2 ದಿನದಲ್ಲಿ 25 ಲಕ್ಷ ಸಂಗ್ರಹ: ಡಿ-ಬಾಸ್ ಮನವಿಗೆ ಭರ್ಜರಿ ಪ್ರತಿಕ್ರಿಯೆ
ಕೊರೊನಾ ಬಿಕ್ಕಟ್ಟಿನಿಂದ ಜನಸಾಮಾನ್ಯರಿಗೆ ತೊಂದರೆಯಾದಂತೆ ಪ್ರಾಣಿಗಳಿಗೂ ಅಷ್ಟೇ ತೊಂದರೆ ಉಂಟಾಗಿದೆ. ಒಂದುವರೆ ವರ್ಷದಿಂದ ಮೃಗಾಲಯಗಳಲ್ಲಿ ಪ್ರಾಣಿಗಳ ಪೋಷಣೆ ಕಷ್ಟವಾಗಿದೆ. ಅದನ್ನು ನಂಬಿ ಜೀವನ ಸಾಗಿಸುತ್ತಿರುವ ಸಿಬ್ಬಂದಿಗಳ ಬದುಕು ಕಷ್ಟಕರವಾಗಿದೆ. ಹಾಗಾಗಿ, ಪ್ರಾಣಿ-ಪಕ್ಷಿಗಳನ್ನು ದತ್ತು ಪಡೆಯುವುದರ ಮೂಲಕ ನೆರವಾಗಬಹುದು ಎಂದು ನಟ ದರ್ಶನ್ ವಿನಂತಿಸಿದ್ದರು.
ಖುದ್ದು ಪ್ರಾಣಿಪ್ರಿಯರಾಗಿರುವ ದಾಸ ದರ್ಶನ್ ಮನವಿಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ದರ್ಶನ್ ಅಭಿಮಾನಿಗಳು ಹಾಗೂ ಪ್ರಾಣಿಪ್ರಿಯರು ರಾಜ್ಯದ ಎಲ್ಲಾ ಮೃಗಾಲಯಗಳಲ್ಲಿಯೂ ದತ್ತು ಪಡೆಯುವುದರ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ಡಿ ಬಾಸ್ ಮನವಿ ನಂತರ ಕೇವಲ ಎರಡು ದಿನದಲ್ಲಿ 25 ಲಕ್ಷ ಮೌಲ್ಯದ ದತ್ತು ಹಣ ಸಂಗ್ರಹವಾಗಿದೆ ಎಂದು ಕರ್ನಾಟಕ ಮೃಗಾಲಯ ಮಾಹಿತಿ ನೀಡಿದೆ. ಮುಂದೆ ಓದಿ...

ಎರಡು ದಿನದಲ್ಲಿ 25 ಲಕ್ಷ ಸಂಗ್ರಹ
ಕರ್ನಾಟಕದಲ್ಲಿ ಒಟ್ಟು 9 ಮೃಗಾಲಯಗಳಿವೆ. ಬೆಳಗಾವಿ, ಗದಗ, ಕಲುಬುರ್ಗಿ, ದಾವಣಗೆರೆ, ಹಂಪಿ, ಚಿತ್ರದುರ್ಗ, ಬನ್ನೇರುಘಟ್ಟ, ಶಿವಮೊಗ್ಗ, ಮೈಸೂರಿನಲ್ಲಿ ಮೃಗಾಲಯಗಳಿವೆ. ದರ್ಶನ್ ಮನವಿಯ ನಂತರ ಈ ಒಂಬತ್ತು ಮೃಗಾಲಯಗಳಿಂದಲೂ 25 ಲಕ್ಷ ಮೌಲ್ಯದ ದತ್ತು ಸ್ವೀಕಾರ ಹಾಗೂ ದೇಣಿಗೆ ಸಂಗ್ರಹವಾಗಿದೆ ಎಂದು ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.

ಎಲ್ಲೆಲ್ಲಿ ಎಷ್ಟೆಷ್ಟು ಸಂಗ್ರಹ?
ಬೆಳಗಾವಿ - 32.6 ಸಾವಿರ
ಗದಗ - 38.9 ಸಾವಿರ
ಕಲುಬುರ್ಗಿ - 48.3 ಸಾವಿರ
ದಾವಣಗೆರೆ - 62.9 ಸಾವಿರ
ಹಂಪಿ - 64 ಸಾವಿರ
ಚಿತ್ರದುರ್ಗ - 30 ಸಾವಿರ
ಬನ್ನೇರುಘಟ್ಟ - 7.3 ಲಕ್ಷ
ಶಿವಮೊಗ್ಗ - 1 ಲಕ್ಷ
ಮೈಸೂರು - 13.6 ಲಕ್ಷ

ಪ್ರಾಣಿಪ್ರಿಯರಿಗೆ ದರ್ಶನ್ ಧನ್ಯವಾದ
ಮೃಗಾಯಲಗಳಿಂದ ಪ್ರಾಣಿಗಳನ್ನು ದತ್ತು ಪಡೆದವರ ಹೆಸರು ಮತ್ತು ಮಾಹಿತಿಯನ್ನು ಪ್ರಮಾಣಪತ್ರದ ಸಮೇತ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ನಟ ದರ್ಶನ್ ಎಲ್ಲರಿಗೂ ವೈಯಕ್ತಿಕವಾಗಿ ಧನ್ಯವಾದ ತಿಳಿಸುತ್ತಿದ್ದಾರೆ. ಇದರಿಂದ ಮತ್ತಷ್ಟು ಜನರಿಗೆ ಪ್ರೇರಿಪಿಸುತ್ತಿದೆ.
Recommended Video

ದರ್ಶನ್‌ಗೆ ಧನ್ಯವಾದ ಹೇಳಿದ ಮೃಗಾಲಯ
ಶ್ರೀ ದರ್ಶನ್ ತೂಗುದೀಪ ರವರ ಮನವಿಯ ಹಿನ್ನೆಲೆಯಲ್ಲಿ ಬಹಳಷ್ಟು ಸಾರ್ವಜನಿಕರು ರೂ 50 ರಿಂದ 100000 ವರಗೂ ದತ್ತು ಮತ್ತು ದೇಣಿಗೆ ನೀಡಿದ್ದಾರೆ. ಅವರೆಲ್ಲರಿಗೂ ಕರ್ನಾಟಕ ಮೃಗಾಲಯ ಧನ್ಯವಾದ ತಿಳಿಸಿದೆ. ಎರಡು ದಿನದಲ್ಲಿ 25 ಮೌಲ್ಯದ ದತ್ತು ಪಡೆದಿರುವುದಕ್ಕೂ ದರ್ಶನ್ ಹಾಗೂ ಅವರ ಅಭಿಮಾನಿಗಳಿಗೆ ಧನ್ಯವಾದ ತಿಳಿಸಲಾಗಿದೆ.


Click it and Unblock the Notifications











