ಕಾಸರವಳ್ಳಿ ಚಿತ್ರದಲ್ಲಿ ನಟಿಸಲು ಸಿದ್ಧ, ಆದರೆ...ಪುನೀತ್

By Rajendra

ಕಾದಂಬರಿ ಆಧಾರಿತ ಚಿತ್ರಗಳಲ್ಲಿ ನಟಿಸಲು ನನ್ನದೇನು ತಕರಾರಿಲ್ಲ. ಹೊಸ ಹೊಸ ಪ್ರಯೋಗಗಳನ್ನು ಮಾಡಲು ನಾನು ಸದಾ ಸಿದ್ಧನಾಗಿದ್ದೇನೆ. ಕನ್ನಡದ ಪ್ರತಿಭಾವಂತ ನಿರ್ದೇಶಕ ಡಾ.ಗಿರೀಶ್ ಕಾಸರವಳ್ಳಿ ಚಿತ್ರಗಳಲ್ಲಿ ನಟಿಸಲು ನನ್ನದೇನು ಅಭ್ಯಂತರವಿಲ್ಲ. ಆದರೆ ನನ್ನ ಚಿತ್ರ ಎಲ್ಲರಿಗೂ ತಲುಪಬೇಕು ಎಂಬ ಮಹತ್ವಾಕಾಂಕ್ಷೆ ಇದೆ. ಕೇವಲ ಏಳು ಎಂಟು ಜನ ನೋಡುವುದು ನನಗಿಷ್ಟವಿಲ್ಲ ಎಂದಿದ್ದಾರೆ ಪುನೀತ್ ರಾಜ್ ಕುಮಾರ್.

ಸಿನಿಮಾ ಎಂಬುದು ಮನರಂಜನಾ ಮಾಧ್ಯಮ. ಚಿತ್ರದಿಂದ ಚಿತ್ರಕ್ಕೆ ನನ್ನ ಸಾಮರ್ಥ್ಯ ಸಹ ಹೆಚ್ಚಾಗುತ್ತಿದೆ. 'ರಾಜ್ ದಿ ಶೋ ಮ್ಯಾನ್' ಹಾಗೂ 'ಪೃಥ್ವಿ' ಚಿತ್ರಗಳು ಇನ್ನೂ ಉತ್ತಮವಾಗಿ ಮೂಡಿಬರಬೇಕಾಗಿತ್ತು. ಆದರೆ ನಿರ್ದೇಶಕರ ದೃಷ್ಟಿಕೋನವನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. 'ಪೃಥ್ವಿ'ಯಂತಹ ಉತ್ತಮ ಚಿತ್ರ ಕೊಟ್ಟ ಜಾಕಬ್ ವರ್ಗೀಸ್ ಜೊತೆ ಮತ್ತೊಮ್ಮೆ ಕೆಲಸ ಮಾಡಬೇಕೆಂದಿದ್ದೇನೆ.

'ಪೃಥ್ವಿ' ಚಿತ್ರವನ್ನು ನೋಡಿದ ಹೊರ ರಾಜ್ಯದ ನಿರ್ದೇಶಕರು ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಅತ್ಯುತ್ತಮ ಚಿತ್ರಗಳಲ್ಲಿ ಅಭಿನಯಿಸಬೇಕು ಎಂಬುದು ನನ್ನ ನಿಯಮ. ಚಿತ್ರದ ಬಜೆಟ್ ಮುಖ್ಯವಲ್ಲ. ಚಿತ್ರವನ್ನು ಹೇಗೆ ತಯಾರಿಸ ಬೇಕು ಎಂಬುದು ಮುಖ್ಯ. 'ಪೃಥ್ವಿ' ಒಂದು ಪ್ರಯೋಗಾತ್ಮಕ ಚಿತ್ರ ಎನ್ನಬಹುದು ಎಂದಿದ್ದಾರೆ ಪುನೀತ್.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X