ಆಫ್ ಸ್ಕ್ರೀನ್ ಕೂಡಾ ಜಗಪತಿ ಬಾಬುಗೆ ಪ್ರಿಯವಾದ ಮಣಿ

By Mahesh

ಬೆಂಗಳೂರು ಬೆಡಗಿ ಪ್ರಿಯಾಮಣಿ ತೆಲುಗಿನ ಸ್ಟಾರ್ ಜಗಪತಿ ಬಾಬು ಜೊತೆ ಆನ್ ಸ್ಕ್ರೀನ್ ನಡೆಸುವ ಸರಸ ಸಲ್ಲಾಪಗಳು ಪ್ರೇಕ್ಷಕರ ಮೆಚ್ಚುಗೆ ಗಳಿಸಿರುವುದು ಗುಟ್ಟಾದ ವಿಷಯವೇನಲ್ಲ. ಹಲವು ವರ್ಷಗಳಿಂದ ಈ ಜೋಡಿ ಟಾಲಿವುಡ್ ನ ಹಾಟ್ ಜೋಡಿ ಎನಿಸಿದೆ.

ಆದರೆ ಕ್ಷೇತ್ರಂ ಚಿತ್ರತಂಡ ಮಾತ್ರ ಬೇರೆಯದೇ ಕಥೆ ಹೇಳುತ್ತಿದೆ. ಬರೀ ಅನ್ ಸ್ಕ್ರೀನ್ ಅಷ್ಟೇ ಅಲ್ಲ ಗುರೂ...ಆಫ್ ಸ್ಕ್ರೀನ್ ಕೂಡಾ ಇಬ್ಬರ ರೋಮಾನ್ಸ್ ಜೋರಾಗಿ ನಡೆದಿದೆ. ಇದು ಹಲವರಿಗೆ ಗೊತ್ತಿರುವ ವಿಷಯ. ಆದರೆ, ಕೆಲವು ಬಾರಿ ಮುಜುಗರ ಎನಿಸುತ್ತದೆ ಎಂದು ಚಿತ್ರತಂಡ ಗಾಳಿಯಲ್ಲಿ ಸುದ್ದಿಯನ್ನು ಹರಿಯಬಿಟ್ಟಿದೆ.

ಪೆಳ್ಳೈನ ಕೊತ್ತಲೊ ಎಂಬ ಚಿತ್ರದಲ್ಲಿ ಪತಿ ಪತ್ನಿ ಪಾತ್ರ ನಿರ್ವಹಿಸಿದ ನಂತರ ಜಗಪತಿ ಹಾಗೂ ಪ್ರಿಯಾಮಣಿ ರೀಲ್ ಲೈಫ್ ಜೊತೆಗೆ ರಿಯಲ್ ಲೈಫ್ ನಲ್ಲೂ ಗಂಡ ಹೆಂಡತಿಯಂತೆ ನಡೆದುಕೊಳ್ಳುತ್ತಿದ್ದಾರಂತೆ.

ಇಬ್ಬರು ಒಂದೇ ಕಾರ್ ನಲ್ಲಿ ಶೂಟಿಂಗ್ ಗೆ ಬರ್ತಾ ಇದ್ದಾರೆ. ಒಟ್ಟಿಗೆ ಇರುತ್ತಾರೆ. ವಿಶ್ರಾಂತಿ ಕೊಠಡಿ ಮಾಹಿತಿ ಗೌಪ್ಯವಾಗಿರಿಸುತ್ತಾರೆ. ದೂರದ ಊರಲ್ಲಿ ಶೂಟಿಂಗ್ ಇದ್ರೆ ಸಕಲ ಸೌಲಭ್ಯವುಳ್ಳ ಕಾರಾವಾನ್ ನಲ್ಲೇ ಇಬ್ಬರ ವಾಸ್ತವ್ಯ.

ನೋಡಿದವರಿಗೆ ನಿರ್ಮಾಪಕರಿಗೆ ಎಷ್ಟು ಉಪಕಾರ ಮಾಡುತ್ತಿದ್ದಾರೆ. ಚಿತ್ರ ನಿರ್ಮಾಣದ ಖರ್ಚು ವೆಚ್ಚ ತಗ್ಗಿಸುತ್ತಿದ್ದಾರೆ ಎಂದು ಎನಿಸುತ್ತದೆ. ಆದರೆ, ಇಬ್ಬರ ಪರಸ್ಪರ ಕಾಳಜಿ, ಪ್ರೀತಿ, ಮೋಹ ಚಿತ್ರತಂಡಕ್ಕೆ ಕಿರಿಕಿರಿಯಾಗಿದೆಯಂತೆ.

ಏನೋ ನಮ್ಮ ಕೆಆರ್ ರೋಡ್ ಹುಡ್ಗಿ ಕಾಲಿವುಡ್, ಟಾಲಿವುಡ್ ಅಂತಾ ಹೋಗಿ ಫೇಮಸ್ ಆಗಿದ್ದಾಳೆ ಅಂದ್ರೆ ಹುಡ್ಗ ಕೂಡಾ ಅಲ್ಲಿಯವನೇ ಬೇಕು ಅನ್ನೋ ಹಾಗಿದೆ. ಬೆಂಗಳೂರಲ್ಲಿ ಏನು ಹುಡುಗರು ಕಮ್ಮಿನಾ?

More from Filmibeat

English summary
Actress Priyamani and actor Jagapati Babu love affair and on screen chemistry is working well. But accordin to sources both are repeating the act off-screen too. Reel life husband and wife acting as real life partners which irks movie crew.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X