ಪೂಜಾಗಾಂಧಿ ನೀ ಇಲ್ಲದೆ ಚಿತ್ರಕ್ಕೆ ಕಲ್ಯಾಣಮಸ್ತು

By Rajendra

ಪೂಜಾಗಾಂಧಿ ಅಭಿನಯದ 'ನೀ ಇಲ್ಲದೆ' ಚಿತ್ರದ ಬಿಡುಗಡೆ ಹಾದಿ ಸುಗಮವಾಗಿದ್ದು ಚಿತ್ರದ ವಿವಾದ ಸುಖಾಂತ್ಯ ಕಂಡಿದೆ. 'ನಿ ಇಲ್ಲದೆ' ಚಿತ್ರದ ನಿರ್ಮಾಪಕ ವೈ ಶಿವಗಣಪತಿ ಬಾಕಿ ಹಣ ಕೊಟ್ಟಿಲ್ಲ ಎಂದು ಕಲಾವಿದರ ಸಂಘಕ್ಕೆ ಪೂಜಾಗಾಂಧಿ ದೂರು ನೀಡಿದ್ದರು. ತಮ್ಮ ಚಿತ್ರದ ಬಿಡುಗಡೆಗೆ ಎಲ್ಲಿ ತೊಂದರೆಯಾಗುತ್ತದೋ ಎಂದು ಶಿವಗಣಪತಿ ಹೈಕೋರ್ಟ್‌ನಿಂದ ಕೇವಿಯಟ್ ಕೂಡ ತಂದಿದ್ದರು.

ಆದರೆ ಗುರುವಾರ ನಡೆದ ನಾಟಕೀಯ ಬೆಳವಣಿಗೆಗಳಲ್ಲಿ 'ನೀ ಇಲ್ಲದೆ' ವಿವಾದ ಬಗೆಹರಿದಿದೆ. ಈ ಚಿತ್ರ ಎಂದಿನಂತೆ ಮಾರ್ಚ್. 25ರಂದು ತೆರೆಕಾಣುತ್ತಿದೆ. ಬಾಕಿ ಹಣಕ್ಕೆ ಸಂಬಂಧಿಸಿದಂತೆ ಪೂಜಾಗಾಂಧಿ ಅವರಿಗೆ ಮಂಗಳೂರು ಮತ್ತು ಹೈದರಾಬಾದ್ ಕರ್ನಾಟಕದ ವಿತರಣೆ ಹಕ್ಕುಗಳನ್ನು ನೀಡಲಾಗಿದೆ.

ಅಂದಹಾಗೆ 'ನೀ ಇಲ್ಲದೆ' ಚಿತ್ರವನ್ನು ನಾಗಮಲ್ಲೇಶ್ವರಿ ನಿರ್ಮಿಸಿದ್ದು ಸವಾರಿ ಖ್ಯಾತಿಯ ರಘುಮುಖರ್ಜಿ, ಪೂಜಾಗಾಂಧಿ ಹಾಗೂ ಅನಂತವೇಲು ಮುಖ್ಯಭೂಮಿಕೆಯಲ್ಲಿದ್ದಾರೆ. ಪ್ರೇಮಕಥಾ ಹಂದರದ ಈ ಚಿತ್ರದಲ್ಲಿ ಪೂಜಾಗಾಂಧಿ ಹಳ್ಳಿ ಹುಡುಗಿಯಾಗಿ ಗಮನಸೆಳೆಯುವ ಪಾತ್ರದಲ್ಲಿ ಅಭಿನಯಿಸಿದ್ದಾರೆ.

More from Filmibeat

English summary
The controversy surrounding the pending remuneration of actor Pooja Gandhi has also been resolved. Pooja Gandhi had filed a civil suit seeking a stay order on the release of the film “Nee Illade”, alleging that producer-director Y. Shivaganapathi had failed to pay her dues. The film is release as scheduled.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X