»   » ಮುಂಗಾರುಮಳೆ ದಾಖಲೆ ಮುರಿಯುವ ಮಿಲನ

ಮುಂಗಾರುಮಳೆ ದಾಖಲೆ ಮುರಿಯುವ ಮಿಲನ

Subscribe to Filmibeat Kannada

ಪುನೀತ್ ರಾಜ್ ಕುಮಾರ್ ಹಾಗೂ ಪಾರ್ವತಿ ಮೆಲ್ಟನ್ ಅಭಿನಯದ ಪ್ರಕಾಶ್ ನಿರ್ದೇಶನದ ಮಿಲನ ಚಿತ್ರ ನಗರದ ಪಿವಿಆರ್ ಚಿತ್ರಮಂದಿರದಲ್ಲಿ ಒಂದು ವರ್ಷ ಪ್ರದರ್ಶನ ಕಂಡು ದಾಖಲೆ ನಿರ್ಮಿಸುವ ತವಕದಲ್ಲಿದೆ. ಈಗಾಗಲೇ ಮುಂಗಾರು ಮಳೆ ಚಿತ್ರ ಇಡೀ ದೇಶದಲ್ಲೇ ಯಾವ ಪಿವಿಆರ್ ಚಿತ್ರಮಂದಿರಗಳಲ್ಲೂ ಪ್ರಾದೇಶಿಕ ಭಾಷೆಯ ಚಿತ್ರ ನಿರ್ಮಿಸದ ದಾಖಲೆಯನ್ನು ನಿರ್ಮಿಸಿದೆ. ಸತತ 365 ದಿನಗಳ ಕಾಲ ಪ್ರದರ್ಶನ ಕಂಡ ಮೊತ್ತ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈಗ ಈ ಸಾಲಿಗೆ ಮಿಲನ ಸೇರಲಿದೆ. ನಗರದ ಪಿವಿಆರ್ ನಲ್ಲಿ ಇಂದಿಗೆ 322 ದಿನಗಳನ್ನು ಪೂರೈಸಿದೆ.

ಕನ್ನಡ ಚಿತ್ರದ ದಾಖಲೆಯನ್ನು ಕನ್ನಡ ಚಿತ್ರವೇ ಮುರಿಯುತ್ತಿರುವುದು ಒಳ್ಳೆಯ ಬೆಳವಣಿಗೆ. ಕಳೆದ ವರ್ಷ ಸೆಪ್ಟೆಂಬರ್ 14 ರಂದು ತೆರೆಕಂಡ ಮಿಲನ ಚಿತ್ರ, ಪಿವಿಆರ್ ಅಲ್ಲದೆ, ಮೆಜೆಸ್ಟಿಕ್ ಚಿತ್ರಮಂದಿರದಲ್ಲಿ ನೂರು ದಿನಗಳನ್ನು ಕಂಡಿದೆ. ಮೆಜೆಸ್ಟಿಕ್ ಚಿತ್ರಮಂದಿರದಿಂದ ಮೇನಕಾ ಚಿತ್ರಮಂದಿರಕ್ಕೆ ವರ್ಗಾವಣೆಗೊಂಡು ಅಲ್ಲಿ 25 ವಾರಗಳನ್ನು ಪೂರೈಸಿತು.ಇದಲ್ಲದೆ ಗುಲ್ಬರ್ಗಾ, ಮಂಗಳೂರು, ಮೈಸೂರು, ದಾವಣಗೆರೆ, ಬೆಳಗಾವಿ ಹಾಗೂ ಹುಬ್ಬಳ್ಳಿ ಮೊದಲಾದೆಡೆ ಸತತ 25 ವಾರ ಕಂಡಿತು.

ಸದ್ಯ ಪಿವಿಆರ್ ನಲ್ಲಿ ಬೆಳಗಿನ ಒಂದು ಪ್ರದರ್ಶನವನ್ನು ಕಾಣುತ್ತಿರುವ ಮಿಲನ, ಸುಂದರ ಸಾಂಸಾರಿಕ ಕಥೆ ಹೊಂದಿದ್ದು, ಅಬಾಲ ವೃದ್ಧರ ಮೆಚ್ಚುಗೆಯನ್ನು ಪಡೆದಿದೆ. ಇವತ್ತಿಗೂ ಶೇ. 75 ರಿಂದ 80 ರಷ್ಟು ಚಿತ್ರಮಂದಿರ ಹೌಸ್ ಫುಲ್ ಆಗಿರುತ್ತದೆ. ವಾರಾಂತ್ಯದಲ್ಲಿ ಇನ್ನು ಹೆಚ್ಚಿನ ಜನರು ಬರುತ್ತಾರೆ. ಕೌಟುಂಬಿಕ ಹಿನ್ನೆಲೆಯ ಚಿತ್ರವಾದರೂ ಯುವಜನಾಂಗ, ಸಾಫ್ಟ್ ವೇರ್ ಉದ್ಯಮಿಗಳು, ಪರಭಾಷಿಗರೂ ಚಿತ್ರವನ್ನು ನೋಡಿ ಮೆಚ್ಚಿದ್ದಾರೆ. ಚಿತ್ರದ ಹಾಡುಗಳು ಎಲ್ಲರ ಬಾಯಿಯಲ್ಲಿ ನಲಿಯುತ್ತಿದೆ. ಜಯಂತ್ ಕಾಯ್ಕಿಣಿ ಸಾಹಿತ್ಯ, ಮನೋಮೂರ್ತಿ ಸಂಗೀತ, ಪುನೀತ್ ಹಾಗು ಪಾರ್ವತಿ ಅಭಿನಯ ಚಿತ್ರ ಪ್ಲಸ್ ಪಾಯಿಂಟ್ ಆಗಿದೆ.

(ದಟ್ಸ್ ಸಿನಿವಾರ್ತೆ)

ಮಿಲನ ಚಿತ್ರದ ಸುಂದರ ಚಿತ್ರ ಸಂಪುಟ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada