For Quick Alerts
  ALLOW NOTIFICATIONS  
  For Daily Alerts

  ಬೆಳ್ಳಿತೆರೆಯ ಮೇಲೆ ಮತ್ತೆ ಶಿವಣ್ಣ ರಾಧಿಕಾ ಅನುಬಂಧ

  By Rajendra
  |

  ಕನ್ನಡ ಚಿತ್ರರಂಗದಲ್ಲಿ ತಂಗಿ ಪಾತ್ರಗಳಿಂದ ಮನೆಮಾತಾದವರು ರಾಧಿಕಾ. ಕನ್ನಡ ಬೆಳ್ಳಿಪರದೆ ಮೇಲೆ ತಂಗಿಯಾಗಿ ಮಿಂಚುತ್ತಿದ್ದ ತಾರಾ ಅಮ್ಮನ ಪಾತ್ರಗಳಿಗೆ ಬಡ್ತಿ ಪಡೆದ ಮೇಲೆ ತಂಗಿಯ ಪಾತ್ರಗಳಿಗೆ ರಾಧಿಕಾ ಜೀವ ತುಂಬಿದ್ದರು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ ಅಣ್ಣತಂಗಿ ಚಿತ್ರದಲ್ಲಿ ಅಭಿನಯಿಸಿದ ಮೇಲೆ ರಾಧಿಕಾ ಗಮನಸೆಳೆದಿದ್ದರು.

  "ಉತ್ತಮ ಕತೆ, ಚಿತ್ರಕತೆ ಸಿಕ್ಕಿದರೆ ಪ್ರೇಕ್ಷಕರು ಇಷ್ಟಪಡುವ ಪಾತ್ರಗಳಲ್ಲಿ ಅಭಿಯಿಸುವೆ. ನಾಯಕಿ ಪಾತ್ರಗಳನ್ನು ಪೋಷಿಸುವ ವಯಸ್ಸು ಈಗಿಲ್ಲ. ನನ್ನ ಒಂದು ಇಮೇಜ್‌ಗೆ ತಕ್ಕ ಚಿತ್ರ ಬಂದರೆ ಮತ್ತೆ ಬಣ್ಣಹಚ್ಚುವುದಾಗಿ ರಾಧಿಕಾ ಹೇಳಿದ್ದರು. ಈಗ ಅದಕ್ಕೆ ಕಾಲಾ ಕೂಡಿಬಂದಿದೆ ಎನ್ನಿಸುತ್ತದೆ. ಬೆಳ್ಳಿಪರದೆಯಲ್ಲಿ ಮತ್ತೆ ರಾಧಿಕಾ ಎರಡನೇ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಬಲವಾಗಿ ಹಬ್ಬಿದೆ.

  ರಾಧಿಕಾರನ್ನು ಮತ್ತೆ ಬೆಳ್ಳಿಪರದೆಗೆ ಕರೆತರುತ್ತಿವವರು ಓಂ ಸಾಯಿಪ್ರಕಾಶ್. ಈ ಬಾರಿಯೂ ರಾಧಿಕಾಗೆ ತಂಗಿಯ ಪಾತ್ರವನ್ನು ಹೆಣೆದಿರುವುದಾಗಿ ಅವರು ಹೇಳಿದ್ದಾರೆ. ಈ ಹಿಂದೆ ಅಣ್ಣತಂಗಿ ಅನುಬಂಧದ ಕತೆಯನ್ನು ತೋರಿಸಿದ್ದ ಸಾಯಿ ಈ ಬಾರಿಯೂ ಅಣ್ಣತಂಗಿಯನ್ನು ತಮ್ಮ ವಿಭಿನ್ನ ಕತೆಯ ಮೂಲಕ ಮತ್ತೆ ಒಂದು ಮಾಡುತ್ತಿದ್ದಾರೆ.

  ಅದೆಲ್ಲಾ ಸರಿ ಕನ್ನಡ ಚಿತ್ರರಂಗದಲ್ಲಿ ಇನ್ನೂ ಅಣ್ಣತಂಗಿ ಸೆಂಟಿಮೆಂಟಿನ ಚಿತ್ರಗಳನ್ನು ಪ್ರೇಕ್ಷಕರು ಎಷ್ಟರ ಮಟ್ಟಿಗೆ ಸಹಿಸುತ್ತಾರೆ ಎಂಬುದು ಪ್ರಶ್ನೆ. ಅದೇನೇ ಇರಲಿ ರಾಧಿಕಾ ಅವರನ್ನು ಸಾಯಿ ತವರಿಗೆ ಬಾ ತಂಗಿ ಎಂದು ಕರೆದಿರುವುದು ಗಾಂಧಿನಗರದಲ್ಲಿ ಗುಲ್ಲೆಬ್ಬಿಸಿದೆ. 'ಮನೆ ಮಗಳ'ನ್ನು ಪ್ರೇಕ್ಷಕ ಸ್ವೀಕರಿಸುತ್ತಾನೋ ಬಿಡುತ್ತಾನೋ ಗೊತ್ತಿಲ್ಲ.

  English summary
  If we are to go by Kannada actress Radhika, who has been staying from Kannada films for long time, may likely to comeback with a film on sister-brother sentiment. Interestingly, she is said to be teaming up with Hat Trick Hero Shivarajkumar. The movie is to be directed by Om Saiprakash, who has earlier made Anna Thangi with Shivarajkumar and Radhika in the leads.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X