For Quick Alerts
  ALLOW NOTIFICATIONS  
  For Daily Alerts

  ಪುನೀತ್ ಹೊಸ ಚಿತ್ರದ ಹೆಸರು ಯಾರೇ ಕೂಗಾಡಲಿ

  By Rajendra
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 'ಅಣ್ಣಾಬಾಂಡ್' ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಮೇ ಮೊದಲ ವಾರದಲ್ಲಿ ಚಿತ್ರ ತೆರೆಕಾಣುತ್ತಿದೆ. ಏತನ್ಮಧ್ಯೆ ಪುನೀತ್ ಹೊಸ ಚಿತ್ರಕ್ಕೂ ಮುಹೂರ್ತ ಫಿಕ್ಸ್ ಆಗಿದೆ. ಮೇ ಎರಡನೇ ವಾರದಲ್ಲಿ ಪುನೀತ್ ಹೊಸ ಚಿತ್ರ ಪ್ರಾರಂಭವಾಗಲಿದೆ.

  ಪುನೀತ್ ಅವರ ಹೊಸ ಚಿತ್ರಕ್ಕೆ 'ಯಾರೇ ಕೂಗಾಡಲಿ' ಎಂದು ಹೆಸರಿಡಲಾಗಿದೆ. ಈ ಶೀರ್ಷಿಕೆಯನ್ನು ಡಾ.ರಾಜ್ ಕುಮಾರ್ ಅವರ 'ಸಂಪತ್ತಿಗೆ ಸವಾಲ್' (1974) ಚಿತ್ರದ ಜನಪ್ರಿಯ "ಯಾರೇ ಕೂಗಾಡಲಿ ಊರೇ ಹೋರಾಡಲಿ ನಿನ್ನ ನೆಮ್ಮದಿಗೆ ಭಂಗವಿಲ್ಲ ಎಮ್ಮೇ ನಿನಗೇ ಸಾಟಿಯಿಲ್ಲ..." ಹಾಡಿನಿಂದ ಆಯ್ಕೆ ಮಾಡಿಕೊಂಡಿರುವುದು ವಿಶೇಷ.

  ತಮಿಳಿನ ಸೂಪರ್ ಹಿಟ್ ಚಿತ್ರ 'ಪೊರಾಲಿ' ರೀಮೇಕ್ ಆದ ಈ ಚಿತ್ರಕ್ಕೆ ಸಮುತ್ತಿರಕನಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯಕ್ಕೆ ಈ ಚಿತ್ರದ ಕಲಾವಿದರ ಹಾಗೂ ತಂತ್ರಜ್ಞರ ಆಯ್ಕೆ ಭರದಿಂದ ಸಾಗುತ್ತಿದೆ. ಈ ಚಿತ್ರ ರಾಜ್ ಕುಟುಂಬದ 'ವಜ್ರೇಶ್ವರಿ ಕಂಬೈನ್ಸ್' ಮತ್ತೊಂದು ಕೊಡುಗೆ. (ಏಜೆನ್ಸೀಸ್)

  English summary
  Power Star Puneeth Rajkumar new film titled as Yaare Koogadali, which is a remake fo Tamil super hit film Poraali. The movie will go on to sets from May second week and dircting by P Samuthirakani. More details about cast and crew are awaited

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X