ಉಪ್ಪಿ ಜೊತೆ ಕೈಜೋಡಿಸಿದ ಗೋಲ್ಡನ್ ಗರ್ಲ್ ರಮ್ಯಾ
ಈಗಾಗಲೆ ಒಂದು ಚಿತ್ರದಲ್ಲಿ ಉಪೇಂದ್ರ ಜೊತೆ ಗೋಲ್ಡನ್ ಗರ್ಲ್ ರಮ್ಯಾ ಅಭಿನಯಿಸಿದ್ದಾರೆ. ಅದು 'ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್' ಚಿತ್ರ . ಆದರೆ ಈ ಚಿತ್ರ ಇನ್ನೂ ಡಬ್ಬದಲ್ಲೇ ಮುದುಡಿ ಕುಳಿತಿದೆ. ಈಗ ರಿಯಲ್ ಸ್ಟಾರ್ ಉಪೇಂದ್ರ ಜೊತೆ ಮತ್ತೊಂದು ಚಿತ್ರಕ್ಕೆ ರಮ್ಯಾ ಸಹಿ ಹಾಕಿದ್ದಾರೆ.
ಚಿತ್ರದ ಹೆಸರು 'ಗಾಂಧಿನಗರ ಮಹಾತ್ಮೆ'. 'ಜೋಗಯ್ಯ' ನಿರ್ದೇಶಕ ಪ್ರೇಮ್ ಈ ಚಿತ್ರದ ಮತ್ತೊಬ್ಬ ನಟ. ಮಲಯಾಳಂನ ಯಶಸ್ವಿ ಚಿತ್ರ 'ಉದಯನಾನು ಥರಂ' ರೀಮೇಕ್ ಇದಾಗಿದೆ."ಮೂಲ ಚಿತ್ರವನ್ನು ಯಥಾವತ್ತಾಗಿ ಕನ್ನಡಕ್ಕೆ ಭಟ್ಟಿ ಇಳಿಸುತ್ತಿಲ್ಲ. ಚಿತ್ರಕತೆಯಲ್ಲಿ ಸ್ವಲ್ಪ ಬದಲಾವಣೆಗಳಲ್ಲೂ ಮಾಡಿಕೊಂಡು ತೆರೆಗೆ ತರುತ್ತಿದ್ದಾರೆ ಉಪೇಂದ್ರ" ಎಂದಿದ್ದಾರೆ ರಮ್ಯಾ.
ಈ ಕಾರಣಕ್ಕಾಗಿಯೇ 'ಗಾಂಧಿನಗರ ಮಹಾತ್ಮೆ'ಯನ್ನು ಒಪ್ಪಿಕೊಂಡೆ. ಚಿತ್ರದ ಕತೆ ಭಾಗಶಃ ಪೌರಾಣಿಕವಾಗಿದ್ದು ತಮ್ಮ ಪಾತ್ರ ದ್ರೌಪತಿಯನ್ನು ಹೋಲುತ್ತದೆ. ಈ ರೀತಿಯ ಚಿತ್ರದಲ್ಲಿ ಅಭಿನಯಿಸಬೇಕು ಎಂದು ಬಯಸಿದ್ದೆ. ಹಾಗಾಗಿ ಚಿತ್ರವನ್ನು ಒಪ್ಪಿರುವುದಾಗಿ ರಮ್ಯಾ ತಿಳಿಸಿದ್ದಾರೆ. ಸೆಪ್ಟೆಂಬರ್ 18ರ ಉಪ್ಪಿ ಬರ್ತ್‌ಡೇಯಂದು ಚಿತ್ರ ಸೆಟ್ಟೇರಲಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











