twitter
    For Quick Alerts
    ALLOW NOTIFICATIONS  
    For Daily Alerts

    2 ದಿನದಲ್ಲಿ 25 ಲಕ್ಷ ಸಂಗ್ರಹ: ಡಿ-ಬಾಸ್ ಮನವಿಗೆ ಭರ್ಜರಿ ಪ್ರತಿಕ್ರಿಯೆ

    |

    ಕೊರೊನಾ ಬಿಕ್ಕಟ್ಟಿನಿಂದ ಜನಸಾಮಾನ್ಯರಿಗೆ ತೊಂದರೆಯಾದಂತೆ ಪ್ರಾಣಿಗಳಿಗೂ ಅಷ್ಟೇ ತೊಂದರೆ ಉಂಟಾಗಿದೆ. ಒಂದುವರೆ ವರ್ಷದಿಂದ ಮೃಗಾಲಯಗಳಲ್ಲಿ ಪ್ರಾಣಿಗಳ ಪೋಷಣೆ ಕಷ್ಟವಾಗಿದೆ. ಅದನ್ನು ನಂಬಿ ಜೀವನ ಸಾಗಿಸುತ್ತಿರುವ ಸಿಬ್ಬಂದಿಗಳ ಬದುಕು ಕಷ್ಟಕರವಾಗಿದೆ. ಹಾಗಾಗಿ, ಪ್ರಾಣಿ-ಪಕ್ಷಿಗಳನ್ನು ದತ್ತು ಪಡೆಯುವುದರ ಮೂಲಕ ನೆರವಾಗಬಹುದು ಎಂದು ನಟ ದರ್ಶನ್ ವಿನಂತಿಸಿದ್ದರು.

    ಖುದ್ದು ಪ್ರಾಣಿಪ್ರಿಯರಾಗಿರುವ ದಾಸ ದರ್ಶನ್ ಮನವಿಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ದರ್ಶನ್ ಅಭಿಮಾನಿಗಳು ಹಾಗೂ ಪ್ರಾಣಿಪ್ರಿಯರು ರಾಜ್ಯದ ಎಲ್ಲಾ ಮೃಗಾಲಯಗಳಲ್ಲಿಯೂ ದತ್ತು ಪಡೆಯುವುದರ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ಡಿ ಬಾಸ್ ಮನವಿ ನಂತರ ಕೇವಲ ಎರಡು ದಿನದಲ್ಲಿ 25 ಲಕ್ಷ ಮೌಲ್ಯದ ದತ್ತು ಹಣ ಸಂಗ್ರಹವಾಗಿದೆ ಎಂದು ಕರ್ನಾಟಕ ಮೃಗಾಲಯ ಮಾಹಿತಿ ನೀಡಿದೆ. ಮುಂದೆ ಓದಿ...

    ಎರಡು ದಿನದಲ್ಲಿ 25 ಲಕ್ಷ ಸಂಗ್ರಹ

    ಎರಡು ದಿನದಲ್ಲಿ 25 ಲಕ್ಷ ಸಂಗ್ರಹ

    ಕರ್ನಾಟಕದಲ್ಲಿ ಒಟ್ಟು 9 ಮೃಗಾಲಯಗಳಿವೆ. ಬೆಳಗಾವಿ, ಗದಗ, ಕಲುಬುರ್ಗಿ, ದಾವಣಗೆರೆ, ಹಂಪಿ, ಚಿತ್ರದುರ್ಗ, ಬನ್ನೇರುಘಟ್ಟ, ಶಿವಮೊಗ್ಗ, ಮೈಸೂರಿನಲ್ಲಿ ಮೃಗಾಲಯಗಳಿವೆ. ದರ್ಶನ್ ಮನವಿಯ ನಂತರ ಈ ಒಂಬತ್ತು ಮೃಗಾಲಯಗಳಿಂದಲೂ 25 ಲಕ್ಷ ಮೌಲ್ಯದ ದತ್ತು ಸ್ವೀಕಾರ ಹಾಗೂ ದೇಣಿಗೆ ಸಂಗ್ರಹವಾಗಿದೆ ಎಂದು ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.

    ನಟ ದರ್ಶನ್ ಮಾಡಿದ್ದ ಮನವಿಗೆ ಭಾರಿ ಜನಸ್ಪಂದನೆನಟ ದರ್ಶನ್ ಮಾಡಿದ್ದ ಮನವಿಗೆ ಭಾರಿ ಜನಸ್ಪಂದನೆ

    ಎಲ್ಲೆಲ್ಲಿ ಎಷ್ಟೆಷ್ಟು ಸಂಗ್ರಹ?

