ಯುವ ಕಾಂಗ್ರೆಸ್ ಗೆ ರಮ್ಯಾ ನಾಮಪತ್ರ ಸಲ್ಲಿಸ್ತಾರಾ?

ವಿದೇಶಲ್ಲಿ ಚಿತ್ರೀಕರಣದಲ್ಲಿ ತೊಡಗಿರುವ ನಟಿ ರಮ್ಯಾ ಸ್ಪರ್ಧೆ ಬಗ್ಗೆ ಭಾನುವಾರ ಮಧ್ಯಾಹ್ನ 2 ಗಂಟೆಯೊಳಗೆ ನಿರ್ಧರಿಸಲಾಗುವುದು ಎಂದು ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಈ ಮಧ್ಯೆ ಬೂತ್ ಮಟ್ಟದ ಚುನಾವಣೆ ಮತದಾನ ಪ್ರಕ್ರಿಯೆಗೂ ಮುನ್ನ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದ ನಟಿ ಮೇಲೆ ದೂರು ನೀಡಲಾಗಿದೆ. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ. ಸಾಮಾನ್ಯವಾಗಿ ನೀತಿಸಂಹಿತೆ ಉಲ್ಲಂಘಿಸುವ ವ್ಯಕ್ತಿಯನ್ನು ಚುನಾವಣಾ ಪ್ರಕ್ರಿಯೆಯಿಂದ ಅನರ್ಹಗೊಳಿಸಬಹುದು. ಆದರೆ, ರಮ್ಯಾ ವಿಷ್ಯವೇ ಬೇರೆ
ರಮ್ಯಾ ಬಾಯಿಗೆ ಬೀಗ ಹಾಕಿಕೊಂಡಿರುವಂತೆ ಯುವ ಕಾಂಗ್ರೆಸ್‌ನ ಚುನಾವಣಾ ಉಸ್ತುವಾರಿ ಹೊತ್ತಿರುವ 'ಫೇಮ್' ಸಂಸ್ಥೆ (ಚುನಾವಣೆಗಳ ಸುಧಾರಿತ ನಿರ್ವಹಣಾ ಪ್ರತಿಷ್ಠಾನ) ತಾಕೀತು ಮಾಡಿದೆ. ರಮ್ಯಾ ಅವರಿಗೆ ವಾರ್ನಿಂಗ್ ನೀಡಿರುವ ಬಗ್ಗೆ ಯುವ ಕಾಂಗ್ರೆಸ್‌ನ ರಾಜ್ಯ ಚುನಾವಣಾಧಿಕಾರಿ ವಿ.ಕೆ. ಅರಿವಳಗನ್ ಸ್ಪಷ್ಟಪಡಿಸಿದ್ದಾರೆ.
ಅಸೆಂಬ್ಲಿ, ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಯೋಚಿಸಿಲ್ಲ ಎಂದಿರುವ ರಮ್ಯಾ ಸದ್ಯಕ್ಕೆ ಯುವ ಕಾಂಗ್ರೆಸ್ ಅಧ್ಯಕ್ಷೆಯಾಗುವ ಕನಸು ಕಾಣುತ್ತಿದ್ದಾರೆ. ಆದರೆ, ಈ ಕುರಿತ ಪ್ರಕ್ರಿಯೆಗಳು ಪ್ರಚಾರದಿಂದ ಹೊರತಾಗಿ ನಡೆದಿದೆ ಎನ್ನಲಾಗಿದೆ. ರಮ್ಯಾ ಅವಿರೋಧ ಆಯ್ಕೆ ಯಾದರೂ ಅಚ್ಚರಿ ಏನಿಲ್ಲ ಎನ್ನುತ್ತಿದೆ ಅಭಿಮಾನಿ ಬಳಗ.


Click it and Unblock the Notifications











