For Quick Alerts
  ALLOW NOTIFICATIONS  
  For Daily Alerts

  ಡಬ್ಬಿಂಗ್ ಯಾವುದೇ ರೀತಿಯಲ್ಲೂ ಮಾರಕವಲ್ಲ

  By *ಅರ್ಪಿತಾ ರಾವ್, ಲಂಡನ್
  |

  ಡಬ್ಬಿಂಗ್ ಎನ್ನುವುದು ಕೇವಲ ಕನ್ನಡ ರಂಗದಲ್ಲಿ ಮಾತ್ರ ಇರುವಂತಹದಲ್ಲ, ಇದು ಎಲ್ಲ ಭಾಷೆಗಳಲ್ಲೂ ಇದೆ .ಬೇರೆಬೇರೆ ಭಾಷೆಗಳಲ್ಲಿ ಪ್ರಸಿದ್ಧಿ ಪಡೆದ ಕಾರ್ಯಕ್ರಮಗಳು ಸಿನಿಮಾಗಳನ್ನು ತಮ್ಮ ಭಾಷೆಗೆ ಡಬ್ಬಿಂಗ್ ಮಾಡುವುದು ಹೊಸತಲ್ಲ .ಹೀಗಿರುವಾಗ ಕನ್ನಡದಲ್ಲೂ ಮಾಡಿದರೆ ಇದರಲ್ಲಿ ಯಾವುದೇ ರೀತಿಯ ತಪ್ಪಿಲ್ಲ. ಜೊತೆಗೆ ಇಲ್ಲಿ ಮಾರಕವಾಗುವುದು ಏನೂ ಇಲ್ಲ.

  ನಮ್ಮ ಕರ್ನಾಟಕದಲ್ಲಿರುವವರಿಗೆ ಕನ್ನಡಿಗರಿಗೆ ತಮ್ಮ ಮಾತೃ ಭಾಷೆ ಕನ್ನಡ ಎಲ್ಲರಿಗೂ ಗೊತ್ತಿರುತ್ತದೆ. ಎಲ್ಲೊ ಓದಿದವರಿಗೆ ಬೇರೆ ಭಾಷೆಯ ಒಡನಾಟ ಇರುವವರಿಗೆ ಕನ್ನಡವಲ್ಲದೆ ಹಲವು ಭಾಷೆ ತಿಳಿದಿರುತ್ತದೆ. ಅಂತವರು ಬೇರೆ ಭಾಷೆಯಲ್ಲಿ ಜನಪ್ರಿಯತೆ ಹೊಂದಿದ ಕಾರ್ಯಕ್ರಮಗಳನ್ನು ಅಥವಾ ಚಲನಚಿತ್ರಗಳನ್ನು ವೀಕ್ಷಿಸಬಹುದು.

  ಆದರೆ ಕೇವಲ ಕನ್ನಡವೊಂದೆ ತಿಳಿದಿರುವವರು ಬೇರೆ ಭಾಷೆಯ ಕಾರ್ಯಕ್ರಮಗಳನ್ನು ನೋಡುವ ಪ್ರಯತ್ನ ಮಾಡುವುದಿಲ್ಲ. ಅದರಲ್ಲೂ ಹಳ್ಳಿಗಳಲ್ಲಿರುವ ಕನ್ನಡಿಗರು ಕನ್ನಡ ಚಲನಚಿತ್ರಗಳನ್ನು ಥಿಯೇಟರ್ ಗಳಿಗೆ ಹೋಗಿ ವೀಕ್ಷಿಸುವುದು ಬಹಳ ಕಡಿಮೆ. ಇನ್ನು ಬೇರೆ ಭಾಷೆಯ ಚಲನಚಿತ್ರಗಳನ್ನು ಅಥವಾ ಟಿವಿ ಕಾರ್ಯಕ್ರಮಗಳನ್ನು ನೋಡುವುದು ಸತ್ಯಕ್ಕೆ ದೂರದ ಸಂಗತಿ.

  ಉದಾಹರಣೆಗೆ 'ನಾಗವಲ್ಲಿ' ಅಂತಹ ಚಲನಚಿತ್ರಗಳು ತಮಿಳು ತೆಲುಗಿನಲ್ಲಿ ಪ್ರಸಿದ್ಧಿ ಪಡೆದಿದ್ದರೂ ಕೂಡ ಕನ್ನಡದಲ್ಲಿ ಇದನ್ನು ತರದಿದ್ದರೆ ಕನ್ನಡ ಚಿತ್ರರಂಗಕ್ಕೆ ಒಂದು ನಷ್ಟವಾಗುತ್ತಿತ್ತು. ಇನ್ನು ಡಿಸ್ಕವರಿ, ಪೋಗೋದಂತಹ ಚಾನೆಲ್‌ಗಳು ಜನರಿಗೆ ಒಳ್ಳೆಯ ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿರುವುದರಿಂದ ಅಂತಹದನ್ನು ಕನ್ನಡದಲ್ಲಿ ಡಬ್ಬಿಂಗ್ ಮಾಡುವುದರಿಂದ ಎಲ್ಲ ಕನ್ನಡಿಗರು ನೋಡಲು ಪ್ರಾರಂಭಿಸುತ್ತಾರೆ ಮತ್ತು ಇದರಿಂದ ತಮ್ಮ ಜ್ಞಾನ ಹೆಚ್ಚಿಸಿಕೊಳ್ಳುತ್ತಾರೆ.

  ಜೊತೆಗೆ ಕೆಲವೊಂದು ಸಿನೆಮಾಗಳಲ್ಲೂ ತಿಳಿದುಕೊಳ್ಳುವುದು ಇರುತ್ತದೆ. ಅಂತಹವನ್ನು ಡಬ್ಬಿಂಗ್ ಮಾಡುವುದರಿಂದ ಅನುಕೂಲವೇ ಹೊರತು ಯಾವುದೇ ರೀತಿಯ ಅನಾನುಕೂಲತೆಗಳು ಇಲ್ಲ. ಆದ್ದರಿಂದ ಡಬ್ಬಿಂಗ್ ಯಾವುದೇ ರೀತಿಯಲ್ಲೂ ಕೂಡ ಮಾರಕವಾಗಲಾರದು.

  English summary
  Readers opinion on dubbing films in Kannada. Arpita Rao from London says ban on Dubbing should be revoked and Kannada film industry needs dubbing films. Dubbing of non-Kannada movies has been the biggest concern for long time in Kannada.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X