'ಮೂರು ಗುಟ್ಟು' ಚಿತ್ರದಲ್ಲಿ ಒಂದೇ ಹಾಡು

By Staff

ದಿನೇಶ್‌ಬಾಬು ಅವರು ಸಸ್ಪೆನ್ಸ್, ಕಾಮಿಡಿ, ಥ್ರಿಲ್ಲರ್, ಫ್ಯಾಮಿಲಿ ಡ್ರಾಮಾ ಹೀಗೆ ಎಲ್ಲಾ ರೀತಿಯ ಚಿತ್ರಗಳನ್ನು ನಿರ್ದೇಶಿಸಿದ್ದರೂ ಅದರಲ್ಲಿ ಅವರದೇ ಆದ ವಿಭಿನ್ನ ನಿರೂಪಣೆ ಇರುತ್ತದೆ. ಶ್ರೀ ಮೂಕಾಂಬಿಕಾ ಫಿಲಂಸ್ ಲಾಂಛನದಲ್ಲಿ ರಾಜೀವ್ ಹಾಗೂ ಪ್ರಶಾಂತ್ ನಿರ್ಮಿಸುತ್ತಿರುವ ಅವರ ನಿರ್ದೇಶನದ ಚಿತ್ರ 'ಮೂರು ಗುಟ್ಟು, ಒಂದು ಸುಳ್ಳು, ಒಂದು ನಿಜ.'

ಇದೂ ಕೂಡ ಪೂರ್ಣ ಪ್ರಮಾಣದ ಹಾಸ್ಯ ಚಿತ್ರವಾಗಿದ್ದು, ಈಗಾಗಲೇ ಚಿತ್ರೀಕರಣ ಅಂತಿಮ ಹಂತದಲ್ಲಿದ್ದು, ಕುಶಾಲನಗರ ಸುತ್ತಮುತ್ತ ಭರದಿಂದ ಚಿತ್ರೀಕರಣ ಸಾಗಿದೆ. ಅಮೃತವರ್ಷಿಣಿ ನಂತರ ರಮೇಶ್ ಅರವಿಂದ್ ಅವರ ಜೊತೆ ಹಾಗೂ ಮಿ.ಗರಗಸ ನಂತರ ಕೋಮಲ್ ಜತೆ ದಿನೇಶ್ ಬಾಬು ನಿರ್ದೇಶನದ ಚಿತ್ರ ಇದಾಗಿದೆ.

ಕಥೆ ಚಿತ್ರಕಥೆ ಬರೆದು ಛಾಯಾಗ್ರಹಣ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ದಿನೇಶ್ ಬಾಬು ಅವರೇ ಹೊತ್ತಿದ್ದಾರೆ. ಗಾಯಕ ಎಲ್.ಎನ್. ಶಾಸ್ತ್ರಿಯವರ ಪತ್ನಿ ಸುಮಾ ಶಾಸ್ತ್ರಿ ಪ್ರಥಮ ಬಾರಿಗೆ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಈ ಚಿತ್ರದಲ್ಲಿರುವುದು ಒಂದೇ ಹಾಡು ಅದೂ ಮಾಸ್ ಸಾಂಗ್ ಆಗಿರುತ್ತದೆ.

ರಾಜೇಂದ್ರ ಕಾರಂತರ ಸಂಭಾಷಣೆ ಈ ಚಿತ್ರಕ್ಕಿದ್ದು, ರಮೇಶ್ ಅರವಿಂದ್, ಕೋಮಲ್, ನಂದಿನಿ, ಮಧು ಹೆಗ್ಡೆ, ಸುಧಾ ಬೆಳವಾಡಿ, ಶೃತಿ ನಾಯ್ಡು, ಶ್ರೀನಿವಾಸಮೂರ್ತಿ, ಪ್ರವೀಣ್ ಹಾಗೂ ನ್ಯಾನ್ಸಿ ಪ್ರಮುಖ ತಾರಾಗಣದಲ್ಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X