For Quick Alerts
  ALLOW NOTIFICATIONS  
  For Daily Alerts

  ಪ್ರೇಮ್, ಚಂದ್ರು ಚಾರ್ಮಿನಾರ್ ಮುಹೂರ್ತ ಫಿಕ್ಸ್

  |

  ಆರ್ ಚಂದ್ರು ನಿರ್ದೇಶಿಸಲಿರುವ 'ಚಾರ್ಮಿನಾರ್' ಚಿತ್ರಕ್ಕೆ ಲವ್ಲಿ ಸ್ಟಾರ್ ಪ್ರೇಮ್ ನಾಯಕ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ನಾಯಕಿ ಆಯ್ಕೆ ಆಗಿರಲಿಲ್ಲ. ಇದೀಗ ನಾಯಕಿ ಮೇಘನಾ ಎಂಬುದು ಪಕ್ಕಾ ಆಗಿದೆ. ಈ ಮೊದಲು ಮೇಘನಾ ನಟಿಸಿದ ಚಿತ್ರಗಳು 'ನಮ್ ಏರಿಯಾಲಿ ಒಂದಿನ', 'ವಿನಾಯಕ ಗೆಳೆಯರ ಬಳಗ', ಹಾಗೂ ತುಗ್ಲಕ್.

  ಇದೀಗ ತಾಜ್ ಮಹಲ್ ಖ್ಯಾತಿಯ ನಿರ್ದೇಶಕ ಚಂದ್ರು ಚಿತ್ರ ಸಿಕ್ಕಿರುವುದು ಮೇಘನಾಗೆ ಅದೃಷ್ಟ ಎಂಬಂತಾಗಿದೆ. ಕಾರಣ ಮೇಘನಾ ಈ ಮೊದಲು ನಟಿಸಿದ ಯಾವ ಚಿತ್ರಗಳೂ ಚಂದ್ರು ಅವರಷ್ಟು ಹೆಸರು ಮಾಡಿದ ನಿರ್ದೇಶಕರದಲ್ಲ. ಅಷ್ಟೇ ಅಲ್ಲ, ನೆನಪಿರಲಿ ಪ್ರೇಮ್ ಅವರಂತ ಸ್ಟಾರ್ ಜೊತೆ ಮೇಘನಾ ನಟಿಸುತ್ತಿರುವುದೂ ಕೂಡ ಇದೇ ಮೊದಲು.

  ಒಟ್ಟಿನಲ್ಲಿ ಅಂದುಕೊಂಡಂತೆ ನಡೆದರೆ ಮೇ 30ಕ್ಕೆ ಚಾರ್ಮಿನಾರ್ ಚಿತ್ರಕ್ಕೆ ಮುಹೂರ್ತ್ ನಡೆಯಲಿದೆ. ನಂತರ ಶೂಟಿಂಗ್ ಇದ್ದೇ ಇದೆ. ನಾಯಕಿ ಹಾಗೂ ತಂತ್ರಜ್ಚರ ಆಯ್ಕೆಯೂ ಫೈನಲ್ ಹಂತಕ್ಕೆ ಬಂದಿದೆ. ಕೋ ಕೋ ಸೋತ ನಂತರ ಆರ್ ಚಂದ್ರು ಮುಖದಲ್ಲಿ ಮಾಯವಾದ ಮಂದಹಾಸವನ್ನು ಚಾರ್ಮಿನಾರ್ ತಂದುಕೊಡಬಹುದೇ ಎಂಬುದು ಗಾಂಧೀನಗರದ ಸದ್ಯದ ಪ್ರಶ್ನೆ. (ಒನ್ ಇಂಡಿಯಾ ಕನ್ನಡ)

  English summary
  R Chandru Movie Charminor launches on 30th May 2012. Lovely Star Prem Kumar and Meghana are in Lead. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X