ಮೇ 1ರಂದು ನೆಚ್ಚಿನ ಚಿತ್ರಮಂದಿರಗಳಲ್ಲಿ ಅಣ್ಣಾಬಾಂಡ್
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಅಣ್ಣಾಬಾಂಡ್' ಚಿತ್ರ ಮೇ 1ರ ಕಾರ್ಮಿಕರ ದಿನಾಚರಣೆಯಂದು ತೆರೆಕಾಣುತ್ತಿದೆ. ಕನ್ನಡ ಚಿತ್ರಗಳು ಶುಕ್ರವಾರದಂದು ತೆರೆಗೆ ಅಪ್ಪಳಿಸುವುದು ಸಾಮಾನ್ಯ. ಆದರೆ ಅಣ್ಣಾಬಾಂಡ್ ಚಿತ್ರ ಮಂಗಳವಾರದಂದು ತೆರೆಗೆ ಜಿಗಿಯುತ್ತಿದೆ.
ಈ ಸುದ್ದಿಯನ್ನು ಸ್ವತಃ ಪುನೀತ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಕಾರ್ಮಿಕರ ದಿನದ ಪ್ರಯುಕ್ತ ಮೇ 1ರಂದು ರಜಾ ದಿನ. ಹಾಗಾಗಿ ಚಿತ್ರವನ್ನು ಅಂದೇ ಬಿಡುಗಡೆ ಮಾಡಲು ಪೂರ್ಣಿಮಾ ಎಂಟರ್‌ಪ್ರೈಸಸ್ ಸಂಸ್ಥೆ ನಿರ್ಧರಿಸಿದೆ.
ಅಣ್ಣಾಬಾಂಡ್ ಚಿತ್ರದ ವಿತರಣೆ ಹಕ್ಕುಗಳು ದಾಖಲೆ ಬೆಲೆಗೆ ಮಾರಾಟವಾಗಿದ್ದು ಸುಮಾರು 150 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ದುನಿಯಾ ಸೂರಿ ನಿರ್ದೇಶನದ ಈ ಚಿತ್ರದಲ್ಲಿ ನಿಧಿ ಸುಬ್ಬಯ್ಯ, ಪ್ರಿಯಾಮಣಿ ಇಬ್ಬರು ನಾಯಕಿಯರು. ಕನ್ನಡ ಚಿತ್ರೋದ್ಯಮದಲ್ಲಿ 'ಅಣ್ಣಾಬಾಂಡ್' ಚಿತ್ರದ ಭಾರಿ ನಿರೀಕ್ಷೆ ಹುಟ್ಟಿಸಿದೆ. (ಒನ್‌ಇಂಡಿಯಾ ಕನ್ನಡ)
More from Filmibeat
ಪುನೀತ್ ರಾಜ್ ಕುಮಾರ್ ಪ್ರಿಯಾಮಣಿ ದುನಿಯಾ ಸೂರಿ ನಿಧಿ ಸುಬ್ಬಯ್ಯ puneeth rajkumar priyamani nidhi subbaiah duniya soori


Click it and Unblock the Notifications











