»   » ಪ್ರಜ್ವಲ್ ಜೊತೆ ಆಂದ್ರಿತಾ ಮೆರವಣಿಗೆಗೆ ಸಿದ್ಧತೆ

ಪ್ರಜ್ವಲ್ ಜೊತೆ ಆಂದ್ರಿತಾ ಮೆರವಣಿಗೆಗೆ ಸಿದ್ಧತೆ

Posted By:
Subscribe to Filmibeat Kannada

ಪ್ರಜ್ವಲ್ ದೇವರಾಜ್ ಗಂಗೆ ಬಾರೆ ತುಂಗೆ ಬಾರೆ ಎಂದು ಕೂಗಿ ಕರೆದು ಸಾಕಾಗಿ ಈಗ ಮೆರವಣಿಗೆ ಹೊರಟಿದ್ದಾರೆ. ಬೆಂಗಳೂರಿನ ಮೌಂಟ್ ಕಾರ್ಮೆಲ್ ಹುಡುಗಿ ಆಂದ್ರಿತಾ ರೇ ಅವರ ಜತೆಯಾಗಿದ್ದಾರೆ. ಆಕಾಶ್, ಅರಸು ಅಂತಹ ಯಶಸ್ವಿ ಚಿತ್ರಗಳನ್ನು ನೀಡಿದ ಮಹೇಶ್ ಬಾಬು ಮೊದಲಬಾರಿಗೆ ಪ್ರಜ್ವಲ್ ಅವರ ಚಿತ್ರದ ನಿರ್ದೇಶಕರಾಗಿದ್ದಾರೆ. ಈ ಚಿತ್ರವೂ ಯಶಸ್ವಿಯಾಗಿ ಹ್ಯಾಟಿಕ್ರ್ ಸಾಧಿಸುವ ನಿರೀಕ್ಷೆಯಲ್ಲಿದ್ದಾರೆ. ಜೂ. 27 ರಂದು ಈ ಚಿತ್ರ ರವಿಚಂದ್ರನ್, ಜಗ್ಗೇಶ್ ಜೋಡಿಯ ಟಾಟಾ ಬಿರ್ಲಾ ಜತೆ ಬೆಳ್ಳಿತೆರೆ ಏರಲಿದೆ.

ರಾಜ್ ಕುಮಾರ್ ಅವರ ಬ್ಯಾನರ್ ಬಿಟ್ಟು ಹೊರಗಡೆ ಮೊದಲ ಬಾರಿಗೆ ನಿರ್ದೇಶನಕ್ಕೆ ಕೈ ಹಾಕಿರುವ ಮಹೇಶ್ ಬಾಬು, ಈ ಚಿತ್ರದ ಬಗ್ಗೆ ಸಾಕಷ್ಟು ಭರವಸೆಯನ್ನಿಟ್ಟುಕೊಂಡಿದ್ದಾರೆ. ಯುವಜನತೆಯ ನಾಡಿಮಿಡಿತ ಅರಿತಿರುವ ಮಹೇಶ್ ಬಾಬು ಈಗಾಗಲೇ ಪುನೀತ್ ಅಭಿನಯದ ಅಕಾಶ್, ಅರಸು ಚಿತ್ರದ ಮೂಲಕ ಅದನ್ನು ಸಾಬೀತು ಮಾಡಿದ್ದಾರೆ. ಮೆರವಣಿಗೆ ಚಿತ್ರದಲ್ಲಿ ಹೆಚ್ಚಿನ ದೃಶ್ಯಗಳು ಕಾಡಿನಲ್ಲಿ ಚಿತ್ರೀಕರಿಸಲಾಗಿದೆ. ಉಳಿದ ದೃಶ್ಯಗಳು ನಗರ ಜೀವನವನ್ನು ಬಿಂಬಿಸಲಿದೆ. ಜನಾರ್ದನ ಮಹರ್ಷಿ ಸೊಗಸಾದ ಕಥೆ ಹೆಣೆದಿದ್ದಾರೆ ಎಂದು ಮಹೇಶ್ ಹೇಳಿದರು.

ಸಂತ, ಓಂಕಾರ ಮುಂತಾದ ಚಿತ್ರಗಳಿಗೆ ಸಹನಿರ್ಮಾಪಕರಾಗಿದ್ದ ಕಾಂತರಾಜ್ ಈ ಚಿತ್ರದಲ್ಲಿ ನಿರ್ಮಾಪಕನ ಹೊಣೆ ಹೊತ್ತಿದ್ದಾರೆ. ವಿ. ಮನೋಹರ್ ಸಂಗೀತ ಚಿತ್ರಕ್ಕಿದೆ. ಪ್ರಜ್ವಲ್ ಹಾಗೂ ಆಂದ್ರಿತಾ ಜೋಡಿ ಚಿತ್ರ ಬಿಡುಗಡೆ ಮುನ್ನವೇ ಸಾಕಷ್ಟು ಕಾರಣಗಳಿಂದ ಜನಪ್ರಿಯವಾಗಿದೆ. ಇದುವರೆವಿಗೂ ಭರ್ಜರಿ ಯಶಸ್ಸು ಕಾಣಲು ತವಕಿಸುತ್ತಿರುವ ಪ್ರಜ್ವಲ್ ಗೆ ಈ ಚಿತ್ರದ ಗೆಲುವು ಮುಖ್ಯವಾಗಿದೆ.

(ದಟ್ಸ್ ಸಿನಿವಾರ್ತೆ)

ಚಿಗರೆ ಕಂಗಳ ಆಂದ್ರಿತಾ ರೇಗೆ ಅದೃಷ್ಟವೋ ಅದೃಷ್ಟ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada