಸ್ಟೂಡಿಯೋದಲ್ಲಿ ಚಿತ್ರೀಕರಿಸಿಕೊಂಡರು.

ಮುಂಬೈನ ಖ್ಯಾತ ನೃತ್ಯ ನಿರ್ದೇಶಕ ಹೇಮುಸಿನ್ನಾ ಈ ಗೀತೆಗೆ ನೃತ್ಯ ಸಂಯೋಜಿಸಿದ್ದಾರೆ. ಸಂಜನಾ ಅವರು ನಿರ್ಮಿಸುತ್ತಿರುವ ರಸಗುಲ್ಲ ಚಿತ್ರಕ್ಕೆ ನಿರ್ದೇಶಕರೇ ಕತೆ, ಚಿತ್ರಕತೆ ಬರೆದಿದ್ದು ಸಂಗೀತ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ರುದ್ರಮೂರ್ತಿ ಶಾಸ್ತ್ರಿ ಅವರ ಗೀತರಚನೆ ಹಾಗೂ ಸಂಭಾಷಣೆಯಿರುವ ಚಿತ್ರದ ತಾರಾಬಳಗದಲ್ಲಿ ಪ್ಯೂಷ್‌ವಾಣಿ, ಆನಂದ್, ಕಶೀಷ್‌ರೀಟಾ, ಆರ್ಯ, ಮನೋಜ್ ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಸಿನಿ ವಾರ್ತೆ)
ಮುಖ್ಯಮಂತ್ರಿ ಐ ಲವ್ ಯೂ ಚಿತ್ರದ ಹರಿಪ್ರಿಯ
ವಿ.ಮನೋಹರ್ ಸಂಗೀತಕ್ಕೆ ಹರಿಪ್ರಿಯ ನರ್ತನ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada