ಸೆನ್ಸಾರ್ ಮಂಡಳಿ ಕೃಪೆಗೆ ಪಾತ್ರವಾದ ಪೆರೋಲ್

By Mahesh

ಚಿತ್ರರಸಿಕರ ಕುತೂಹಲ ಕೆರಳಿಸಿರುವ ಹೆಚ್ಚಾಗಿ ಯುವ ಪ್ರತಿಭೆಗಳೇ ನಟಿಸಿರುವ 'ಪೆರೋಲ್' ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಮುಕ್ತಿ ಸಿಕ್ಕಿದೆ. ಗೌತಮ್ ವಿಷನ್ ಲಾಂಛನದಲ್ಲಿ ಶ್ರೀಮತಿ. ಮಾಲಾ ಎಸ್.ಅರಸ್ ನಿರ್ಮಿಸುತ್ತಿರುವ ಪೆರೋಲ್ ಚಿತ್ರ ವೀಕ್ಷಿಸಿದ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದ್ದಾರೆ.

ಈಗಾಗಲೇ ಚಿತ್ರದ ಹಾಡುಗಳು ಜಾದೂ ಮಾಡತೊಡಗಿವೆ. ಟ್ರೈಲರ್ ಗಳು ಪ್ರತಿ ವಾಹಿನಿಗಳಲ್ಲೂ ಬಿತ್ತರವಾಗುತ್ತಿದೆ. ಅಂಬಾರಿ ಚಿತ್ರದ ನಂತರ ಮತ್ತೊಂದು ಯಶಸ್ಸಿನ ಕನಸು ಹೊತ್ತಿರುವ ಮಂಗಳೂರು ಬೆಡಗಿ ಸುಪ್ರೀತಾ ಜೊತೆಗೆ ಪ್ರದೀಪ್, ಸೂರಜ್, ಲಿಖಿತ್ ಸೇರಿದಂತೆ ಹಲವು ಯುವ ಪ್ರತಿಭೆಗಳ ಸಂಗಮ ಈ ಚಿತ್ರದಲ್ಲಿದೆ. ಐಪಿಎಲ್ ಭರಾಟೆ ಮುಗಿದ ಮೇಲೆ ಏಪ್ರಿಲ್ 2ನೇ ವಾರದಲ್ಲಿ ಬಹುಶಃ ಚಿತ್ರವನ್ನು ಬಿಡುಗಡೆಗೊಳಿಸುವ ಸಾಧ್ಯತೆಯಿದೆ.

ಸುರೇಶ್ ಅರಸ್ ಸಂಕಲನ, ಬಿಎ ಮಧು ಸಂಭಾಷಣೆ, ಕವಿರಾಜ್, ವಿ ನಾಗೇಂದ್ರಪ್ರಸಾದ್ ಹೃದಯ ಶಿವ ಅವರಂಥ್ ಹಿರಿಯ ತಂತ್ರಜ್ಞರು, ಬಿ ಸುರೇಶ್ ,ವಿಜಯ ಸಾರಥಿ, ನಾಗರಾಜಮೂರ್ತಿ ಅವರಂಥ ನಟರ ಜೊತೆಗೆ ಚಿತ್ರಕ್ಕೆ ಸಂಗೀತ ನೀಡಿರುವ ಬಾಲಾಜಿ ಜಿ ಮಿತ್ರನ್, ಛಾಯಾಗ್ರಾಹಕ ಜಿ ಸುರೇಶ್ , ಚಿತ್ರಕಥೆ ಹೆಣೆದು ನಿರ್ದೇಶಿಸಿರುವ ಶೇಖರ್ ಮುಂತಾದವರ ಹೊಸಬರ ಪರಿಶ್ರಮ ಅಡಗಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X