    ಎಲ್ಲೆಲ್ಲಿ ಎಷ್ಟೆಷ್ಟು ಸಂಗ್ರಹ?

    ಬೆಳಗಾವಿ - 32.6 ಸಾವಿರ

    ಗದಗ - 38.9 ಸಾವಿರ

    ಕಲುಬುರ್ಗಿ - 48.3 ಸಾವಿರ

    ದಾವಣಗೆರೆ - 62.9 ಸಾವಿರ

    ಹಂಪಿ - 64 ಸಾವಿರ

    ಚಿತ್ರದುರ್ಗ - 30 ಸಾವಿರ

    ಬನ್ನೇರುಘಟ್ಟ - 7.3 ಲಕ್ಷ

    ಶಿವಮೊಗ್ಗ - 1 ಲಕ್ಷ

    ಮೈಸೂರು - 13.6 ಲಕ್ಷ

    ಪ್ರಾಣಿಪ್ರಿಯರಿಗೆ ದರ್ಶನ್ ಧನ್ಯವಾದ

    ಪ್ರಾಣಿಪ್ರಿಯರಿಗೆ ದರ್ಶನ್ ಧನ್ಯವಾದ

    ಮೃಗಾಯಲಗಳಿಂದ ಪ್ರಾಣಿಗಳನ್ನು ದತ್ತು ಪಡೆದವರ ಹೆಸರು ಮತ್ತು ಮಾಹಿತಿಯನ್ನು ಪ್ರಮಾಣಪತ್ರದ ಸಮೇತ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ನಟ ದರ್ಶನ್ ಎಲ್ಲರಿಗೂ ವೈಯಕ್ತಿಕವಾಗಿ ಧನ್ಯವಾದ ತಿಳಿಸುತ್ತಿದ್ದಾರೆ. ಇದರಿಂದ ಮತ್ತಷ್ಟು ಜನರಿಗೆ ಪ್ರೇರಿಪಿಸುತ್ತಿದೆ.

    ಹುಲಿಗೆ 1 ಲಕ್ಷ, ಆನೆಗೆ 1.75 ಲಕ್ಷ: ಮೃಗಾಲಯಗಳ ರಕ್ಷಣೆಗೆ ನಿಂತ ನಟ ದರ್ಶನ್ಹುಲಿಗೆ 1 ಲಕ್ಷ, ಆನೆಗೆ 1.75 ಲಕ್ಷ: ಮೃಗಾಲಯಗಳ ರಕ್ಷಣೆಗೆ ನಿಂತ ನಟ ದರ್ಶನ್

    Recommended Video

    ಪ್ರಾಣಿಗಳಿಗೂ ಕೊರೊನಾಗೂ ಏನ್ ಸಂಬಂಧ ಅಂತ ಹೇಳಿದ Darshan | Filmibeat Kannada
    ದರ್ಶನ್‌ಗೆ ಧನ್ಯವಾದ ಹೇಳಿದ ಮೃಗಾಲಯ

    ದರ್ಶನ್‌ಗೆ ಧನ್ಯವಾದ ಹೇಳಿದ ಮೃಗಾಲಯ

    ಶ್ರೀ ದರ್ಶನ್ ತೂಗುದೀಪ ರವರ ಮನವಿಯ ಹಿನ್ನೆಲೆಯಲ್ಲಿ ಬಹಳಷ್ಟು ಸಾರ್ವಜನಿಕರು ರೂ 50 ರಿಂದ 100000 ವರಗೂ ದತ್ತು ಮತ್ತು ದೇಣಿಗೆ ನೀಡಿದ್ದಾರೆ. ಅವರೆಲ್ಲರಿಗೂ ಕರ್ನಾಟಕ ಮೃಗಾಲಯ ಧನ್ಯವಾದ ತಿಳಿಸಿದೆ. ಎರಡು ದಿನದಲ್ಲಿ 25 ಮೌಲ್ಯದ ದತ್ತು ಪಡೆದಿರುವುದಕ್ಕೂ ದರ್ಶನ್ ಹಾಗೂ ಅವರ ಅಭಿಮಾನಿಗಳಿಗೆ ಧನ್ಯವಾದ ತಿಳಿಸಲಾಗಿದೆ.

    English summary
    25 lakhs of adoption and donations in just 2 days After Darshan request for animal adoption.
    Monday, June 7, 2021, 13:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X