»   » ಕಸ್ತೂರಿ ಕನ್ನಡ ವಾಹಿನಿ ಭರ್ಜರಿ ವಹಿವಾಟು

ಕಸ್ತೂರಿ ಕನ್ನಡ ವಾಹಿನಿ ಭರ್ಜರಿ ವಹಿವಾಟು

Subscribe to Filmibeat Kannada

ಬೆಂಗಳೂರು, ಅ.25:ಅನಿತಾ ಕುಮಾರಸ್ವಾಮಿ ಒಡೆತನದ ಕಸ್ತೂರಿ ವಾಹಿನಿ ಜಾಹಿರಾತುಗಳ ಮೂಲಕ ಮೊದಲ ವರ್ಷದಲ್ಲೇ ಸರಿಸುಮಾರು 12 ಕೋಟಿ ರು.ಗಳ ವಹಿವಾಟು ನಡೆಸಿದೆ. ಇದುವರೆಗೂ ಯಾವುದೇ ಭಾರತೀಯ ಪ್ರಾದೇಶಿಕ ವಾಹಿನಿಗಳು ಜಾಹಿರಾತಿನ ಮೂಲಕ ಇಷ್ಟೊಂದು ವಹಿವಾಟನ್ನು ನಡೆಸಿದ ಉದಾಹರಣೆ ಇಲ್ಲ.

ಅಜ್ ಇಂಪ್ಯಾಕ್ಟ್ ಮೀಡಿಯಾ ಹಾಗೂ ನಮ್ಮ ತಂಡದ ನಿರಂತರ ಪರಿಶ್ರಮದಿಂದ ಇಷ್ಟೆಲ್ಲಾ ಸಾಧ್ಯವಾಯಿತು ಎಂದು ಕಸ್ತೂರಿ ವಾಹಿನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮಾರ್ಕ್ ಬಾಲಾಜಿ ತಿಳಿಸಿದ್ದಾರೆ. ಅಜ್ ಇಂಪ್ಯಾಕ್ಟ್ ಮೀಡಿಯಾ ಪ್ರೈ.ಲಿ ಕಂಪನಿ ಜಾಹಿರಾತುಗಳನ್ನು ಹುಡುಕಿ ಕೊಡುವಲ್ಲಿ, ಪ್ರಸಾರ ಮಾಡುವಲ್ಲಿ ಕಸ್ತೂರಿ ವಾಹಿನಿಗೆ ಸಾಕಷ್ಟು ನೆರವಾಗಿದೆ.

''ಪ್ರಾಂತೀಯ ಭಾಷಾ ವಾಹಿನಿಗಳಲ್ಲಿ ದೇಶದಲ್ಲೇ ಇದೊಂದು ದಾಖಲೆ.ಇದಕ್ಕಾಗಿ ನಮ್ಮ ತಂಡ ಹಾಗೂ ನಮ್ಮ್ಮ ಗ್ರಾಹಕರಾದ ಕಸ್ತೂರಿ ವಾಹಿನಿಯನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತಿದ್ದೇವೆ'' ಎಂದು ಅಜ್ ಇಂಪ್ಯಾಕ್ಟ್ ಮೀಡಿಯಾದ ಮಾಲೀಕರಾದ ಅಜಯ್ ಕುಮಾರ್ ರಾಮಾನುಜ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

(ದಟ್ಸ್ ಕನ್ನಡ ಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada