For Quick Alerts
  ALLOW NOTIFICATIONS  
  For Daily Alerts

  ಇವನು ಕನ್ನಡದ ಕ್ವಾಟ್ಲೆ ಪಕ್ಕಾ 420 ನನ್ ಮಗ!

  By Rajendra
  |

  ಕನ್ನಡದಲ್ಲಿ ಮತ್ತೊಂದು ಮಚ್ಚಿನ ಚಿತ್ರ ಸದ್ದಿಲ್ಲದಂತೆ ಸೆಟ್ಟೇರಿದ. ಚಿತ್ರದ ಹೆಸರು ಕ್ವಾಟ್ಲೆ. ಇದರ ಅಡಿಬರಹ 'ಪಕ್ಕಾ 420 ನನ್ಮಗ'. ಕರಾವಳಿ ಹುಡುಗಿ ಯಜ್ಞಾಶೆಟ್ಟಿ ಚಿತ್ರದ ನಾಯಕಿ. ಚಂದ್ರಕಲಾ ಎಂಬುವವರು ಆಕ್ಷನ್ ಕಟ್ ಹೇಳುತ್ತಿರುವ ಚಿತ್ರದ ನಿರ್ದೇಶಕರು.

  ಪಾರ್ಥ ಎಂಬ ಹೊಸಬ ಈ ಚಿತ್ರದ ಮೂಲಕ ಗಾಂಧಿನಗರಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಸ್ನೇಹಪರ್ವ, ಯಾರೇ ನೀ ಹುಡುಗಿ ಚಿತ್ರಗಳಲ್ಲಿ ಪಾರ್ಥ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಕ್ವಾಟ್ಲೆ ಚಿತ್ರದ ಮೂಲಕ ಸ್ವತಂತ್ರ ನಾಯಕ ನಟನಾಗಿ ಹೊರಹೊಮ್ಮುತ್ತಿದ್ದಾರೆ.

  ಚಿತ್ರದ ಶೀರ್ಷಿಕೆ ನೋಡಿದರೆ ಇದು ಪಡ್ಡೆಗಳಿಗಾಗಿಯೇ ತೆಗೆದ ಚಿತ್ರ ಅನ್ನಿಸುತ್ತದೆ. ಒಂದಷ್ಟು ಲವ್, ಸೆಂಟಿಮೆಂಟು ಚಿತ್ರಕ್ಕಿರುತ್ತದೆ. ಒಟ್ಟು 30 ದಿನಗಳ ಕಾಲ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಲಿಯೋ ಸಂಗೀತ, ಕೃಷ್ಣ ಸಾರಥಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ. (ಒನ್‌ಇಂಡಿಯಾ ಕನ್ನಡ)

  English summary
  Actress Yagna Shetty signed for action based Kannada movie Kwatle. Pakka 420 Nanmaga is the tagline of the movie. Newcomer Partha is appearing in lead role. He has acted in ‘Sneha Parva’ and ‘Yaare Nee Hudugi’ films that failed to click.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X